Bigg Boss Season 9 : ‘ಪ್ರವೀಣರ ಜೊತೆ ನವೀನರು’ : ಬಿಗ್​ಬಾಸ್​ 9ನಲ್ಲಿ ಹೊಸ ಸ್ಪರ್ಧಿಗಳ ಜೊತೆ ಹಳೆ ಸ್ಪರ್ಧಿಗಳ ಸಮಾಗಮ

Bigg Boss Season 9 Kannada : ಬಿಗ್​ಬಾಸ್​ ಒಟಿಟಿ ಸೀಸನ್​ 1 ಅಂತಿಮ ಹಂತದಲ್ಲಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಬಿಗ್​ಬಾಸ್​ ಸೀಸನ್​ 9 ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ. ಒಟಿಟಿ ವೇದಿಕೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಸ್ಪರ್ಧಿಗಳು ಬಿಗ್​ಬಾಸ್​ ಸೀಸನ್​ 9ಗೆ ಎಂಟ್ರಿ ನೀಡ್ತಾರೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಇವರ ಜೊತೆಯಲ್ಲಿ ಒಂದಷ್ಟು ಹೊಸ ಸ್ಪರ್ಧಿಗಳೂ ಸಹ ಬಿಗ್​ಬಾಸ್​ ಮನೆ ಸೇರಲಿದ್ದಾರೆ. ಆದರೆ ಇದೆಲ್ಲದರ ಜೊತೆಯಲ್ಲಿ ಇದೀಗ ಮತ್ತೊಂದು ಟ್ವಿಸ್ಟ್​ನ್ನು ಬಿಗ್​ ಬಾಸ್​ ಸೀಸನ್​ 9 ವೀಕ್ಷಕರಿಗೆ ನೀಡಿದೆ.

ಕಲರ್ಸ್ ಕನ್ನಡದ ಅಧಿಕೃತ ಸೋಶಿಯಲ್​ ಮೀಡಿಯಾ ಪೇಜ್​ಗಳಲ್ಲಿ ಬಿಗ್​ಬಾಸ್​ ಸೀಸನ್​ 9ನ ಹೊಸ ಪ್ರೊಮೋವನ್ನು ಹರಿಬಿಡಲಾಗಿದೆ. ಈ ಪ್ರೊಮೋದಲ್ಲಿ ಬಿಗ್​ಬಾಸ್​ ಹಳೆಯ ಸೀಸನ್​ಗಳ ಸ್ಪರ್ಧಿಗಳಾದ ಅನುಪಮಾ ಗೌಡ, ವೈಷ್ಣವಿ , ದೀಪಿಕಾ ದಾಸ್​ ಹಾಗೂ ಪ್ರಶಾಂತ್​ ಸಂಬರಗಿ ಕಾಣಿಸಿಕೊಂಡಿದ್ದಾರೆ. ಇವರೆಲ್ಲರಿಗೂ ಬಿಗ್​ಬಾಸ್​ ಸೂಚನೆಗಳನ್ನು ನೀಡಿದ್ದು ಬಳಿಕ ಇವರೆಲ್ಲ ಬ್ಯಾಗ್​ ಪ್ಯಾಕ್​ ಮಾಡಿಕೊಂಡು ಹೊರಟ ರೀತಿಯಲ್ಲಿ ಪ್ರೊಮೋವನ್ನು ಚಿತ್ರಿಸಲಾಗಿದೆ. ಈ ಪ್ರೊಮೋದಲ್ಲಿ ಸುದೀಪ್​ ಕೂಡ ಇದ್ದಾರೆ. ಹೀಗಾಗಿ ಬಿಗ್​ಬಾಸ್​ ಸೀಸನ್​ 9ನಲ್ಲಿ ಅನುಪಮಾ ಗೌಡ, ದೀಪಿಕಾ ದಾಸ್, ವೈಷ್ಣವಿ ಹಾಗೂ ಪ್ರಶಾಂತ್​ ಸಂಬರಗಿ ಕೂಡ ಇರಲಿದ್ದಾರಾ ಎಂಬ ಸುಳಿವು ಪ್ರೇಕ್ಷಕರಿಗೆ ಸಿಕ್ಕಂತಿದೆ.


ಬಿಗ್​ಬಾಸ್​ ಕನ್ನಡ ಒಟಿಸಿ ಸೀಸನ್​ 1ನಲ್ಲಿ ಸದ್ಯ ಸಾನ್ಯಾ ಅಯ್ಯರ್​, ರೂಪೇಶ್​ ಶೆಟ್ಟಿ, ಸೋಮಣ್ಣ ಮಾಚಿಮಾಡ, ಆರ್ಯವರ್ದನ್​ ಗುರೂಜಿ, ಸೋನುಗೌಡ, ಜಯಶ್ರೀ ಹಾಗೂ ಜಶ್ವಂತ್​ ಕಣದಲ್ಲಿದ್ದಾರೆ. ಇವರಲ್ಲಿ ಒಬ್ಬರು ವಿನ್ನರ್​ ಆಗಿ ಹೊರಹೊಮ್ಮಲಿದ್ದಾರೆ. ಹಾಗೂ ಇವರಲ್ಲಿ ಅದ್ಭುತ ಪ್ರದರ್ಶನ ತೋರಿದವರನ್ನು ಬಿಗ್​ಬಾಸ್​ ಸೀಸನ್​ 9ಗೆ ಕಳುಹಿಸಿಕೊಡಲಾಗುತ್ತದೆ.

ಯಾವಾಗಲು ಹೊಸ ಹೊಸ ಸ್ಪರ್ಧಿಗಳು ಮಾತ್ರ ಬಿಗ್​ಬಾಸ್​ ಮನೆಗೆ ಎಂಟ್ರಿ ನೀಡುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ನವೀನರ ಜೊತೆ ಪ್ರವೀಣರು ಎಂಬಂತೆ ಹೊಸ – ಹಳೆಯ ಸ್ಪರ್ಧಿಗಳ ಸಮಾಗಮ ಇರಲಿದೆ. ಹೀಗಾಗಿ ಬಿಗ್​ಬಾಸ್​ ಸೀಸನ್​ 9 ಆರಂಭಕ್ಕೂ ಮುನ್ನವೇ ಸಾಕಷ್ಟು ಕುತೂಹಲಗಳನ್ನು ಪ್ರೇಕ್ಷಕರ ಮುಂದೆ ಕಟ್ಟಿಕೊಡುತ್ತಿದ್ದು ಸೆಪ್ಟೆಂಬರ್​ 24ರಿಂದ ರಾತ್ರಿ 9:30 ರಿಂದ 11 ಗಂಟೆಯವರೆಗೆ ಪ್ರಸಾರವಾಗಲಿದೆ. ಪ್ರತಿಬಾರಿಯ ಸೀಸನ್​ನಂತೆ ಶನಿವಾರ ಹಾಗೂ ಭಾನುವಾರದ ವೀಕೆಂಡ್​​ ಪ್ರೋಗ್ರಾಂಗಳನ್ನು ಕಿಚ್ಚ ಸುದೀಪ ನಡೆಸಿ ಕೊಡಲಿದ್ದಾರೆ.

ಇದನ್ನು ಓದಿ : Gobhi Pepper Fry : ಗೋಬಿಯ ಈ ಸ್ನ್ಯಾಕ್ಸ್‌ ಸವಿದಿದ್ದೀರಾ; ಗೋಬಿ–ಪೆಪ್ಪರ್‌ ಫ್ರೈ ಹೀಗೆ ಮಾಡಿ

ಇದನ್ನೂ ಓದಿ : BREAKING : ಐಪಿಎಲ್​ ಸೇರಿದಂತೆ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ರಾಬಿನ್​ ಉತ್ತಪ್ಪ ನಿವೃತ್ತಿ ಘೋಷಣೆ

Check here for updates on Bigg Boss Season 9 Kannada

Comments are closed.