ಕೊಡಗು : ಕಾಫಿನಾಡು ಕೊಡಗಿನಲ್ಲಿ ಕಳೆದ ಮೂರು ವರ್ಷಗಳ ಹಿಂದೆ ನಡೆದ ಪ್ರವಾಹದಲ್ಲಿ ಸಾವಿರಾರು ಜನರು ಮನೆ ಕಳೆದುಕೊಂಡಿದ್ದರು. ಇಂತಹ ಸಂತ್ರಸ್ತರಿಗೆ ಸುಧಾಮೂರ್ತಿ ಆಸರೆಯಾಗಿದ್ದಾರೆ. ಇದೀಗ 70 ಮನೆಗಳನ್ನು ಹಸ್ತಾಂತರಿಸಲು ಇನ್ಪೋಸಿಸ್ ಫೌಂಡೇಶನ್ ಮುಂದಾಗಿದೆ.
ಇನ್ಫೋಸಿಸ್ ಫೌಂಡೇಷನ್ನ ಅಧ್ಯಕ್ಷೆ ಸುಧಾ ಮೂರ್ತಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಸದಾ ಕಾಲ ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಇವರು, ಒಂದಿಲ್ಲಾ ಒಂದು ವಿಷಯದಲ್ಲಿ ಸುದ್ಧಿಯಲ್ಲಿರುತ್ತಾರೆ. ಲೋಕ ಕಲ್ಯಾಣ ಕಾರ್ಯದಲ್ಲಿ ಸದಾ ಮುಂದೆ ಇರುವ ಸುಧಾ ಮೂರ್ತಿ ಕೊರೊನಾ ಕಾಲಘಟ್ಟದಲ್ಲಿಯೂ ಅನೇಕ ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ. ಸದ್ಯ ಸುಧಾ ಮೂರ್ತಿಯವರು ಕೊಡಗು ಜಿಲ್ಲೆಯಲ್ಲಿ 2018 ಮತ್ತು 2019ರಲ್ಲಿ ಸಂಭವಿಸಿದ ಪ್ರವಾಹದಿಂದ ಮನೆ ಕಳೆದುಕೊಂಡ ಜನರ ಜೀವನಕ್ಕೆ ಆಧಾರವಾಗಿದ್ದಾರೆ.
2018 ಮತ್ತು 2019ರಲ್ಲಿ ಸಂಭವಿಸಿದ ಪ್ರವಾಹ, ಭೂ ಕುಸಿತದಿಂದ ಸೂರು ಕಳೆದುಕೊಂಡವರ ನೆರವಿಗೆ ಇನ್ಪೋಸಿಸ್ ಫೌಂಡೇಷನ್ನ ಅಧ್ಯಕ್ಷೆ ಸುಧಾ ಮೂರ್ತಿ ಮುಂದಾಗಿದ್ದಾರೆ. ಬರೋಬ್ಬರಿ 25 ಕೋಟಿ ರೂಪಾಯಿ ಮೊತ್ತದ 200 ಮನೆ ಗಳನ್ನು ಉಚಿತವಾಗಿ ನಿರ್ಮಿಸಿ ಪ್ರವಾಹ ಸಂತ್ರಸ್ತರಿಗೆ ನೀಡಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮವಾರ ಪೇಟೆ ತಾಲ್ಲೂಕಿನ ಜಂಬೂರು ಗ್ರಾಮದಲ್ಲಿ ಈ ಮನೆಗಳು ನಿರ್ಮಾಣ ವಾಗುತ್ತಿವೆ. ಸುಮಾರು 70 ಮನೆಗಳು ಸಂಪೂರ್ಣ ವಾಗಿದ್ದು, ಸಂತ್ರಸ್ತರಿಗೆ ಹಂಚಿಕೆಯಾಗಲು ಸಿದ್ಧವಾಗಿವೆ. ಪ್ರತೀ ಮನೆಗೆ ತಲಾ 10 ಲಕ್ಷ ರೂಪಾಯಿ ವ್ಯಯಿಸಲಾಗಿದೆ ಎಂದು ಈ ಯೋಜನೆಯ ಪ್ರಾಜೆಕ್ಟ್ ಮ್ಯಾನೇಜರ್ ರಾಜು ಡಿ ಆಗುಂಬೆ ತಿಳಿಸಿದ್ದಾರೆ.
ಮನೆಗಳನ್ನು ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿ ನಿರ್ಮಾಣ ಮಾಡಲಾಗಿದೆ. ಸರಕಾರ ನಿರ್ಮಾಣ ಮಾಡಿರುವ ಮಾದರಿ ಯಲ್ಲಿಯೇ ಇನ್ಫೋಸಿಸ್ ಫೌಂಡೇಶನ್ ನಿರ್ಮಾಣ ಮಾಡಿದೆ. ಮನೆಗಳು ಅತ್ಯಾಕರ್ಷಕವಾಗಿದೆ. ಜಿಲ್ಲಾಡಳಿತ ಕೂಡ ಇನ್ಫೋಸಿಸ್ ಕಾರ್ಯವನ್ನು ಕೊಂಡಾಡಿದೆ.