ಉತ್ತರ ಪ್ರದೇಶ : Kabaddi Players : ದೇಶದಲ್ಲಿ ಕ್ರೀಡೆ ಅಂತಾ ಬಂದಾಗ ಮೊದಲು ನೆನಪಾಗೋದೇ ಕ್ರಿಕೆಟ್. ನಮ್ಮ ದೇಶದಲ್ಲಿ ಕ್ರಿಕೆಟಿಗರನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸಲಾಗುತ್ತೆ. ಆದರೆ ಬೇರೆ ಕ್ರೀಡೆಗಳ ವಿಚಾರಕ್ಕೆ ಬಂದರೆ ಕ್ರಿಕೆಟಿಗರಿಗೆ ಸಿಕ್ಕ ಈ ಮರ್ಯಾದೆ, ಗೌರವಗಳು ಉಳಿದ ಕ್ರೀಡಾಪಟುಗಳಿಗೆ ಸಿಗುತ್ತಿಲ್ಲ ಎಂಬುದು ಕಹಿ ಸತ್ಯ. ಗೌರವ, ಮರ್ಯಾದೆಗಳು ಹಾಗಿರಲಿ ಉಳಿದ ಕ್ರೀಡಾಪಟುಗಳಿಗೆ ಸರಿಯಾಗಿ ಮೂಲಭೂತ ಸೌಕರ್ಯ ಕೂಡ ಸಿಗ್ತಿಲ್ಲ ಎಂಬ ಬೆಚ್ಚಿ ಬೀಳಿಸುವ ವಿಚಾರ ಕೂಡ ಇದೀಗ ಹೊರ ಬಿದ್ದಿದೆ.
ಡ್ಯುರಾಂಡ್ ಕಪ್ನ ಸಂದರ್ಭದಲ್ಲಿ ತನ್ನ ರಾಷ್ಟ್ರೀಯ ಫುಟ್ಬಾಲ್ ನಾಯಕನಿಗೆ ಆದ ಅವಮಾನವನ್ನು ನಾವು ಕಂಡಿದ್ದೇವೆ. ಭಾರತದ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿಗೆ ಪ್ರಶಸ್ತಿ ವಿತರಣೆ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲ ಅವರನ್ನು ತಳ್ಳಿ ಅವಮಾನ ಮಾಡಿದ್ದರು. ಈ ವಿಡಿಯೋ ವೈರಲ್ ಕೂಡ ಆಗಿತ್ತು. ಇದೀಗ ಇದನ್ನೂ ಮೀರಿದ ಮತ್ತೊಂದು ಇಡೀ ಭಾರತವೇ ತಲೆ ತಗ್ಗಿಸುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಸ್ಥಳದ ಕೊರತೆಯಿಂದಾಗಿ ಜ್ಯೂನಿಯರ್ ಕಬ್ಬಡ್ಡಿ ಆಟಗಾರರಿಗೆ ಶೌಚಾಲಯದ ಒಳಗೆ ಆಹಾರವನ್ನು ನೀಡಲಾಗಿದ್ದು ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಇದು ಉತ್ತರ ಪ್ರದೇಶದ ಸಹರಾನ್ಪುರ ಜಿಲ್ಲೆಯಲ್ಲಿ ನಡೆದ ಘಟನೆಯಾಗಿದೆ. ಇಲ್ಲಿ ರಾಜ್ಯ ಮಟ್ಟದ ಅಂಡರ್ 17 ಬಾಲಕಿಯರ ಕಬ್ಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.
ಸಹರಾನ್ಪುರದ ಕ್ರೀಡಾಧಿಕಾರಿ ಅನಿಮೇಶ್ ಸಕ್ಸೇನಾ ಈ ವಿಚಾರವಾಗಿ ಮಾತನಾಡಿದ್ದು ಈ ಎಲ್ಲಾ ಆರೋಪಗಳು ಆಧಾರ ರಹಿತವಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ನಾವು ಕಬ್ಬಡ್ಡಿ ಆಟಗಾರರಿಗೆ ಗುಣಮಟ್ಟದ ಆಹಾರವನ್ನು ನೀಡಿದ್ದೇವೆ ಎಂದು ವಾದಿಸಿದ್ದಾರೆ. ಆದರೆ ಈ ಸಂಬಂಧ ಆಟಗಾರರು ದೂರು ನೀಡಿದ ಬಳಿಕ ಅಡುಗೆಗಾರರಿಗೆ ಛೀಮಾರಿ ಹಾಕಿದ ಸಕ್ಸೇನಾ, ಜಾಗದ ಕೊರತೆಯಿಂದಾಗಿ ಸ್ಟೇಡಿಯಂ ಪೂಲ್ನಲ್ಲಿ ಈ ರೀತಿ ಅಡುಗೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
Kabaddi players were fed food in the bathroom in Saharanpur 300 players had come in the ongoing state kabaddi tournament in the stadium.
— The National Bulletin (@TheNationalBul1) September 19, 2022
Officer suspended#Saharanpur #UP pic.twitter.com/6Hi8xpsgp0
ಕ್ರೀಡಾಂಗಣದಲ್ಲಿ ಸ್ಪರ್ಧೆ ನಡೆಯುತ್ತಿತ್ತು. ಹಾಗೂ ಆಟಗಾರರಿಗೆ ಊಟವನ್ನೂ ಬಡಿಸಲಾಗುತ್ತಿತ್ತು. ಶೌಚಾಲಯದಲ್ಲಿ ಕೆಲವು ಸಮಸ್ಯೆಗಳು ಕಂಡು ಬಂದಿದೆ. ಈ ಸಂಬಂಧ ಡಿಎಂ ಸಾಹಿಬ್ ನನ್ನನ್ನು ತನಿಖೆ ನಡೆಸುವಂತೆ ನಿಯೋಜಿಸಿದ್ದಾರೆ. ಒಂದು ದಿನದಲ್ಲಿ ಈ ಸಂಬಂಧ ವರದಿ ನೀಡುವಂತೆ ಕೇಳಲಾಗಿದೆ. ನಾನು ಈ ಸಂಬಂಧ ಸೂಕ್ತ ತನಿಖೆ ನಡೆಸಲಿದ್ದೇನೆ. ಯಾವುದೇ ಸತ್ಯ ಬೆಳಕಿಗೆ ಬಂದರೂ ನಾನು ಕೂಡಲೇ ಜಿಲ್ಲಾಧಿಕಾರಿಗಳಿಗೆ ವರದಿ ನೀಡುತ್ತೇನೆ ಎಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ರಜನೀಶ್ ಕುಮಾರ್ ಮಿಶ್ರಾ ಹೇಳಿದ್ದಾರೆ.
ಇದನ್ನು ಓದಿ : Shivamogga police:ಶಿವಮೊಗ್ಗದಲ್ಲಿ ಐಸಿಸ್ ಚಟುವಟಿಕೆ : ಇಬ್ಬರು ಶಂಕಿತ ಉಗ್ರರ ಬಂಧನ, ಮತ್ತೋರ್ವನಿಗಾಗಿ ಶೋಧ
ಇದನ್ನೂ ಓದಿ : KSP Constable Recruitment 2022 : ಕರ್ನಾಟಕ ರಾಜ್ಯ ಪೋಲೀಸ್ ಇಲಾಖೆ; 3000ಕ್ಕೂ ಹೆಚ್ಚು ಕಾನಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Kabaddi Players Served Food in Toilet; SHOCKING Video Goes Viral