ಕೊರೋನಾದಿಂದ‌ ಚೇತರಿಸಿಕೊಂಡವರಿಗೆ ಫಂಗಸ್‌ಕಾಟ…! ದೃಷ್ಟಿಹೀನತೆ,ಸಾವಿಗೆ ಕಾರಣವಾಗಬಹುದು ಸೋಂಕು…!!

ಹೋದೆಯಾ ಪಿಶಾಚಿ ಎಂದರೇ ಬಂದೇ ಗವಾಕ್ಷಿಲೀ ಎಂಬಂತೆ ಕೊರೋನಾ ಒಂದನೇ‌ ಅಲೆ ಬಳಿಕ ಅಪ್ಪಳಿಸಿರೋ ಎರಡನೆ ಅಲೆ ಜೀವಹಾನಿಗೆ ಕಾರಣವಾಗುತ್ತಿರುವ ಬೆನ್ನಲ್ಲೇ, ಸೋಂಕಿನಿಂದ ಚೇತರಿಸಿಕೊಂಡವರಿಗೆ ಬ್ಲ್ಯಾಕ್ ಫಂಗಸ್ ಕಾಟ ಎದುರಾಗಲಿದೆ ಹಾಗೂ ಯಾಮಾರಿದ್ರೆ ಇದು ಸಾವಿಗೂ ಕಾರಣವಾಗಬಹುದು ಎಂಬ ಆಘಾತಕಾರಿ ಅಂಶ ಬಯಲಾಗಿದೆ.

https://kannada.newsnext.live/infosys-foundation-100-crore-donate-covid-crisis/

ದೆಹಲಿ,ಮುಂಬೈ, ಗುಜರಾತ,ಅಹಮದಾಬಾದ್ ಸೇರಿದಂತೆ ಹಲವೆಡೆ ಕಳೆದ ವರ್ಷ ಕೊರೋನಾ ಸೋಂಕಿಗೆ ತುತ್ತಾದವರಲ್ಲಿ ಈಗ ಬ್ಲ್ಯಾಕ್ ಫಂಗಸ್ ಸಮಸ್ಯೆ ಕಾಣಿಸಿಕೊಂಡಿದೆ. ಈ ಸೋಂಕು ಕಾಣಿಸಿಕೊಂಡವರಲ್ಲಿ ದೃಷ್ಟಿಹೀನತೆ ಉಂಟಾಗಬಹುದು. ಹಾಗೇ ಸೋಂಕು ಮೆದುಳಿಗೆ ವ್ಯಾಪಿಸಿದರೇ‌ ಸಾವು ಉಂಟಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.

https://kannada.newsnext.live/karnataka-corona-covid-19-marriage-different-mask-temperature-check/

ರೋಗನಿರೋಧಕ ಶಕ್ತಿ‌ಕಡಿಮೆ ಇದ್ದವರು ಹಾಗೂ ಮಧುಮೇಹ ಸಮಸ್ಯೆಯಿಂದ ನರಳುತ್ತಿರುವವರಿಗೆ ಕೊರೋನಾ ಸೋಂಕು ತಗುಲಿದಲ್ಲಿ. ಅಂತವರಿಗೆ ಕೊರೋನಾದಿಂದ ಚೇತರಿಸಿಕೊಂಡ ಬಳಿಕ ಮ್ಯುಕೋರ್ಮೈಸಿಸ್ ಕಾರಣವಾಗುವ ಫಂಗಸ್ ಗೆ ತುತ್ತಾಗಿ ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ.

https://kannada.newsnext.live/sandalwood-rockingstar-yash-movie-kgf-2-relase-date-postphoned/

ಒಂದು ಕಡೆ ಮುಖ ಊದಿಕೊಳ್ಳುವುದು,ಕಣ್ಣು ನೋವು,ಜ್ವರ,ಮೂಗು ಕಟ್ಟುವಿಕೆ ಈ ಸೋಂಕಿನ ಲಕ್ಷಣವಾಗಿದೆ.

ಕೊರೋನಾ ಸೋಂಕಿಗೆ ತುತ್ತಾದ ಸಕ್ಕರೆ ಕಾಯಿಲೆಯಿಂದ ಬಳಲಿದ ರೋಗಿಗಳಿಗೆ ಬ್ಲ್ಯಾಕ್ ಫಂಗಸ್ ಅಟ್ಯಾಕ್ ಆಗುವ ಸಾಧ್ಯತೆ ಇದೆ. ಕೊರೋನಾಗೆ ಚಿಕಿತ್ಸೆಗೆ ಸ್ಟಿರಾಯ್ಡ್ ಪಡೆದುಕೊಂಡ ರೋಗಿಗಳು ಹಾಗೂ ಒಂದಕ್ಕಿಂತ ಹೆಚ್ಚು ಕಾಯಿಲೆಯ ರೋಗಿಗಳಿಗೆ ಈ ಫಂಗಸ್ ಅಟ್ಯಾಕ್ ಸಾಧ್ಯತೆ ಹೆಚ್ಚು ಎನ್ನುತ್ತಿದ್ದಾರೆ ವೈದ್ಯರು.

ಒಟ್ಟಿನಲ್ಲಿ ಕೊರೋನಾ ಒಂದಲ್ಲ ಒಂದು ಆತಂಕವನ್ನು ಸೃಷ್ಟಿಸುತ್ತಲೇ ಇದ್ದು, ಸಾಧ್ಯವಾದಷ್ಟು ಸೋಂಕು ನಮಗೆ ತಗುಲದಂತೆ ಕಾಪಾಡಿಕೊಳ್ಳುವಲ್ಲೇ ಬುದ್ಧಿವಂತಿಕೆ ಇದೆ ಎಂತಿದ್ದಾರೆ ತಜ್ಞರು.

Comments are closed.