Kargil Vijay Divas 2022:ಇಂದಿಗೆ 23 ವರ್ಷಗಳ ಹಿಂದೆ ನಡೆದ ಕಾರ್ಗಿಲ್ ಯುದ್ಧದಲ್ಲಿ ವೈರಿ ರಾಷ್ಟ್ರ ಪಾಕಿಸ್ತಾನದ ವಿರುದ್ಧ ಭಾರತವು ವಿಜಯವನ್ನು ಸಾಧಿಸಿದ ಸವಿ ನೆನಪಿಗಾಗಿ ಪ್ರತಿ ವರ್ಷ ಜುಲೈ 26ರಂದು ದೇಶದಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಗುತ್ತದೆ. ಈ ಯುದ್ಧದ ಸಂದರ್ಭದಲ್ಲಿ ಲೆಹ್ ಲಡಾಕ್ ಪ್ರಾಂತ್ಯದಲ್ಲಿ ಒಳ ನುಸುಳಿ ಬಂದಿದ್ದ ಪಾಕಿಸ್ತಾನಿ ಸೈನ್ಯವನ್ನು ಭಾರತೀಯ ಯೋಧರು ಕಠಿಣ ಹೋರಾಟವನ್ನು ಕೈಗೊಂಡು ಅವರನ್ನು ಹೊಡೆದುರುಳಿಸಿದರು ಆಪರೇಷನ್ ವಿಜಯ್ನ ಭಾಗವಾಗಿ ಟೈಗರ್ ಹಿಲ್ ಸೇರಿದಂತೆ ವಿವಿಧ ಪ್ರದೇಶಗಳನ್ನು ಭಾರತೀಯ ಸೈನ್ಯವು ವಶಪಡಿಸಿಕೊಂಡಿತು. ಲಡಾಖ್ನ ಕಾರ್ಗಿಲ್ನಲ್ಲಿ 60 ದಿನಗಳಿಗೂ ಅಧಿಕ ಕಾಲ ಈ ಸಂಘರ್ಷ ನಡೆದಿತ್ತು.
ಕಾರ್ಗಿಲ್ ಯುದ್ಧದ ಹುತಾತ್ಮರಾದ ನೂರಾರು ಭಾರತೀಯ ಸೈನಿಕರಿಗೆ ಗೌರವನ್ನು ಸಲ್ಲಿಸುವ ನಿಮಿತ್ತ ಪ್ರತಿ ವರ್ಷ ಈ ದಿನವನ್ನು ಕಾರ್ಗಿಲ್ ವಿಜಯ ದಿವಸ ಎಂದು ಆಚರಿಸಲಾಗುತ್ತದೆ. ಈ ದಿನವನ್ನು ಸ್ಮರಿಸುವ ಹಿಂದಿನ ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ.
ಕಾರ್ಗಿಲ್ ವಿಜಯ್ ದಿವಸ 2022 : ಇತಿಹಾಸ ಹಾಗೂ ಮಹತ್ವ :
1971ರಲ್ಲಿ ಇಂಡೋ – ಪಾಕ್ ಯುದ್ಧದ ಬಳಿಕ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆಯೇ ಇತ್ತು . 1998ರಲ್ಲಿ ಎರಡೂ ರಾಷ್ಟ್ರಗಳು ಪರಮಾಣು ಪರೀಕ್ಷೆಗಳನ್ನು ನಡೆಸಿದವು. 1999ರಲ್ಲಿ ಭಾರತ ಹಾಗೂ ಪಾಕಿಸ್ತಾನ ಲಾಹೋರ್ ಘೋಷಣೆಗೆ ಸಹಿ ಹಾಕಿದ್ದರು. ಅಲ್ಲದೇ ಕಾಶ್ಮೀರದ ಸಮಸ್ಯೆಗೆ ಶಾಂತಿಯುತವಾಗಿ ಪರಿಹಾರವನ್ನು ಕೈಗೊಳ್ಳೋಣ ಎಂದೂ ನಿರ್ಧರಿಸಲಾಗಿತ್ತು. ಆದರೆ ಪಾಕಿಸ್ತಾನ ಮಾತ್ರ ಬೆನ್ನು ಹಿಂದೆ ಚೂರಿ ಹಾಕುವ ಕೆಲಸವನ್ನು ಅದಾಗಲೇ ಆರಂಭಿಸಿತ್ತು. ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಂದಿನ್ ಪಾಕ್ ಪ್ರಧಾನಿ ನವಾಜ್ ಷರೀಫ್ ಜೊತೆಯಲ್ಲಿ ಸ್ನೇಹ ಹಸ್ತ ಚಾಚಿದ್ದರು. ಆದರೆ ಪಾಕ್ ಮಾತ್ರ ಕಾರ್ಗಿಲ್ ಮಾರ್ಗವಾಗಿ ಭಾರತದ ಒಳಗೆ ನುಸುಳಲು ಎಲ್ಲಾ ರೀತಿಯ ಪ್ಲಾನ್ ಮಾಡಿತ್ತು.
ಅದು ಜನವರಿ – ಫೆಬ್ರವರಿ ಸಮಯ. ಈ ಸಮಯದಲ್ಲಿ ಅತಿಯಾದ ಚಳಿ ಇರೋದ್ರಿಂದ ಭಾರತೀಯ ಯೋಧರು ಗಡಿಯಲ್ಲಿ ಪೆಟ್ರೋಲಿಂಗ್ ಮಾಡೋದಿಲ್ಲ ಎಂದು ಕಾರ್ಗಿಲ್ನ ವಿವಿಧ ಭಾಗಗಳಲ್ಲಿ ಒಳ ನುಸುಳಿದ ಪಾಕ್ ಸೈನ್ಯ ಅಲ್ಲಲ್ಲಿ ಡೇರೆ ಹೂಡಿತ್ತು. ಪಾಕಿಸ್ತಾನವು ಕಾಶ್ಮೀರ ಹಾಗೂ ಲಡಾಕ್ ನಡುವಿನ ಸಂಪರ್ಕವನ್ನು ಕಡಿತಗೊಳಿಸುವ ಗುರಿಯನ್ನು ಹೊಂದಿತ್ತು, ಪಾಕ್ ಒಳ ನುಸುಳುವಿಕೆಯನ್ನು ಆಪರೇಷನ್ ಭದ್ರ್ ಎಂದು ಹೆಸರಿಸಲಾಗಿತ್ತು.
ಭಾರತೀಯ ಪಡೆಗಳು ಸಿಯಾಚಿನ್ ಗ್ಲೇಸಿಯರ್ನಿಂದ ಹಿಂದೆ ಸರಿಯುವಂತೆ ಮಾಡುವುದು ಆಪರೇಷನ್ ಭದ್ರ್ದ ಭಾಗವಾಗಿತ್ತು . 1999ರ ಮೇ ಹಾಗೂ ಜುಲೈ ನಡುವೆ ಕಾರ್ಗಿಲ್ ಜಿಲ್ಲೆಯಲ್ಲಿ ಯುದ್ಧ ನಡೆಯಿತು. ಆ ಸಮಯದಲ್ಲಿ ಅಂದಿನ ಪಾಕ್ ಸೇನೆಯ ಮುಖ್ಯಸ್ಥರಾಗಿದ್ದ ಜನರಲ್ ಪರ್ವೇಜ್ ಮುಷರಫ್ ಯುದ್ಧದ ಹಿಂದೆ ಇದ್ದರು ಎನ್ನಲಾಗಿದೆ. 2007ರಲ್ಲಿ ಈ ಎಲ್ಲಾ ವಿಚಾರಗಳನ್ನು ಸ್ವತಃ ನವಾಜ್ ಷರೀಫ್ ಬಹಿರಂಗಗೊಳಿಸಿದ್ದಾರೆ.ಮೊದ ಮೊದಲು ಇದು ಬಂಡುಕೋರರ ಕೃತ್ಯ ಎಂದು ವಾದಿಸಿದ್ದ ಪಾಕ್ ಬಳಿಕ ಕದನದ ಹಿಂದೆ ಇರುವುದು ಎಂಬ ಸತ್ಯವನ್ನು ಒಪ್ಪಿಕೊಂಡಿತ್ತು.
ಯುದ್ಧದ ಎರಡನೇ ಹಂತದಲ್ಲಿ ಯುದ್ಧದ ತಂತ್ರದ ಸಾರಿಗೆ ಮಾರ್ಗಗಳನ್ನು ವಶಪಡಿಸಿಕೊಳ್ಳುವ ಮೂಲಕ ಭಾರತವು ಪಾಕ್ಗೆ ತಕ್ಕ ಉತ್ತರವನ್ನು ನೀಡಿತ್ತು. ಭಾರತೀಯ ವಾಯುಪಡೆಯ ಸಹಾಯದಿಂದ ಅಂತಿಮ ಹಂತದಲ್ಲಿ ಭಾರತವು ಯುದ್ಧವನ್ನು ಮುಕ್ತಾಯಗೊಳಿಸಿತು.
ಕಾರ್ಗಿಲ್ ವಿಜಯ್ ದಿವಸ್ ಆಚರಣೆಯ ಮೂಲಕ ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧರನ್ನು ಗೌರವಿಸಲಾಗುತ್ತದೆ. ದೆಹಲಿಯಲ್ಲಿ ಪ್ರಧಾನಿ ಮೋದಿ ಪ್ರತಿ ವರ್ಷ ಇಂಡಿಯಾ ಗೇಟ್ ಬಳಿಯಲ್ಲಿ ಅಮರ್ ಜವಾನ್ ಜ್ಯೋತಿಯಲ್ಲಿ ಸೈನಿಕರಿಗೆ ಗೌರವವನ್ನು ಸಲ್ಲಿಸುತ್ತಾರೆ.
ಈ ವರ್ಷ ಕಾರ್ಗಿಲ್ ವಿಜಯ್ ದಿವಸ್‌ನ 23 ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ.. ಭಾರತೀಯ ಸೇನೆಯು ದೆಹಲಿಯಿಂದ ಕಾರ್ಗಿಲ್ ವಿಜಯ್ ದಿವಸ್ ಮೋಟಾರ್ ಬೈಕ್ ಯಾತ್ರೆಗೆ ಚಾಲನೆ ನೀಡಿದೆ.
ಇದನ್ನು ಓದಿ : Lovlina Borgohain : ‘ಮಾನಸಿಕ ಕಿರುಕುಳ ನೀಡ್ತಿದ್ದಾರೆ’ : ಭಾರತೀಯ ಬಾಕ್ಸಿಂಗ್ ಒಕ್ಕೂಟದ ವಿರುದ್ಧ ಒಲಿಂಪಿಕ್ ಪದಕ ವಿಜೇತೆ ಗಂಭೀರ ಆರೋಪ
ಇದನ್ನೂ ಓದಿ : Most Consecutive ODI Series WIN : ಪಾಕ್ ವಿಶ್ವದಾಖಲೆ ಪೀಸ್ ಪೀಸ್, ವಿಂಡೀಸ್”ನಲ್ಲಿ ಅದ್ವಿತೀಯ ವಿಶ್ವದಾಖಲೆ ಬರೆದ ಯಂಗ್ ಇಂಡಿಯಾ
Kargil Vijay Divas 2022: Date, History, Significance, and Commemorations