Shyam Saran Negi:ಭಾರತದ ಮೊದಲ ಮತದಾರ ಶ್ಯಾಮ್ ಸರನ್ ನೇಗಿ ನೆನಪು ಮಾತ್ರ

ಹಿಮಾಚಲ ಪ್ರದೇಶ:(Shyam Saran Negi) ಸ್ವತಂತ್ರ ಭಾರತದ ಮೊದಲ ಮತದಾರ ಶ್ಯಾಮ್‌ ಸರನ್‌ ನೇಗಿ (106 ವರ್ಷ ) ಇಂದು ನಿಧನರಾಗಿದ್ದಾರೆ. ಇತ್ತೀಚಿಗೆ ನಡೆದ ರಾಜ್ಯದ 14 ನೇ ವಿಧಾನಸಭಾ ಚುನಾವಣೆಯಲ್ಲಿ ಅವರು ತಮ್ಮ ಕೊನೆಯ ಮತವನ್ನು ಚಲಾಯಿಸಿದ್ದರು. ಶ್ಯಾಮ್‌ ಸರನ್‌ ನೇಗಿ ಹಿಮಾಚಲ ಪ್ರದೇಶದ ಕಲ್ಪಾದಲ್ಲಿರುವ ತಮ್ಮ ಮನೆಯಲ್ಲಿ ವಯೋಸಹಜ ಸಮಸ್ಯೆಯಿಂದ ಮರಣವನ್ನು ಹೊಂದಿದ್ದಾರೆ. ಶ್ಯಾಮ್ ಸರನ್ ನೇಗಿ ನಿಧನಕ್ಕೆ ಗಣ್ಯರು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

(Shyam Saran Negi)ಶ್ಯಾಮ್‌ ಸರನ್‌ ನೇಗಿ ಅವರು ಅಕ್ಟೋಬರ್ 23, 1951 ರಂದು ಕಲ್ಪಾ ಮತಗಟ್ಟೆಯಲ್ಲಿ ತಮ್ಮ ಮೊದಲ ಮತವನ್ನು ಚಲಾಯಿಸಿದರು. ಆಗಿನಿಂದ ಕೂಡ ಅವರು ತಮ್ಮ ಮತವನ್ನು ವ್ಯರ್ಥ ಮಾಡದೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸುತ್ತಾ ಬಂದಿದ್ದಾರೆ. ಇದುವರೆಗೆ ಅವರು ಒಟ್ಟು 34 ಬಾರಿ ತಮ್ಮ ಮತ ಚಲಾಯಿಸಿದ್ದಾರೆ. ಶ್ಯಾಮ್ ಸರನ್ ನೇಗಿ ದೇಶದ ಮೊದಲ ಮತದಾರರಾದರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನವೆಂಬರ್ 2 ರಂದು ಅವರು ಕೊನೆಯ ಮತದ ಹಕ್ಕನ್ನು ಚಲಾಯಿಸಿದ್ದಾರೆ.

ಪ್ರಧಾನಿ ಮೋದಿಯವರು “ಇದು ಶ್ಲಾಘನಿಯ ಮತ್ತು ಚುನಾವಣೆಯಲ್ಲಿ ಭಾಗವಹಿಸಿ ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸಲು ಯುವ ಮತದಾರರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಟ್ವೀಟ್‌ ಮಾಡಿದ್ದಾರೆ. ಸ್ವತಂತ್ರ ಭಾರತದ ಮೊದಲ ಮತದಾರ ಪಟ್ಟಿಗೆ ಸೇರಿದ ಶ್ಯಾಮ್ ಸರನ್ ನೇಗಿ ಜಿ ಅವರ ನಿಧನದ ಸುದ್ದಿ ಕೇಳಿ ದುಃಖವಾಯಿತು. ಅವರು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಲೇ ನವೆಂಬರ್ 2 ರಂದು 34 ನೇ ಬಾರಿಗೆ ವಿಧಾನಸಭಾ ಚುನಾವಣೆಗೆ ಅಂಚೆ ಮತ ಚಲಾಯಿಸಿದರು.ನೆನಪು ಯಾವಾಗಲೂ ಭಾವನಾತ್ಮಕವಾಗಿರುತ್ತದೆ” ಎಂದು ಠಾಕೂರ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:Delhi Pollution:ದೆಹಲಿಯಲ್ಲಿ ಹೆಚ್ಚಿದ ಮಾಲಿನ್ಯ : ವಾಹನ ಸಂಚಾರ ನಿಷೇಧ, ತಪ್ಪಿದ್ರೆ 20,000 ರೂ. ದಂಡ

ಇದನ್ನೂ ಓದಿ:PM Bangalore Visit: ನ.11ರಂದು ಬೆಂಗಳೂರಿಗೆ ಪ್ರಧಾನಿ ಭೇಟಿ: ಮೋದಿ ಸನ್ಮಾನಕ್ಕೆ ಸಿದ್ಧವಾಗಿದೆ ‘ಕೆಂಪೇಗೌಡ ಪೇಟ’

ಶ್ಯಾಮ್ ಸರನ್ ನೇಗಿ ಜುಲೈ 1,1917 ರಂದು ಹಿಮಾಚಲ ಪ್ರದೇಶದ ಕಲ್ಪಾದಲ್ಲಿ ಜನಿಸಿದ್ದರು. ತಮ್ಮ ಹುಟ್ಟೂರಿನಲ್ಲಿ ಭಾರತೀಯ ಶಾಲಾ ಶಿಕ್ಷಕರಾಗಿ ಕೆಲಸವನ್ನು ನಿರ್ವಹಿಸಿದ್ದಾರೆ. 1951 ರ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಮೊದಲ ಮತವನ್ನು ಚಲಾಯಿಸಿದ್ದಾರೆ. ಅಷ್ಟೇ ಅಲ್ಲದೆ ಸನಮ್‌ ರೇ ಎಂಬ ಹಿಂದಿ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ. 1951 ರಿಂದ ಅವರು ಸಾಯುವವರೆಗೂ ಪ್ರತಿ ಸಾರ್ವತ್ರಿಕ ಚುನಾವಣೆಗಳಲ್ಲಿ ತಮ್ಮ ಮತವನ್ನು ಚಲಾಯಿಸುತ್ತಾ ಬಂದಿದ್ದಾರೆ. 106 ವರ್ಷದ ಶ್ಯಾಮ್‌ ಸರನ್‌ ನೇಗಿ ನವೆಂಬರ್ 2 ರಂದು ಅಂಚೆ ಮತಪತ್ರದ ಮೂಲಕ ತಮ್ಮ ಕೊನೆಯ ಮತ ಚಲಾಯಿಸಿ ಇಂದು ತಮ್ಮ ಪಯಣವನ್ನು ಮುಗಿಸಿದ್ದಾರೆ. ಡೆಪ್ಯೂಟಿ ಕಮಿಷನರ್ ಅಮನ್‌ದೀಪ್ ಗರ್ಗ್ ಅವರು ಶ್ಯಾಮ್‌ ಸರನ್‌ ನೇಗಿ ಅವರ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವಗಳೊಂದಿಗೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

India’s first voter Shyam Saran Negi is only a memory

Comments are closed.