ನವದೆಹಲಿ: ಖಾಸಗಿ ಪಾಲುದಾರರ ಜತೆಗೂಡಿ ಭಾರತೀಯ ರೈಲು Indian Railways notify Station) ನಿಲ್ದಾಣಗಳ ಅಭಿವೃದ್ಧಿ ಮತ್ತು ಮರುಅಭಿವೃದ್ಧಿ ಮಾಡಲು ಉದ್ದೇಶಿಸಿರುವ ಸರ್ಕಾರ, ಇದಕ್ಕೆ ತಗುಲುವ ವೆಚ್ಚವನ್ನು ಪ್ರಯಾಣಿಕರಿಂದಲೇ ವಸೂಲು ಮಾಡಲು ಬಯಸಿದೆ. ನಿಲ್ದಾಣ ಅಭಿವೃದ್ಧಿ ಶುಲ್ಕ (SDF) ಅಥವಾ ಬಳಕೆದಾರರ ಶುಲ್ಕ ವಿಧಿಸುವ ಪ್ರಸ್ತಾವನೆಗೆ ರೈಲ್ವೆ ಮಂಡಳಿ ಸಮ್ಮತಿಸಿದೆ. ಈ ಶುಲ್ಕವನ್ನು ಆಗಮನ ಮತ್ತು ನಿರ್ಗಮನ ಎರಡೂ ನಿಲ್ದಾಣಗಳಿಗೆ ಹಂಚಿಕೆ ಆಗುತ್ತದೆ. ಈ ಶುಲ್ಕವು ಮೊದಲು ಆಯ್ದ 50 ನಿಲ್ದಾಣಗಳಲ್ಲಿ ಜಾರಿಗೆ ಬರಲಿವೆ. 10 ರೂಪಾಯಿಯಿಂದ 50 ರೂಪಾಯಿಯವರೆಗೂ ಈ ಶುಲ್ಕ ಇರಲಿದೆ. ಎಸಿ ದರ್ಜೆಗೆ 50 ರೂ., ಸ್ಲೀಪರ್ ಕ್ಲಾಸ್ಗೆ 25 ರೂ. ಮತ್ತು ಕಾಯ್ದಿರಿಸದ ಟಿಕೆಟ್‌ಗಳಿಗೆ 10 ರೂ. ಎಂಬ ಮೂರು ಹಂತದ ವರ್ಗೀಕರಣವನ್ನು ಒಳಗೊಂಡಿದೆ ಎಂದು ಮಂಡಳಿ ಹೇಳಿದೆ.
ಈ ಶುಲ್ಕವು ಸಬ್ ಅರ್ಬನ್ ರೈಲುಗಳಿಗೆ (ಲೋಕಲ್ ರೈಲು) ಅನ್ವಯ ಆಗುವುದಿಲ್ಲ. ಈ ಶುಲ್ಕ ಸಂಗ್ರಹಣ ದಿನಾಂಕವನ್ನು ಆಯಾಯ ರೈಲ್ವೆ ವಲಯಗಳು ನಿರ್ಧರಿಸಲಿವೆ. ಇದಕ್ಕೂ ಮೂರು ತಿಂಗಳು ಮೊದಲು ಈ ಬಗ್ಗೆ ವಾಣಿಜ್ಯ ವಿಭಾಗಕ್ಕೆ ಮಾಹಿತಿ ನೀಡಬೇಕಾಗುತ್ತದೆ. ಏಕೆಂದರೆ ಟಿಕೆಟ್ ದರವನ್ನು ವಾಣಿಜ್ಯ ವಿಭಾಗ ಪರಿಷ್ಕರಣೆ ಮಾಡಿಕೊಳ್ಳಬೇಕು. ಅಭಿವೃದ್ಧಿಗೆ ಗುರುತಿಸಲಾದ ನಿಲ್ದಾಣಗಳಲ್ಲಿ ಪ್ಲಾಟ್ಫಾರಂ ಟಿಕೆಟ್ ದರ 10 ರೂ.ಗೆ ಏರಿಕೆ ಆಗಲಿದೆ ಎಂದು ರೈಲ್ವೆ ಮಂಡಳಿ ತಿಳಿಸಿದೆ. ರೈಲು ನಿಲ್ದಾಣಗಳ ಅಭಿವೃದ್ಧಿಗಾಗಿ ಅದರ ಬಳಕೆದಾರರಿಂದ ಶುಲ್ಕ ಸಂಗ್ರಹಿಸುವ ಪ್ರಸ್ತಾವನೆಗೆ ರೈಲ್ವೆ ಮಂಡಳಿ ಸಮ್ಮತಿಸಿದೆ. ಇದು 50 ನಿಲ್ದಾಣಗಳಲ್ಲಿ ಮೊದಲು ಜಾರಿ ಆಗಲಿದೆ.
ವಿಮಾನ ಪ್ರಯಾಣಿಕರ ಟಿಕೆಟ್ ದರದಲ್ಲೇ ಇತರ ಶುಲ್ಕಗಳು ಒಳಗೊಂಡಿರುತ್ತದೆ. ಇದೇ ಮಾದರಿಯನ್ನು ರೈಲ್ವೆ ಇಲಾಖೆ ಅನುಸರಿಸಲು ಬಯಸಿದೆ. ಅಂದರೆ, ಬೆಂಗಳೂರಿನಿಂದ ಮುಂಬೈಗೆ ಟಿಕೆಟ್ ಬುಕಿಂಗ್ ಮಾಡಿಸಿದರೆ ಪ್ರಯಾಣದ ದರದ ಜತೆಗೆ ಈ ಅಭಿವೃದ್ಧಿ ಶುಲ್ಕವೂ ಸೇರಿಕೊಳ್ಳುತ್ತದೆ. ಪ್ರಯಾಣಿಕರು ಸಣ್ಣ ನಿಲ್ದಾಣದಿಂದ ದೆಹಲಿ ಅಥವಾ ಮುಂಬೈನಂತಹ ನಗರಕ್ಕೆ ಪಯಣಿಸಿದರೆ ಎಸ್ಡಿಎಫ್ ಶೇ. 50ರಷ್ಟು ಮಾತ್ರ ಇರುತ್ತದೆ ಎಂದು ರೈಲ್ವೆ ಮಂಡಳಿ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: Buy Gold in Google Pay: ಗೂಗಲ್ ಪೇ ಆ್ಯಪ್‌ನಲ್ಲೇ ಚಿನ್ನ ಖರೀದಿಸಬಹುದು, ಮಾರಬಹುದು! ಹೇಗೆ ಎಂಬ ವಿವರ ಇಲ್ಲಿದೆ
ಇದನ್ನೂ ಓದಿ: real estate 11e sketch: ಕೃಷಿ ಭೂಮಿಯನ್ನು ಸೈಟ್ ಆಗಿ ಪರಿವರ್ತಿಸುವ, ಸೈಟ್ ಖರೀದಿಸುವ ಮುನ್ನ ಗಮನಿಸಲೇಬೇಕಾದ ಅಂಶಗಳಿವು
(Indian Railways notify Station Development Fee tickets to become costlier from redeveloped stations)