ಬೆಂಗಳೂರು: ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ರಾಜ್ಯದಲ್ಲಿ ಲಾಕ್ ಡೌನ್ ಮುಂದುವರೆದಿದೆ. ಕೂಲಿ ಕಾರ್ಮಿಕರು, ಬಡವರು ಊಟವಿಲ್ಲದೇ ಪರದಾಡುತ್ತಿದ್ದಾರೆ. ಇಂತಹ ಬಡವರಿಗೆ ಜನ ಸ್ಪಂದನ ಸೇವಾ ಟ್ರಸ್ಟ್ ಸಹಾಯ ಹಸ್ತ ಚಾಚಿದೆ. ಈ ಹಿನ್ನಲೆ ಇಂದು ಬಡ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ನೀಡಿ ಸನ್ಮಾನಿಸಿದೆ.

ನಗರದ ಗಾಳಿ ಆಂಜನೇಯಸ್ವಾಮಿ ವಾರ್ಡ್ ನಲ್ಲಿ ಜನಸ್ಪಂದನ ಸೇವಾ ಟ್ರಸ್ಟ್ ಸದಸ್ಯರು ಲಾಕ್ ಡೌನ್ ನಡುವೆ ತಾಯಂದಿರ ದಿನಾಚರಣೆ ಆಚರಿಸಿದ್ರು. ಗರ್ಭಿಣಿಯರನ್ನು ಕೂರಿಸಿ, ಪೌಷ್ಟಿಕ ಆಹಾರ ಕೊಟ್ಟು ಗೌರವ ನೀಡಲಾಯ್ತು.

ಮಹಿಳಾ ಸಂಘಟನೆಗಳಿಗೆ 2500 ರೂಪಾಯಿ ಮೌಲ್ಯದ ಕೂಪನ್ ಹಾಗೂ ಸ್ಥಳೀಯ ಎಲ್ಲಾ ಮನೆಗಳಿಗೂ ಗುಣಮಟ್ಟದ ಆಹಾರ ಪದಾರ್ಥ ದಿನಸಿಯನ್ನು ಜನ ಸ್ಪಂದನಾ ಸೇವಾ ಟ್ರಸ್ಟ್ ನ ಮುಖ್ಯಸ್ಥ ಆರ್ಯ ನವೀನ್ ನೇತೃತ್ವದ ತಂಡ ವಿತರಣೆ ಮಾಡಿದ್ರು.

