ನವದೆಹಲಿ : ಟೆಲಿಕಾಂ ಕಂಪೆನಿಗಳು 5ಜಿ ತಂತ್ರಜ್ಞಾನ ಸೇವೆ ನೀಡಲು ತುದಿಗಾಲಲ್ಲಿ ನಿಂತಿವೆ. ಆದರೆ ಬಾಲಿವುಡ್ ನಟಿ ಜ್ಯೂಹಿ ಚಾವ್ಲಾ 5ಜಿ ವಿರುದ್ದ ಹೈಕೋರ್ಟ್ ಕದ ತಟ್ಟಿದ್ದಾರೆ. ನೂತನ ತಂತ್ರಜ್ಞಾನ ಜಾರಿಗೆ ಬರಬಾರದು ಅಂತಾ ನ್ಯಾಯಾಲಯವನ್ನು ವಿನಂತಿಸಿದ್ದಾರೆ.
ದೇಶದಲ್ಲಿ 5 ಜಿ ಸೇವೆ ಸದ್ಯದಲ್ಲಿಯೇ ಆರಂಭವಾಗಲಿದೆ. ಅತ್ಯಾಧುನಿಕ ವಾಗಿರುವ 5ಜಿ ತಂತ್ರಜ್ಞಾನ ವನ್ನು ಆರಂಭಿಸಿ ದರೆ ಪರಿಸರದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ತರಂಗಾಂತರಗಳಿಂದಾಗಿ ಹೊರ ಸೂಸುವ ವಿಕಿರಣವಳು ಜೀವರಾಶಿಗೆ ಅಪಾಯವನ್ನು ತಂದೊಡ್ಡಲಿದೆ. ಮಾನವ ಆರೋಗ್ಯದ ಮೇಲೆ ರೇಡಿಯೊ ಫ್ರೀಕ್ವೆನ್ಸಿಯ ವಿಕಿರಣದಿಂದ ಆಗುವ ಸಂಭಾವ್ಯ ಹಾನಿಕಾರಕ ಪರಿಣಾಮಗಳ ಬಗ್ಗೆ ವಿಶ್ಲೇಷಿಸದೇ 5ಜಿ ಮೊಬೈಲ್ ತಂತ್ರಜ್ಞಾನವನ್ನು ಅನುಷ್ಠಾನಗೊಳಿಸಬಾರದು ಎಂದು ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಬಾಲಿವುಡ್ ನಟಿ ಜ್ಯೂಹಿ ಚಾವ್ಲಾ ಅವರು ವಿಕಿರಣ ಜಾಗೃತಿ ಅಭಿಯಾನದ ಕಾರ್ಯಕರ್ತೆ ಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಂದು ತಮ್ಮ ವಕೀಲರಾದ ದೀಪಕ್ ಖೊಸ್ಲಾ ಮೂಲಕ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸ್ವೀಕರಿಸಿದ ನ್ಯಾಯಾಧೀಶ ಸಿ ಹರಿಚಂದ್ರ ಅವರು ವಿಚಾರಣೆಯನ್ನು ಜೂನ್ 2 ಕ್ಕೆ ಮುಂದೂಡಿಕೆ ಮಾಡಿದ್ದಾರೆ.
ಇನ್ನು 5ಜಿ ಮೊಬೈಲ್ ತಂತ್ರಜ್ಞಾನದ ವಿರುದ್ಧ ನಿರಂತರ ಹೋರಾಟ ನಡೆಸುತ್ತಿರುವ ನಟಿ ಜ್ಯೂಹಿ ಚಾವ್ಲಾ ಅವರು, ಮೊಬೈಲ್ ಟವರ್ ಆಂಟೆನಾಗಳಿಂದ ಹಾಗೂ ವೈ ಫೈ ಹಾಟ್‌ಸ್ಪಾಟ್ ಗಳ ಇಎಂಎಫ್ ಪರಿಣಾಮಗಳ ಬಗ್ಗೆ ಸರಕಾರ ಕ್ಕೆ ಪತ್ರವನ್ನು ಬರೆದಿದ್ದರು.