Shivamogga police: ಶಿವಮೊಗ್ಗದಲ್ಲಿ ಐಸಿಸ್​ ಚಟುವಟಿಕೆ : ಇಬ್ಬರು ಶಂಕಿತ ಉಗ್ರರ ಬಂಧನ, ಮತ್ತೋರ್ವನಿಗಾಗಿ ಶೋಧ

ಶಿವಮೊಗ್ಗ : Shivamogga police : ಶಿವಮೊಗ್ಗದಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಕೋಮು ಸಂಘರ್ಷ ಸಂಭವಿಸಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ಜಿಲ್ಲೆಯಲ್ಲಿ ಉಗ್ರ ಚಟುವಟಿಕೆ ಕೂಡ ನಡೆಯುತ್ತಿದೆಯಾ ಎಂಬ ಅನುಮಾನ ಮೂಡಿದೆ. ಈ ಮಾತಿಗೆ ಪುಷ್ಠಿ ಎಂಬಂತೆ ಶಿವಮೊಗ್ಗ ಜಿಲ್ಲಾ ಪೊಲೀಸರು ಮೂವರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಬಂಧಿತರನ್ನು ತೀರ್ಥಹಳ್ಳಿ ಶಾರಿಕ್​, ಮಾಜ್​ ಹಾಗೂ ಯಾಸೀನ್​ ಎಂದು ಗುರುತಿಸಲಾಗಿದೆ. ಶಿವಮೊಗ್ಗದ ಸಿದ್ದೇಶ್ವರ ನಗರದ ಯಾಸೀನ್​, ತೀರ್ಥಹಳ್ಳಿಯ ಶಾರಿಕ್​ ಹಾಗೂ ಮಂಗಳೂರಿನ ಮಾಜ್​​ 2020ರಲ್ಲಿ ಗೋಡೆ ಬರಹ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಈ ಮೂವರು ಆರೋಪಿಗಳನ್ನು ಗ್ರಾಮಾಂತರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತರಿಗೆ ಐಸಿಸ್​ ಉಗ್ರರ ಜೊತೆ ಸಂಪರ್ಕವಿದೆ ಎಂಬ ಮಾಹಿತಿ ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ. ಆಗಸ್ಟ್​ 15ರಂದು ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಫೋಟೋ ವಿಚಾರವಾಗಿ ದೊಡ್ಡ ಸಂಘರ್ಷ ಸಂಭವಿಸಿತ್ತು. ಈ ಸಂದರ್ಭದಲ್ಲಿ ಬಟ್ಟೆ ಅಂಗಡಿ ವ್ಯಾಪಾರಿ ಪ್ರೇಮ್​ ಸಿಂಗ್​ ಎಂಬಾತನಿಗೆ ಚಾಕುವಿನಿಂದ ಇರಿಯಲಾಗಿತ್ತು. ಈ ತನಿಖೆಯ ಭಾಗವಾಗಿ ಭದ್ರಾವತಿ ಡಿವೈಎಸ್ಪಿ ಜಿತೇಂದ್ರ ಜಬೀವುಲ್ಲಾ ಮೊಬೈಲ್​ ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಈತನಿಗೆ ಉಗ್ರ ಸಂಘಟನೆಗಳ ಜೊತೆ ಸಂಪರ್ಕವಿದೆ ಎಂಬ ಬೆಚ್ಚಿ ಬೀಳಿಸುವ ಮಾಹಿತಿಯೊಂದು ಲಭ್ಯವಾಗಿತ್ತು.

ಈ ದುಷ್ಕರ್ಮಿಗಳು ಐಸಿಸ್​ ಸಹಾಯವನ್ನು ಪಡೆದು ರಾಜ್ಯದಲ್ಲಿ ಬಹು ದೊಡ್ಡ ಭಯೋತ್ಪಾದಕ ಕೃತ್ಯವನ್ನು ಎಸಗಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ಈ ಪ್ರಕರಣದಲ್ಲಿ ಯಾಸೀನ್​ ಹಾಗೂ ಮಾಜ್​ನನ್ನು ಪೊಲೀಸರು ಬಂಧಿಸಿದ್ದು ಮತ್ತೊಬ್ಬ ಆರೋಪಿ ಶಾರಿಕ್​ಗಾಗಿ ಶೋಧ ಕಾರ್ಯ ಮುಂದುವರಿಸಿದ್ದೇವೆ ಎಂದು ಶಿವಮೊಗ್ಗ ಎಸ್ಪಿ ಬಿ.ಎಂ ಲಕ್ಷ್ಮೀ ಪ್ರಸಾದ್​ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

ಇದನ್ನು ಓದಿ : Yuvraj Singh SIX 6S : ಯುವಿ 6 ಸಿಕ್ಸರ್‌ಗಳ ವಿಶ್ವ ವಿಕ್ರಮಕ್ಕೆ ತುಂಬಿತು 15 ವರ್ಷ; ಮಗನ ಜೊತೆ ಕೂತು ಹೈಲೈಟ್ಸ್ ವೀಕ್ಷಿಸಿದ ಸಿಕ್ಸರ್ ಕಿಂಗ್

ಇದನ್ನೂ ಓದಿ : ಆಸೀಸ್ ವಿರುದ್ಧದ ಟಿ20 ಸರಣಿ: ಭಾರತ ತಂಡಕ್ಕೆ ಸಿಕ್ಕ ಹೊಸ ಬೌಲರ್; ಹೆಸರು ಕೇಳಿದ್ರೆ ಗಾಬರಿಯಾಗ್ತೀರಿ

Shivamogga police arrest suspected terrorists in shivamogga

Comments are closed.