ನವದೆಹಲಿ : ಕೊರೋನಾ ವಿರುದ್ಧದ ಹೋರಾಟಕ್ಕೆ ಇಸ್ಫೋಸಿಸ್ ಫೌಂಡೇಶನ್ 100 ಕೋಟಿ ರು. ದೇಣಿಗೆ ನೀಡುವುದಾಗಿ ಘೋಷಣೆ ಮಾಡಿದೆ.
ಕಳೆದ ಬಾರಿ ದೇಶದಲ್ಲಿ ಕೊರೊನಾ ಸೋಂಕು ವಿರುದ್ದದ ಹೋರಾಟಕ್ಕೆ 100 ಕೋಟಿ ರೂಪಾಯಿ ಘೋಷಣೆ ಮಾಡಿದ್ದ ಇಸ್ಫೋಸಿಸ್ ಫೌಂಡೇಶನ್ ಇದೀಗ ಹೆಚ್ಚುವರಿಯಾಗಿ 100 ಕೋಟಿ ರೂಪಾಯಿ ಹಣವನ್ನು ಇಸ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಅವರು ಘೋಷಣೆ ಮಾಡಿದ್ದಾರೆ. ಈ ಮೂಲಕ ಭಾರತದ ಕೊರೊನಾ ಹೋರಾಟಕ್ಕೆ 200 ಕೋಟಿ ರೂಪಾಯಿ ಘೋಷಣೆ ಮಾಡಿದಂತಾಗಿದೆ.
ಈ ಕುರಿತು ಮಾತನಾಡಿರುವ ಸುಧಾ ಮೂರ್ತಿ ಅವರು, ಕಳೆದ ವರ್ಷ ಬೆಂಗಳೂರಿನಲ್ಲಿ ಕೋವಿಡ್ ಆಸ್ಪತ್ರೆ ಸ್ಥಾಪನೆಗೆ ನೆರವು ನೀಡಿದ್ದೆವು. ಈ ಆಸ್ಪತ್ರೆ ಇದೀಗ ಪರಿಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ. ಅಲ್ಲದೇ ಶೆ. 50 ರಷ್ಟು ಹಣವನ್ನು ಪಿಎಂ ಕೇರ್ಸ್ ಗೆ ನೀಡಿದ್ದೆವು. ಈ ಬಾರಿ 100 ಕೋಟಿ ರೂಪಾಯಿ ಹಣವನ್ನು ಮೂಲಭೂತ ಸೌಕರ್ಯಗಳ ಪೂರೈಕೆಗಾಗಿ ಬಳಸಲಾಗುತ್ತಿದೆ ಎಂದಿದ್ದಾರೆ.
ಮಂಗಳೂರು, ಹೈದರಾಬಾದ್, ಪುಣೆ, ನಾಗ್ಪುರ, ತಿರುವನಂತಪುರ ಹಾಗೂ ದೆಹಲಿಯಲ್ಲೂ ಕೊರೊನಾ ನಿಯಂತ್ರಣಕ್ಕೆ ಬಳಕೆ ಮಾಡಲಾಗುತ್ತಿದೆ. ಆಟೋ ಚಾಲಕರು, ದಿನಗೂಲಿ ಕಟ್ಟಡ ಕಾರ್ಮಿಕ ರಿಗೆ ಅಕ್ಕಿ, ಆಹಾರದ ಕಿಟ್‌ಗಳನ್ನು ಪೂರೈಸುತ್ತಿದ್ದೇವೆ ಎಂದಿದ್ದಾರೆ.
