ಮುಜಾಫರ್‌ನಗರ : ಅಪ್ರಾಪ್ತ ಯುವತಿಯೋರ್ವಳ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿರುವ ಯುವಕರಿಬ್ಬರು ವಿಡಿಯೋ ಚಿತ್ರೀಕರಿಸಿ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಘಟನೆ ಮುಜಾಫರ ನಗರದ ಭೋಪಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆರೋಪಿಗಳಾಗಿರುವ ಶುಭಂ ಮತ್ತು ಆಶಿಶ್ ಎಂಬವರೇ ಅತ್ಯಾಚಾರದ ಆರೋಪ ಹೊತ್ತವರು. 17 ವರ್ಷದ ಬಾಲಕಿಗೆ ಹಣ್ಣು ನೀಡುವ ಆಮಿಷವೊಡ್ಡಿ ನಿಂಬೆ ಮರವಿದ್ದ ತೋಟಕ್ಕೆ ಕರೆದೊಯ್ದಿದ್ದಾರೆ. ನಂತರ ಇಬ್ಬರೂ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ. ಈ ವೇಳೆಯಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದರು.
ನಂತರದಲ್ಲಿ ಆರೋಪಿಗಳು ಯುವತಿಗೆ ಬೆದರಿಕೆಯೊಡ್ಡಿದ್ದಾರೆ. ಅಲ್ಲದೇ ನಂತರದಲ್ಲಿ ಯುವತಿಯ ವಿಡಿಯೋವನ್ನು ಸಾಮಾಜಿಕ ಜಾಲತಾದಲ್ಲಿ ಹರಿಬಿಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿಗಳನ್ನು ಭೋಫಾ ಠಾಣೆಯ ಪೊಲೀಸರು ಬಂಧಿಸಿದ್ದಿ. ವಿಚಾರಣೆಯನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ : ಮಂಗಳೂರು ಡಯಟ್‌ನಲ್ಲಿ ತಲವಾರು ದಾಳಿ : ಆರೋಪಿ ಕುಂದಾಪುರದ ನವೀನ್ ಅರೆಸ್ಟ್
ಇದನ್ನೂ ಓದಿ : ರೇವ್ ಪಾರ್ಟಿ ಮೇಲೆ ಪೊಲೀಸರ ದಾಳಿ : ಡ್ರಗ್ಸ್ ಸೇವಿಸಿ, ಅರೆನಗ್ನ ಸ್ಥಿತಿಯಲ್ಲಿ ಯುವತಿಯರ ಡ್ಯಾನ್ಸ್
( Uttara Pradesh Gang Rape Video Shared On Social Media Arrest 2 Persons )