Power Cut : ನಾಳೆಯಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ವಿದ್ಯುತ್​ ವ್ಯತ್ಯಯ..!

ಬೆಂಗಳೂರಿನ ಹಲವು ಏರಿಯಾಗಳಲ್ಲಿ ಡಿಸೆಂಬರ್​ 10ರಿಂದ 13ರವರೆಗೆ ವಿದ್ಯುತ್​ ವ್ಯತ್ಯಯ(Power Cut) ಉಂಟಾಗಲಿದೆ. ವರದಿಗಳ ಪ್ರಕಾರ ಜಿಜಿ ಲಾಯಲ್​, ಶಾಂತಿ ಲೇಔಟ್​ ಎಂಟರೆನ್ಸ್​, ಕೋಣಪ್ಪನ ಅಗ್ರಹಾರ , ದೊಡ್ಡ ತೋಗೂರು ಸೇರಿದಂತೆ ಹಲವೆಡೆ ಈ ದಿನಗಳಲ್ಲಿ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ ಎನ್ನಲಾಗಿದೆ.


ದೊಡ್ಡ ತೋಗೂರಿನ 5, 6 ಹಾಗೂ 7ನೇ ಮುಖ್ಯರಸ್ತೆ ಮತ್ತು 9ನೇ ಕ್ರಾಸ್​ ರಸ್ತೆಯಲ್ಲಿ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ. ಇನ್ನುಳಿದಂತೆ ಆದರ್ಶ ಪಾಮ್​ ಅಪಾರ್ಟ್​ಮೆಂಟ್ಸ್​ ರಸ್ತೆ, 11ನೇ ಬ್ಲಾಕ್​ ಬಿಡಿಎ ಲೇ ಔಟ್​, ರಾಯಲ್​ ಪಾರ್ಕ್​ ರೆಸಿಡೆನ್ಸಿ ಸೇರಿದಂತೆ ಹಲವೆಡೆ ನಾಳೆ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ.


ಇನ್ನು ಶನಿವಾರ ಅಂದರೆ ಡಿಸೆಂಬರ್​ 11ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ವೇಳೆಯಲ್ಲಿ ಮೈಕೋ ಲೇಔಟ್​, ಬೇಗೂರು ಹಾಗೂ ಹೊಂಗಸಂದ್ರದ ಜನತೆಗೆ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ ಎಂದು ತಿಳಿದುಬಂದಿದೆ.


ಡಿಸೆಂಬರ್​ 13ರಂದು ಕೆಆರ್​ಬಿ ಲೇ ಔಟ್​​ 4ನೇ ಮುಖ್ಯರಸ್ತೆ, ನಾರಾಯಣ ನಗರ 2ನೇ ಬ್ಲಾಕ್​ , ಕೆಎಲ್​ವಿ ಲೇಔಟ್​​​ ಸೇರಿದಂತೆ ಹಲವೆಡೆ ಪವರ್​ ಕಟ್​ ಆಗಲಿದೆ.
ಕೆಪಿಟಿಸಿಎಲ್​ ಹಾಗೂ ಬೆಸ್ಕಾಂ ನಿರ್ವಹಣಾ ಕಾರ್ಯದಲ್ಲಿ ತೊಡಗಿಕೊಂಡಿರುವ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಸಹಕರಿಸುವಂತೆ ಬೆಂಗಳೂರು ಜನತೆಯಲ್ಲಿ ಬೆಸ್ಕಾಂ ಮನವಿ ಮಾಡಿದೆ. ಬೆಳಗ್ಗೆ 10ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ.

ನಿರ್ವಹಣೆ ಹೆಸರಿನಲ್ಲಿ ಬೆಸ್ಕಾಂ ಪದೇ ಪದೇ ಈ ರೀತಿ ವಿದ್ಯುತ್​ ವ್ಯತ್ಯಯ ಮಾಡುತ್ತಿರೋದು ಬೆಂಗಳೂರು ಜನತೆಯ ಕಣ್ಣು ಕೆಂಪಗಾಗಿಸಿದೆ. ವಿದ್ಯುತ್​ಗೆ ಪರ್ಯಾಯ ಮಾರ್ಗವೇ ಇಲ್ಲದ ಕೆಲವರು ವರ್ಕ್​ ಫ್ರಾಂ ಹೋಂ ಮಾಡೋದು ಹೇಗಪ್ಪ ಎಂಬ ಚಿಂತೆಯಲ್ಲಿದ್ದಾರೆ. ಇತ್ತ ವಿದ್ಯುತ್​​ ಸಂಚಾರವನ್ನೇ ನಂಬಿರುವ ಅನೇಕ ಫ್ಯಾಕ್ಟರಿ ಮಾಲೀಕರು ಪದೇ ಪದೇ ಪವರ್​ ಕಟ್​ ಮಾಡಿದರೆ ನಮ್ಮ ಜೀವನ ಹೇಗೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

Power Cut in several parts in Bengaluru till December 13

ಇದನ್ನು ಓದಿ : BBMP Covid Bed Tariffs : ಖಾಸಗಿ ಆಸ್ಪತ್ರೆಗಳ ಕೊರೊನಾ ಸುಲಿಗೆಗೆ ಬಿತ್ತು ಬ್ರೇಕ್: ಬಿಬಿಎಂಪಿ ಖಡಕ್ ರೂಲ್ಸ್

ಇದನ್ನೂ ಓದಿ : Egg Controversy : ಬೊಮ್ಮಾಯಿಗೆ ಮೊಟ್ಟೆ ಸಂಕಟ: ಲಿಂಗಾಯತರಿಂದಲೇ ಸರ್ಕಾರ ಪತನ ಎಂದ ಸ್ವಾಮೀಜಿ

Comments are closed.