ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಅರೆಸ್ಟ್

ಮುಂಬೈ : ಡ್ರಗ್ ಪೆಡ್ಲಿಂಗ್ ಪ್ರಕರಣ ಆರೋಪದ ಹಿನ್ನೆಲೆಯಲ್ಲಿ ಮೋಸ್ಟ್  ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಾಸ್ಕರ್ ನನ್ನ  ಮುಂಬೈನಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಬುಧವಾರ ಬಂಧಿಸಿದೆ.

ಜಮ್ಮು ಮತ್ತು ಕಾಶ್ಮೀರದಿಂದ ಪಂಜಾಬ್‌ಗೆ ನಿಷೇಧಿತ ವಸ್ತುಗಳನ್ನು ಪೆಡ್ಲಿಂಗ್ ಮಾಡುತ್ತಿದ್ದ ಆರೋಪದ ಮೇಲೆ ಕಸ್ಕರ್‌ನನ್ನು ಬಂಧಿಸ ಲಾಗಿದೆ. ಕಸ್ಕರ್‌ನನ್ನು 2003 ರಲ್ಲಿ ಯುಎಇಯಿಂದ ಗಡೀಪಾರು ಮಾಡಲಾಯಿತು ಮತ್ತು ಸುಲಿಗೆ ಪ್ರಕರಣದ ತನಿಖೆಗೆ ಸಂಬಂಧಿಸಿ ದಂತೆ ಥಾಣೆ ಪೊಲೀಸರು 2017 ರ ಸೆಪ್ಟೆಂಬರ್‌ನಲ್ಲಿ ಬಂಧಿಸಿದ್ದರು.

ಆತ ದಾವೂದ್ ಇಬ್ರಾಹಿಂ ಮುಂಬೈನ ರಿಯಲ್ ಎಸ್ಟೇಟ್ ವ್ಯವಹಾರ ವನ್ನು ನಿರ್ವಹಿಸುತ್ತಿದ್ದನೆಂದು ಶಂಕಿಸಲಾಗಿದೆ. ಮುಂಬೈನ ಗೋರೈ ಪ್ರದೇಶದಲ್ಲಿ 38 ಎಕರೆ ಜಮೀನಿನ ಒಪ್ಪಂದಕ್ಕೆ ಸಂಬಂಧಿಸಿದಂತೆ ಕಾಸ್ಕರ್ ಅವರಿಂದ 3 ಕೋಟಿ ರೂ. ಬೆದರಿಕೆ ಮತ್ತು ಸುಲಿಗೆ ಮಾಡಿದ್ದರು ಎಂದು ಬಿಲ್ಡರ್ ದೂರಿನಲ್ಲಿ ತಿಳಿಸಿದ್ದಾರೆ

Comments are closed.