ಮಂಗಳವಾರ, ಏಪ್ರಿಲ್ 29, 2025
HomeNationalInternational Democracy Day:ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಇತಿಹಾಸ

International Democracy Day:ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಇತಿಹಾಸ

- Advertisement -

(International Democracy Day)ಸೆಪ್ಟೆಂಬರ್‌ 15ರಂದು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸುಲು ಮತ್ತು ಎತ್ತಿಹಿಡಿಯು ಸಲುವಾಗಿ ಇಂದು ಅಂತರರಾಷ್ಟ್ರೀಯ ಪ್ರಜಾದಿನವನ್ನಾಗಿ ಆಚರಿಸುತ್ತಿದೆ. ಪ್ರಜಾಪ್ರಭುತ್ವವು ದೇಶದ ಜನರಿಂದ ರಚನೆಯಾಗಿರುತ್ತದೆ. ಪ್ರಜೆಗಳಿಂದ ಪ್ರಜೆಗಳಿಗೊಸ್ಕರ ನಡೆಸುವ ಸರಕಾರವನ್ನು ಪ್ರಜಾಪ್ರಭುತ್ವ ಎನ್ನುತ್ತಾರೆ. ಹಾಗಾಗಿ ಇದು ಸರಕಾರದ ಒಂದು ರೂಪವಾಗಿದೆ. ದೇಶದ ಪ್ರಜೆಗಳಿಂದ ಆಯ್ಕೆಯಾದಂತಹ ಪ್ರತಿನಿಧಿಯ ಮೂಲಕ ಶಾಸನದ ವಿಷಯಗಳನ್ನು ನಿರ್ಧರಿಸುವ ಅಧಿಕಾರವನ್ನು ಹೊಂದಿರುತ್ತಾರೆ. ಪ್ರಜಾಪ್ರಭುತ್ವ ಆಡಳಿತದಲ್ಲಿ ನಿರ್ಣಯಿಸುವ ಅಂಶಗಳು ಅದರ ಮೂಲದಿಂದ ಬದಲಾಗಿರುತ್ತದೆ. ಇದನ್ನು ಬೇರೆ ಬೇರೆ ದೇಶಗಳಲ್ಲಿ ಭಿನ್ನ ರೀತಿಯಲ್ಲಿ ಅಳವಡಿಸಿಕೊಂಡಿರುತ್ತಾರೆ.

(International Democracy Day)ವಿಶ್ವದಲ್ಲಿನ ಪ್ರಜಾಪ್ರಭುತ್ವ ಸ್ಥಿತಿಯನ್ನು ಪರಿಶೀಲಿಸಲು ವಿಶ್ವಸಂಸ್ಥೆಯು ಈ ದಿನದಂದು ಅವಕಾಶವನ್ನು ಒದಗಿಸುತ್ತದೆ. ಪ್ರಜಾಪ್ರಭುತ್ವದ ಆದರ್ಶದ ಬಗ್ಗೆ ವಿಶ್ವದೆಲ್ಲಡೆ ಎಲ್ಲರೂ ಪಾಲಿಸುವಂತೆ ಮತ್ತು ವಾಸ್ತವವಾಗಿ ನೋಡುವಂತೆ ಮಾಡುವುದು ಈ ದಿನದ ಗುರಿಯಾಗಿದೆ.

ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಇತಿಹಾಸ :
ಪ್ರಜಾಪ್ರಭುತ್ವವನ್ನು(IPU) ಇಂಟರ್-ಪಾರ್ಲಿಮೆಂಟರಿಯು 1997 ಸೆಪ್ಟೆಂಬರ್‌ 15 ರಂದು ಅಂಗೀಕರಿಸಿತು. ಈ ದಿನಾಚರಣೆಯು ಹೆಚ್ಚಾಗಿ ಪ್ರಜಾಪ್ರಭುತ್ವದ ಸಾರ್ವತ್ರಿಕ ಘೋಷಣೆಯನ್ನು ಒಳ್ಳಗೊಂಡಿದೆ. ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಬೀಜವನ್ನು 1988ರಲ್ಲಿ ಬಿತ್ತಲಾಗಿದೆ. ಆ ವರ್ಷ ಅಂತರರಾಷ್ಟ್ರೀಯ ಸಮ್ಮೇಳನಗಳನ್ನು ಫಿಲಿಪೈನ್ಸ್ನ ಅಧ್ಯಕ್ಷ ಕೊರಾಜನ್‌ ಸಿ. ಅಕ್ಟಿನೊ ಅವರು ಪ್ರಜಾಪ್ರಭುತ್ವವನ್ನು ಹೊಸ ಮತ್ತು ಮರುಸ್ಥಾಪಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದರು. ಪ್ರಜಾಪ್ರಭುತ್ವದ ಮೂಲ ತತ್ವಗಳನ್ನು ಮರುಸ್ಥಾಪಿಸುವ ಘೋಷಣೆಯನ್ನು 2006ರಲ್ಲಿ ಕತಾರ್ ನಲ್ಲಿ ನಿರ್ಧರಿಸಿತು. ನಂತರದ ದಿನಗಳಲ್ಲಿ ಕತಾರ್‌ ಯುಎನ್‌ ಜನರಲ್‌ ಅಸೆಂಬ್ಲಿಯಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ನಿರ್ಣಯವನ್ನು ಉತ್ತೇಜಿಸುವಲ್ಲಿ ಮುಂದಾಳತ್ವವನ್ನು ವಹಿಸಿಕೊಂಡಿತು.

ನಂತರದ ದಿನಗಳಲ್ಲಿ ಯುಎನ್‌ ಅಸೆಂಬ್ಲಿಯು ಪ್ರತಿ ವರ್ಷ ಸೆಪ್ಟೆಂಬರ್‌ 15 ರಂದು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸಲು ನಿರ್ಧಾರ ಮಾಡಿತು. 2007 ನವೆಂಬರ್‌ ನಲ್ಲಿ ವಿಶ್ವಸಂಸ್ಥೆಯು ವಿಶ್ವದ್ಯಾಂತ ಹೊಸ ಮತ್ತು ಮರುಸ್ಥಾಪಿತ ಪ್ರಜಾಪ್ರಭುತ್ವವನ್ನು ಪ್ರೋತ್ಸಾಹಿಸುವ ನಿರ್ಣಯವನ್ನು ಅಂಗೀಕರಿಸಿತು.

ಇದನ್ನೂ ಓದಿ : ಭಾರತದ ಟಾಪ್ 7 ಎಂಜಿನಿಯರ್‌ : ಇವರ ಸಾಧನೆ ನಿಮಗೆ ಗೊತ್ತಾ ?

ಇದನ್ನೂ ಓದಿ : ಬಿಎಚ್‌ಇಎಲ್‌ ಇಂಜಿಯರ್ ನೇಮಕಾತಿ : 1.80 ಲಕ್ಷ ರೂ. ವೇತನ

ಇದನ್ನೂ ಓದಿ : ಸ್ಪೋರ್ಟ್ಸ್‌ ಕೋಟಾದ ಅಡಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಪಶ್ಚಿಮ ರೇಲ್ವೇ

ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಮಹತ್ವ:
ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯು ದಿನನಿತ್ಯವು ಸಕ್ರಿಯವಾಗಿ ಪ್ರಜಾಪ್ರಭುತ್ವದ ಪಾಮುಖ್ಯತೆಯನ್ನು ಅಂಗೀಕರಿಸುವುದಾಗಿದೆ. ಭಾರತವು ವಿಶ್ವದಲ್ಲಿ ಪ್ರಜಾಪ್ರಭುತ್ವವನ್ನು ಹೊಂದಿದ್ದ ಅತಿದೊಡ್ಡ ದೇಶವಾಗಿದೆ. ಇದು ಪ್ರಮುಖವಾಗಿ ದೇಶದ ಆಡಳಿತ ಮಾದರಿಯ ಮೂಲಭೂತ ಮೌಲ್ಯಗಳನ್ನು ಎತ್ತಿಹಿಡಿಯಲು ಜ್ಞಾಪಿಸುವಲ್ಲಿ ಕಾರ್ಯನಿರ್ವಹಿಸುತ್ತದೆ. ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಪಟ್ಟ ಮೂಲಭೂತ ಮೌಲ್ಯಗಳ ನಿರ್ಧಾರಗಳ ಅಧಿಕಾರವನ್ನು ತನ್ನ ಜನರು ತಗೆದುಕೊಳ್ಳುವಂತಹ ಸರಕಾರವಾಗಿದೆ.

History of International Democracy Day

RELATED ARTICLES

Most Popular