ಕರ್ನಾಟಕ ಹೈಕೋರ್ಟ್ ಐತಿಹಾಸಿಕ ಕ್ರಮ : ಇನ್ಮುಂದೆ ಯೂಟ್ಯೂಬ್ ನಲ್ಲಿ ನೇರ ಪ್ರಸಾರವಾಗುತ್ತೆ ಕಲಾಪ

ಬೆಂಗಳೂರು : ಸಾಮಾನ್ಯವಾಗಿ ಕೋರ್ಟ್ ಕಲಾಪ ಕೋರ್ಟ್ ಹಾಲ್ ಗೆ ಮಾತ್ರವೇ ಸೀಮಿತವಾಗಿರುತ್ತೆ. ಆದರೆ ಕರ್ನಾಟಕ ಹೈಕೋರ್ಟ್ ಇದೀಗ ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿದೆ. ಹೀಗಾಗಿ ಜನ ಸಾಮಾನ್ಯರು ಕೂಡ ಕೋರ್ಟ್ ಕಲಾಪ ವೀಕ್ಷಣೆ ಮಾಡಬಹುದಾಗಿದೆ.

ಕರ್ನಾಟಕ ರಾಜ್ಯ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರು ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇಂದಿನಿಂದ ರಾಜ್ಯ ಹೈಕೋರ್ಟ್ ನ ಕೋರ್ಟ್ ಹಾಲ್ ನಂ.1ರ ಕಲಾಪವನ್ನು ಯೂಟ್ಯೂಬ್ ಮೂಲಕ ನೇರಪ್ರಸಾರ ಮಾಡೋದಕ್ಕೆ ಚಾಲನೆ ನೀಡಿದ್ದಾರೆ. ಹೈಕೋರ್ಟ್ ನ ಕೋರ್ಟ್ ಹಾಲ್ ನಂ.1ರಲ್ಲಿನ ಕಲಾಪದ ನೇರ ಪ್ರಸಾರ ಯೂಟ್ಯೂಬ್ ನಲ್ಲಿ ಆಗಲಿದ್ದು, ಹೈಕೋರ್ಟ್ ಕಲಾಪವನ್ನು ನೀವು ಮನೆಯಲ್ಲಿಯೇ ಕುಳಿತು, ಯೂಟ್ಯೂಬ್ ನಲ್ಲಿ ನೇರ ಪ್ರಸಾರದಲ್ಲಿ ನೋಡಬಹುದಾಗಿದೆ.

ನ್ಯಾಯಾಲಯದ ಈ ಮಹತ್ವದ ನಿರ್ಧಾರದಿಂದ ಜನ ಸಾಮಾನ್ಯರಿಗೆ ನ್ಯಾಯಾಂಗದ ಮೇಲಿದ್ದ ನಂಬಿಕೆ ಇನ್ನಷ್ಟು ಹೆಚ್ಚಳವಾದಂತಾಗಿದೆ. ಅಲ್ಲದೇ ಜನಸಾಮಾನ್ಯರಿಗೂ ಕೂಡ ಕಲಾಪ ವೀಕ್ಷಣೆಯ ಅವಕಾಶ ದೊರೆತಂತಾಗಿದೆ.

Comments are closed.