ತಮಿಳುನಾಡಿನಲ್ಲಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಭಾರತ ಮಾತೆಯ ವೀರ ಪುತ್ರ, ಭಾರತೀಯ ಸೇನೆಯ ಅಪ್ರತಿಮ ಸೈನಿಕ ಬಿಪಿನ್ ರಾವತ್ (CDS General Bipin Rawat ) ಬಾರದ ಲೋಕಕ್ಕೆ ತೆರಳಿದ್ದಾರೆ. ಭೂ ಸೇನೆ, ವಾಯು ಸೇನೆ ಹಾಗೂ ನೌಕಾ ಸೇನೆಯ ಮುಂದಾಳತ್ವ ವಹಿಸಿದ್ದ ಬಿಪಿನ್ ರಾವತ್ ಕಠಿಣ ಸಂದರ್ಭಗಳಲ್ಲಿ ತೆಗೆದುಕೊಂಡ ನಿರ್ಧಾರಗಳು ಚೀನಾ, ಪಾಕ್ನಂತಹ ಶತ್ರುರಾಷ್ಟ್ರಗಳಿಗೆ ತಕ್ಕ ಪಾಠ ಕಲಿಸಿತ್ತು.
ಶತ್ರು ರಾಷ್ಟ್ರಗಳಿಗೆ ಖಡಕ್ ಮಾತಿನ ಮೂಲಕವೇ ಎಚ್ಚರಿಕೆ ನೀಡುತ್ತಿದ್ದ ಬಿಪಿನ್ ರಾವತ್ ಸರ್ಜಿಕಲ್ ಸ್ಟ್ರೈಕ್, ಬಾಲಾಕೋಟ್ ದಾಳಿಯ ಸಂದರ್ಭಗಳಲ್ಲಿ ದೇಶದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸಮಯೋಚಿತ ನಿರ್ಧಾರಗಳನ್ನು ಕೈಗೊಂಡಿದ್ದನ್ನು ಯಾರೂ ಮರೆಯುವಂತಿಲ್ಲ. ದೇಶದ ಮೂರೂ ಪಡೆಗಳ ನಾಯಕನಾಗಿ ದೇಶವನ್ನು ಸಮರ್ಥವಾಗಿ ಮುನ್ನೆಡಿಸಿದ್ದ ಬಿಪಿನ್ ರಾವತ್ ಇದೀಗ ಇತಿಹಾಸ ಪುಟಗಳಲ್ಲಿ ಭದ್ರವಾಗಿ ನೆಲೆಯೂರಿದ್ದಾರೆ. ಲಡಾಖ್ ಪ್ರಾಂತ್ಯದಲ್ಲಿ ನರಿ ಬುದ್ಧಿ ಪ್ರದರ್ಶಿಸುತ್ತಿದ್ದ ಚೀನಾಗೆ ಸೇನೆಯ ಮೂಲಕ ತಕ್ಕ ಪಾಠ ಕಲಿಸಿದ್ದ ಬಿಪಿನ್ ರಾವತ್ ಸಾಕಷ್ಟು ಬಾರಿ ತಮ್ಮ ಭಾಷಣಗಳಲ್ಲಿ ಚೀನಾಗೆ ಖಡಕ್ ಸಂದೇಶವನ್ನು ರವಾನಿಸಿದ್ದರು. ಕಳೆದ ತಿಂಗಳು ಕೊನೆಯ ಬಾರಿಗೆ ಚೀನಾದ ವಿರುದ್ಧ ಗುಡುಗಿದ್ದ ಬಿಪಿನ್ ರಾವತ್ ಭಾರತದ ಮೊದಲ ಶತ್ರು ಪಾಕಿಸ್ತಾನವಲ್ಲ ಚೀನಾ ಎಂದು ಹೇಳಿಕೆ ನೀಡಿದ್ದರು.
ಭಾರತದ ಮೊದಲ ಶತ್ರು ಪಾಕಿಸ್ತಾನವಲ್ಲ. ನಮ್ಮ ದೊಡ್ಡ ಶತ್ರು ಚೀನಾ. ಚೀನಾದ ಕಾನೂನುಗಳು ಭಾರತದ ಭೂಮಿಯನ್ನು ಅತಿಕ್ರಮಣ ಮಾಡಲು ಅವಕಾಶ ನೀಡಿದರೆ ಅಲ್ಲಿ ಸ್ಪರ್ಧೆ ಇರುತ್ತದೆ. ಚೀನಾ ಭಾರತದ ವಿರುದ್ಧ ಮಾನಸಿಕ ತಂತ್ರಗಳನ್ನು ಬಳಕೆ ಮಾಡುತ್ತಿದೆ. ಆದರೆ ನಾವು ಯಾವುದೇ ಕಾರಣಕ್ಕೂ ಒತ್ತಡಕ್ಕೆ ಒಳಗಾಗಬಾರದು. ನಮ್ಮನ್ನು ಒತ್ತಡಕ್ಕೆ ಸಿಲುಕಿಸುವುದೇ ಚೀನಾದ ತಂತ್ರವಾಗಿದೆ. ಆದರೆ ಈ ಜಾಲದಲ್ಲಿ ನಾವೆಂದು ಬೀಳಬಾರದು ಎಂದು ಹೇಳಿದ್ದರು.
ಭಾರತೀಯ ವಾಯುಪಡೆಯ ಎಂಐ 17 ವಿ 5 ಹೆಲಿಕಾಪ್ಟರ್ ತಮಿಳುನಾಡಿನ ಕುನೂರ್ ಬಳಿಯ ನೀಲಗರಿ ಅರಣ್ಯ ಪ್ರದೇಶದಲ್ಲಿ ನಿನ್ನೆಯಷ್ಟೇ ಪತನಗೊಂಡಿದೆ. 14 ಮಂದಿಯನ್ನು ಹೊತ್ತು ಸಾಗುತ್ತಿದ್ದ ಹೆಲಿಕಾಪ್ಟರ್ ಪತನಗೊಂಡ ಪರಿಣಾಮ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಧರ್ಮ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಮಂದಿ ಹುತಾತ್ಮರಾಗಿದ್ದಾರೆ.
ಇದನ್ನು ಓದಿ: Bipin Rawat’s Helicopter Crash :ತಮಿಳುನಾಡಿನ ಕುನೂರಿನಲ್ಲಿ ಪತನಗೊಂಡ ಸೇನಾ ಹೆಲಿಕಾಪ್ಟರ್ನ ವಿಡಿಯೋ ವೈರಲ್..!
ಇದನ್ನೂ ಓದಿ : Mettupalayam : ಸೇನಾ ಕಾಪ್ಟರ್ ದುರಂತ: ಅಪಘಾತಕ್ಕೀಡಾದ ಹುತಾತ್ಮ ಯೋಧರ ಪಾರ್ಥೀವ ಶರೀರ ಸಾಗಿಸುತ್ತಿದ್ದ ಶವವಾಹನ
ಇದನ್ನೂ ಓದಿ : 10 Years Sentence : ಬೈಂದೂರು ಅಪ್ರಾಪ್ತ ನಾದಿನಿ ಅತ್ಯಾಚಾರ ಪ್ರಕರಣ : 10 ವರ್ಷ ಶಿಕ್ಷೆ, 20 ಸಾವಿರ ದಂಡ
India’s enemy number 1 is China, not Pakistan: CDS General Bipin Rawat last remarks on LAC row at Times Now Summit 2021