Dog Birthday Arrest : ನಾಯಿಯ ಹುಟ್ಟುಹಬ್ಬ ಆಚರಿಸಿದ್ದಕ್ಕೆ 3 ಮಂದಿಯ ಬಂಧನ

ಅಹಮದಾಬಾದ್ : ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ರೋಗ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿ ಮಾಡಲಾಗುತ್ತಿದೆ. ಸಾಂಕ್ರಾಮಿಕ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ತಮ್ಮ ಸಾಕು ನಾಯಿಯ ಹುಟ್ಟುಹಬ್ಬದ ಆಚರಿಸಿದ ಆರೋಪದ ಹಿನ್ನೆಲೆಯಲ್ಲಿ ಮೂವರು ಸಹೋದರನ್ನು ಪೊಲೀಸರು ಬಂಧಿಸಿದ (Dog Birthday Arrest) ಘಟನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದಿದೆ.

ಅಹಮದಾಬಾದ್ ನ ಕೃಷ್ಣನಗರದ ನಿವಾಸಿಗಳಾದ ಚಿರಾಗ್ ಪಟೇಲ್ ಮತ್ತು ಅವರ ಸಹೋದರ ಉರ್ವೀಶ್ ಪಟೇಲ್, ತಮ್ಮ ಸ್ನೇಹಿತ ದಿವ್ಯೇಶ್ ಮೆಹಾರಿಯಾ ಅವರೊಂದಿಗೆ ಭಾರತೀಯ ಸ್ಪಿಟ್ಜ್ ಅಬ್ಬಿ ಅವರ ಸಾಕು ನಾಯಿಯ ಹುಟ್ಟುಹಬ್ಬದ ಆಚರಣೆಯನ್ನು ಮಾಡಿದ್ದಾರೆ. ಇದಕ್ಕೆ ಹಲವರನ್ನು ಆಹ್ವಾನಿಸಿ ಭರ್ಜರಿ ಪಾರ್ಟಿಯನ್ನೂ ಆಯೋಜಿಸಿದ್ದಾರೆ. ಅಪಾರ್ಟ್‌ಮೆಂಟ್‌ನಲ್ಲಿ ತಮ್ಮ ಸ್ನೇಹಿತರ ಜೊತೆಗೆ ಪಾರ್ಟಿ ಮಾಡುವ ವೇಳೆಯಲ್ಲಿ ಕೊರೊನಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಅನ್ನೋ ಆರೋಪ ಕೇಳಿಬಂದಿತ್ತು.

ಇಷ್ಟೇ ಅಲ್ಲಾ ನಾಯಿಯ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಜನಪ್ರಿಯ ಜಾನಪದ ಗಾಯಕರೊಬ್ಬರು ಪ್ರದರ್ಶನ ನೀಡಿದ್ದು, ಕೇಕ್‌ ಕತ್ತರಿಸಿ ಸಂಭ್ರಮಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ದಂಡ ಸಂಹಿತೆ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ನಿಕೋಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಚಿರಾಗ್ ಪಟೇಲ್, ಉರ್ವೀಶ್ ಪಟೇಲ್ ಮತ್ತು ದಿವ್ಯೇಶ್ ಮೆಹಾರಿಯಾ ಅವರನ್ನು ಬಂಧಿಸಲಾಗಿದೆ ಎಂದು ಗುಜರಾತ್‌ ಮಾಧ್ಯಮಗಳು ವರದಿ ಮಾಡಿವೆ.

ಗುಜರಾತ್‌ನಲ್ಲಿ ಕೊರೊನಾ ಸೋಂಕ್ರೀಯ ಪ್ರಕರಣ ಸಂಖ್ಯೆ ಹೆಚ್ಚುತ್ತಿದೆ. ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಅಹಮದಾಬಾದ್ ನಗರದಲ್ಲಿ 8,700 ಸಕ್ರಿಯ ಪ್ರಕರಣಗಳಿವೆ. ಕೊರೊನಾ ನಿಯಂತ್ರಣಕ್ಕೆ ಈಗಾಗಲೇ ಗುಜರಾತ್‌ ಸರಕಾರ ನೈಟ್‌ ಕರ್ಪ್ಯೂ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಅಲ್ಲದೇ ರಾಜಕೀಯ, ಸಾಮಾಜಿಕ ಕಾರ್ಯಕ್ರಮ ಆಯೋಜನೆಗೆ ನಿರ್ಬಂಧ ಹೇರಿದೆ.

ಲೈಸೆನ್ಸ್‌ ಇಲ್ಲದೇ ಇನ್ಮುಂದೆ ಮನೆಯಲ್ಲಿ ನಾಯಿ ಸಾಕುವಂತಿಲ್ಲ; ಕದ್ದು ಮುಚ್ಚಿ ಸಾಕಿದ್ರೆ ಬೀಳುತ್ತೆ ಭಾರೀ ದಂಡ

ಬೆಂಗಳೂರು : ಮನೆಯಲ್ಲಿ ನಾಯಿಗಳನ್ನು ಸಾಕುವುದಕ್ಕೆ ಬಹುತೇಕರು ಇಷ್ಟ ಪಡ್ತಾರೆ. ತಮ್ಮಿಷ್ಟ ನಾಯಿಗಳನ್ನು ಸಾಕುವುದರ ಜೊತೆಗೆ ಡಾಗ್‌ ಶೋಗಳಲ್ಲಿಯೂ ಭಾಗವಹಿಸಿ ಸಂಭ್ರಮಿಸುತ್ತಾರೆ. ಬಹುತೇಕ ಮನೆಗಳಲ್ಲಿ ನಾಯಿ ಇದ್ದೇ ಇರುತ್ತೆ. ಆದ್ರೆ ಇನ್ಮುಂದೆ ನಿಮ್ಮಿಷ್ಟದಂತೆ ಮನೆಯಲ್ಲಿ ನಾಯಿಯನ್ನು ಸಾಕುವಂತಿಲ್ಲ. ನೀವೇನಾದ್ರೂ ನಾಯಿ ಸಾಕಲೇ ಬೇಕು ಅಂತಿದ್ರೆ ಕಡ್ಡಾಯವಾಗಿ ಪಶು ವೈದ್ಯಾಧಿಕಾರಿಗಳಿಂದ ಲೈಸೆನ್ಸ್‌ ಪಡೆಯಬೇಕು.

ಇಷ್ಟು ದಿನ ಮನೆಯಲ್ಲಿ ತಮ್ಮಿಷ್ಟದ ನಾಯಿಗಳನ್ನು ಸಾಕಬಹುದಾಗಿತ್ತು. ಇನ್ನೂ ಹಲವರು ನಾಯಿ ಸಾಕುವುದನ್ನು ಫ್ಯಾಷನ್‌ ಮಾಡಿಕೊಂಡಿದ್ರೆ, ಇನ್ನೂ ಕೆಲವು ಉದ್ಯೋಗ ವನ್ನಾಗಿಸಿಕೊಂಡು ಲಕ್ಷಾಂತರ ರೂಪಾಯಿ ಹಣ ಗಳಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿದೇಶಿ ತಳಿಯ ನಾಯಿಗಳು ಕೂಡ ಸಿಲಿಕಾನ್‌ ಸಿಟಿಗೆ ಎಂಟ್ರಿ ಕೊಟ್ಟಿವೆ. ಸಾವಿರ ರೂಪಾಯಿ ಯಿಂದ ಹಿಡಿದು ಲಕ್ಷಾಂತರ ರೂಪಾಯಿ ಬೆಲೆಯ ನಾಯಿಗಳು ಕಾಣ ಸಿಗುತ್ತವೆ. ಆದ್ರೆ ಇನ್ಮುಂದೆ ನಿಮಗೆ ಇಷ್ಟ ಬಂದ ಹಾಗೆ ನಾಯಿಯನ್ನು ಸಾಕುವಂತಿಲ್ಲ. ಮನೆಯಲ್ಲಿ ಒಂದು ನಾಯಿ ಸಾಕಬೇಕು ಅನಿಸಿದ್ದರೂ ಕೂಡ ಕಡ್ಡಾಯವಾಗಿ ಲೈಸೆನ್ಸ್‌ ಪಡೆಯಬೇಕಾಗಿದೆ. ಅಷ್ಟೇ ಅಲ್ಲಾ ಅಪಾರ್ಟ್‌ಮೆಂಟ್‌ಗಳಲ್ಲಿ ಮನುಷ್ಯನ ಮೇಲೆ ದಾಳಿ ಮಾಡಬಹುದಾದ ಆಕ್ರಮಣಕಾರಿ ತಳಿಯ ನಾಯಿಗಳನ್ನು ಸಾಕುವಂತಿಲ್ಲ. ಲೈಸೆನ್ಸ್‌ ಪಡೆದ ನಾಯಿಗಳನ್ನು ಸಾರ್ವಜನಿಕ ಸ್ಥಳಗಳಿಗೆ ಕರೆದೊಯ್ದರು ಕೂಡ ಮಾಲೀಕರು ಸರಪಳಿಯನ್ನು ಹಾಕಿರಲೇ ಬೇಕು. ಒಂದೊಮ್ಮೆ ಮಲ ವಿಸರ್ಜನೆ ಮಾಡಿದ್ರೆ ಅದನ್ನು ತೆರವುಗೊಳಿಸುವ ಜವಾಬ್ದಾರಿಯೂ ಮಾಲೀಕರದ್ದೇ ಆಗಿರುತ್ತೆ. 12 ವರ್ಷ ಮೇಲ್ಪಟ್ಟ ಹೆಣ್ಣು ನಾಯಿಗಳಿಗೆ ಕಡ್ಡಾಯವಾಗಿ ಸಂತಾನಹರಣ ಶಸ್ತ್ರ ಚಿಕಿತ್ಸೆಯನ್ನು ಮಾಡಲೇ ಬೇಕೆಂಬ ನಿಯಮ ಜಾರಿಗೆ ಬರಲಿದೆ.

ಲೈಸೆನ್ಸ್‌ ಪಡೆದಿರುವ ನಾಯಿಗಳಿಗೆ ಮೈಕ್ರೋಚಿಪ್‌ ಅಳವಡಿಕೆ ಮಾಡಲಾಗುತ್ತಿದ್ದು, ಈ ಮೂಲಕ ನಾಯಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಪಡೆಯುವ ಕಾರ್ಯವನ್ನು ಮಾಡಲಾಗುತ್ತದೆ. ಮಾತ್ರವಲ್ಲ ಕಾಲ ಕಾಲಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ನೀಡಬಹುದಾದ ಲಸಿಕೆಗಳನ್ನು ನೀಡುವುದು ಕಡ್ಡಾಯವಾಗಲಿದೆ. ಬಿಬಿಎಂಪಿ ಇಂತಹದ್ದೊಂದು ನಿಯಮವನ್ನು ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಜಾರಿಗೆ ತರಲು ಸಿದ್ದತೆಯನ್ನು ಮಾಡಿಕೊಂಡಿದೆ. ಡಾಗ್‌ ರೂಲ್ಸ್‌ ಜಾರಿಗೆ ಸಂಬಂಧಿಸಿದಂತೆ ಈಗಾಗಲೇ ಬಿಬಿಎಂಪಿ ಸರಕಾರಕ್ಕೆ ಅನುಮತಿಯನ್ನು ಕೋರಿದೆ. ಒಂದೊಮ್ಮೆ ಸರಕಾರ ಒಪ್ಪಿಗೆಯನ್ನು ನೀಡಿದ್ರೆ ನಾಯಿ ಸಾಕೋದಕ್ಕೆ ಅನುಮತಿ ಪಡೆಯೋದು ಕಡ್ಡಾಯವಾಗಲಿದೆ. ಆದರೆ ಈ ನಿಯಮದ ಕುರಿತು ಶ್ವಾನ ಪ್ರಿಯರು ಅಪಸ್ವರವೆತ್ತುವ ಸಾಧ್ಯತೆಯೂ ಇದೆ.

ಇದನ್ನೂ ಓದಿ : ದೇವರಿಗೇ ಸಮನ್ಸ್ ಜಾರಿ ಮಾಡಿದ ತಮಿಳುನಾಡಿನ ಕುಂಭಕೋಣಂನ ಕೋರ್ಟ್!

ಇದನ್ನೂ ಓದಿ ; ದಂಪತಿಗೆ ಮಕ್ಕಳಾದರೆ 23.56 ಲಕ್ಷ ರೂಪಾಯಿ ಸಾಲ; ಚೀನಾದ ಈ ಯೋಜನೆಯ ಫಲಾನುಭವ ಪಡೆಯಲು ಏನು ಮಾಡಬೇಕು?

(Dog Birthday Arrest: 3 Arrested For Celebrating Pet Dog Birthday)

Comments are closed.