ಗ್ರಾಹಕರಿಗೆ ಶಾಕ್‌ : ಶೀಘ್ರವೇ ಟಿವಿ ಚಾನಲ್‌ ಬೆಲೆ ಶೇ. 50 ರಷ್ಟು ಹೆಚ್ಚಳ

ದೆಹಲಿ : ನಿತ್ಯ ಬಳಕೆಯ ವಸ್ತುಗಳ ಬೆಲೆಯು ಗಗನಕ್ಕೇರುತ್ತಿದೆ. ಜನರು ಬೆಲೆ ಏರಿಕೆಯಿಂದಾಗಿ ತತ್ತರಿಸಿ ಹೋಗಿದ್ದಾರೆ. ಈ ನಡುವಲ್ಲೇ ಟಿವಿ ಚಾನಲ್‌ ವೀಕ್ಷಣಾ ವೆಚ್ಚ ಶೇ. 50 ರಷ್ಟು ಹೆಚ್ಚಲಿದೆ ಅನ್ನೋ ಶಾಕಿಂಗ್‌ ಸುದ್ದಿ ಹೊರಬಿದ್ದಿದೆ. ಅದರಲ್ಲೂ ಮನರಂಜನಾ ವಾಹಿನಿಗಳ ಬೆಲೆ ಗರಿಷ್ಠ ಮಟ್ಟದಲ್ಲಿ ಏರಿಕೆ ಕಾಣಲಿದೆ.

ಗ್ರಾಹಕರಿಗೆ ಟಿವಿ ಚಾನಲ್‌ ಗಳ ಗರಿಷ್ಟ ಬೆಲೆಗೆ ಮಿತಿ ವಿಧಿಸಿರುವ ದೂರಸಂಪರ್ಕ ನಿಯಂತ್ರಕ ಟ್ರಾಯ್‌ ವಿರುದ್ದ ಟಿವಿ ಚಾನಲ್‌ ಪ್ರಸಾರ ಕಂಪೆನಿಗಳು ಸುಪ್ರೀಂ ಕೋರ್ಟ್‌ ಮೊರೆ ಹೋಗಿವೆ. ಟ್ರಾಯ್‌ ಟಿವಿ ಚಾನಲ್‌ ಗಳ ಬೆಲೆಯಲ್ಲಿ ನವೆಂಬರ್‌ 1 ರಿಂದ 12 ರೂಪಾಯಿಗಳ ಮಿತಿಯನ್ನ ಅಳವಡಿಸಲು ಪ್ರಸ್ತಾಪಿಸಿತ್ತು. ಮನರಂಜನಾ ವಾಹಿನಿ ಚಂದದಾರರಿಗೆ 15 ರಿಂದ 30 ರೂ ವರೆಗೆ ಹೆಚ್ಚಳವಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದು ತನ್ನೂರಿಗೆ ಬಸ್ ಸಂಪರ್ಕ ಪಡೆದ 8 ನೇ ತರಗತಿ ಬಾಲಕಿ !

12 ರೂಪಾಯಿಗಳ ಮಿತಿಯನ್ನ ಅಳವಡಿಸಲು ಪ್ರಸ್ತಾಪನೆಯ ವಿರುದ್ಧ ಇಂಡಿಯನ್‌ ಬ್ರಾಡ್‌ ಕಾಸ್ಟಿಂಗ್‌ ಆಂಡ್‌ ಡಿಜಿಟಲ್‌ ಫೆಡರೇಷನ್‌ ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ. ಜೊತೆಗೆ ಟಿವಿ ಚಾನೆಲ್ ಚಂದಾದಾರಿಕೆಯ ದರದಲ್ಲಿ ಏರಿಕೆ ಪ್ರಸ್ತಾಪವನ್ನು ಮುಂದಿಟ್ಟಿದೆ. ಈ ಪ್ರಸ್ತಾವನ್ನು ಸುಪ್ರೀಂಕೋರ್ಟ್ ಸಮ್ಮತಿಸಿದರೆ ಬಳಕೆದಾರರಿಗೆ ಡಿಸೆಂಬರ್ ನಿಂದ ಕೇಬಲ್ ಟಿವಿ ಚಂದಾದಾರಿಕೆ ದರದಲ್ಲಿ ಶೇ. 50ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ; ಚಿನ್ನ ಕಳ್ಳ ಸಾಗಾಣಿಕೆ ಆರೋಪಿ ಸ್ವಪ್ನಾ ಸುರೇಶ್‌ ಬಿಡುಗಡೆ : ಕೇರಳ ಸಿಎಂಗೆ ಉರುಳಾಗುತ್ತಾ ಪ್ರಕರಣ ?

(Shock for customers: Soon the TV channel will be priced at 1 per cent. Increase by 50%)

Comments are closed.