Fiscal Wisdom : ಆರ್ಥಿಕ ಸ್ಥಿರತೆಗೆ ಸರಳ ಸೂತ್ರಗಳು

Fiscal Wisdom : ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಜೀವನ ನಡೆಸಲು ಆರ್ಥಿಕವಾಗಿ ಸ್ಥಿರವಾಗಿರುವುದು ಬಹಳ ಮುಖ್ಯ. ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳುವುದು ಸುಲಭದ ಮಾತಲ್ಲ ಇಂದು ದುಡಿದದ್ದು ಇಂದೇ ಖರ್ಚಾಗಬಹುದು ಅಥವಾ ಬಹಳ ದಿನಗಳಿಂದ ಕೂಡಿಟ್ಟ ಹಣವನ್ನು ಯಾವುದೋ ಮಹತ್ಕಾರ್ಯಕ್ಕೆ ವಿನಿಯೋಗಿಸಬೇಕಾಗಿ ಬರಬಹುದು. ಆರ್ಥಿಕ ಭದ್ರತೆಯೇ ಮನುಷ್ಯನನ್ನು ಹೆಚ್ಚು ಸದೃಢನನ್ನಾಗಿಸುತ್ತದೆ. ಅದಕ್ಕಾಗಿಯೇ ನಾವು  ಖರ್ಚುವೆಚ್ಚಗಳನ್ನು ಹೇಗೆ ನಿಭಾಯಿಸುತ್ತೇವೆ ಎಂಬುದರ ಮೇಲೆ ಈ ಆರ್ಥಿಕ ಸ್ಥಿರತೆ ಹಾಗೂ ಸುರಕ್ಷತೆ ಅವಲಂಬಿಸಿದೆ. ಆದರೆ ಈ ಸರಳ ವಿಧಾನಗಳನ್ನು ಅನುಸರಿಸುವ ಮುಲಕ ಆರ್ಥಿಕವಾಗಿ ಸಧೃಡವಾಗಿರಬಹುದು.

ಕೇವಲ ಒಂದೇ ಕೆಲಸವನ್ನು ನಂಬಿ ಕೂರದೆ ಅನೇಕ ಆರ್ಥಿಕ ಮೂಲಗಳನ್ನು ಹೊಂದಿರುವುದು. ಸಾಮಾನ್ಯವಾಗಿ ಶ್ರೀಮಂತ ವ್ಯಕ್ತಿಗಳು ಬಹಳಷ್ಟು ಆರ್ಥಿಕ ಮೂಲಗಳನ್ನು ಹೊಂದಿರುತ್ತಾರೆ. ಖರ್ಚಿನ ಮೇಲೆ ನಿಗಾ ಇಡುವುದು. ಬೇಕಾಬಿಟ್ಟಿ ಹಣವನ್ನು ವ್ಯಯಿಸುವುದರಿಂದ ಶ್ರೀಮಂತರಾಗಲು ಸಾಧ್ಯವಿಲ್ಲ ಜೊತೆಗೆ ಅನಗತ್ಯ ವಸ್ತುಗಳಿಗಾಗಿ ಹಣವನ್ನು ಪೋಲು ಮಾಡುವುದು. ಉದಾಹರಣೆಗೆ ಬಟ್ಟೆ, ಚಪ್ಪಲಿ, ವಾಹನ ಖರೀದಿ, ಅಲಂಕಾರಿಕ ವಸ್ತುಗಳು ಹೀಗೆ ಅಗತ್ಯಕ್ಕಿಂತ ಹೆಚ್ಚು, ಶಕ್ತಿ ಮೀರಿ ಖರ್ಚು ಮಾಡುವುದು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುತ್ತದೆ. ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಿ ಸೂಕ್ತವಾದ ಆರ್ಥಿಕ ನೀತಿಗಳನ್ನು ಅನುಸರಿಸುತ್ತಾ ಬಂದರೆ ನಮ್ಮ ಭವಿಷ್ಯದಲ್ಲಿ ಎದುರಾಗುವ ಯಾವುದೇ ಪರಿಸ್ಥಿತಿ ಅಥವಾ ಅವಕಾಶಗಳನ್ನು ಎದುರಿಸಲು ಸಾಮರ್ಥ್ಯ ದೊರಕುವುದು ಮಾತ್ರವಲ್ಲ, ಮಾನಸಿಕವಾದ ಬೆಂಬಲವೂ ದೊರಕುತ್ತದೆ.

ಅರ್ಥಿಕ ಸ್ವಾತಂತ್ರ್ಯಕ್ಕೆ ಒಂದು ಆಯವ್ಯಯದ ಲೆಕ್ಕಾಚಾರ ಅಥವಾ ಬಜೆಟ್ ಒಂದನ್ನು ಹಮ್ಮಿಕೊಳ್ಳುವುದು ಅತ್ಯವಶ್ಯಕ. ಅಂದರೆ ನಿಗದಿತ ಅವಧಿಯಲ್ಲಿ ನಮ್ಮ ಆದಾಯ ಮತ್ತು ಖರ್ಚುಗಳನ್ನು ಪರಿಗಣಿಸಿ ಇದರ ಸಾಧಕ ಬಾಧಕಗಳ ರೂಪುರೇಶೆಗಳನ್ನು ಹಾಕಿಕೊಳ್ಳುವುದು. ಒಂದು ಬಜೆಟ್ ಪ್ಲಾನ್ ಮಾಡಿ ಆ ಪ್ರಕಾರವೇ ನಡೆದುಕೊಳ್ಳುತ್ತಾ ಬಂದರೆ ಲಾಭ ಜಾಸ್ತಿ. ಜೊತೆಗೆ ದುಡಿದ ಹಣದಲ್ಲಿ ಸ್ವಲ್ಪ ಉಳಿತಾಯ ಮಾಡಿದರೆ ಕಷ್ಟಕಾಲಕ್ಕೆ ಸಹಾಯವಾಗುತ್ತದೆ.

ಅಲ್ಲದೆ ದಿನನಿತ್ಯ ಜೀವನದಲ್ಲಿ ಉತ್ತಮ ಸಾಮಾಜಿಕ ಜ್ಞಾನ ಹೊಂದಿರುವುದು ಬಹಳ ಮುಖ್ಯ. ನಮ್ಮ ಮನಸ್ಥಿತಿ ಹಾಗೂ ವರ್ತನೆಯು ಕೂಡ ಆರ್ಥಿಕ ಸದೃಢತೆಗೆ ಕಾರಣವಾಗುತ್ತದೆ. ಆರ್ಥಿಕವಾಗಿ ಸಬಲರಾಗುವುದು ಪ್ರತಿಯೊಬ್ಬರ ಕನಸು ಆದರೆ ಇದನ್ನು ಸಾಧ್ಯವಾಗಿಸುವುದು ಮಾತ್ರ ಆರ್ಥಿಕ ಶಿಸ್ತನ್ನು ಪಾಲಿಸಿದಾಗ ನಮ್ಮ ದೃಢ ಸಂಕಲ್ಪದಿಂದ ಮಾತ್ರ ನಾವು ಆರ್ಥಿಕವಾಗಿ ಸಧೃಡ ಮತ್ತು ಸ್ವತಂತ್ರರಾಗಲು ಸಾಧ್ಯ.

ಇದನ್ನೂ ಓದಿ: Benefits of Swimming: ಈಜುವುದರಿಂದ ಆಗುತ್ತೆ ಎಂತವರಿಗೂ ಒತ್ತಡ ನಿವಾರಣೆ!

ಇದನ್ನೂ ಓದಿ: Ranveer Singh : ಬೆತ್ತಲೆ ಫೋಟೋಶೂಟ್ ಮಾಡಿಸಿದ ರಣವೀರ್​ ಸಿಂಗ್​ ವಿರುದ್ಧ ದಾಖಲಾಯ್ತು ದೂರು

(Fiscal Wisdom: Simple Formulas for Financial Stability)

Comments are closed.