ಭಾನುವಾರ, ಏಪ್ರಿಲ್ 27, 2025
HomeNationalKashmir Files: ‘ದಿ ಕಾಶ್ಮೀರ್ ಫೈಲ್ಸ್’ ಒಂದು ಅಶ್ಲೀಲ ಸಿನಿಮಾ ಎಂದ ಚಲನಚಿತ್ರೋತ್ಸವ ತೀರ್ಪುಗಾರ

Kashmir Files: ‘ದಿ ಕಾಶ್ಮೀರ್ ಫೈಲ್ಸ್’ ಒಂದು ಅಶ್ಲೀಲ ಸಿನಿಮಾ ಎಂದ ಚಲನಚಿತ್ರೋತ್ಸವ ತೀರ್ಪುಗಾರ

- Advertisement -

ಪಣಜಿ :  Kashmir Files ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ, ವಿವಾದಕ್ಕೂ ನಾಂದಿ ಹಾಡಿದ ‘ಕಾಶ್ಮೀರ್ ಫೈಲ್ಸ್ ಸಿನಿಮಾ’ ಒಂದು ಪ್ರಚಾರ ಪ್ರಿಯ ಸಿನಿಮಾ, ಪಕ್ಷಪಾತಿ ಧೋರಣೆಯ ಉದ್ದೇಶ ಹೊಂದಿರೋ ಒಂದು ಅಶ್ಲೀಲ ಅಥವಾ ಕೀಳು ಅಭಿರುಚಿಯ ಸಿನಿಮಾ ಅಂತಾ ಇಸ್ರೇಲಿ ಚಲನಚಿತ್ರ ನಿರ್ದೇಶಕ ನಡಾವ್ ಲ್ಯಾಪಿಡ್ ಹೇಳಿದ್ದಾರೆ.

ಗೋವಾದಲ್ಲಿ ನಡೆಯುತ್ತಿರುವ 53ನೇ ಅಂತಾರಾಷ್ಟ್ರೀಯ ಚಲನಚಿತ್ರ ಜ್ಯೂರಿ ಸದಸ್ಯರು ಅಂದ್ರೆ ತೀರ್ಪುಗಾರರ ಮುಖ್ಯಸ್ಥರು ‘ಕಾಶ್ಮೀರ್ ಫೈಲ್ ಸಿನಿಮಾವನ್ನ ಟೀಕಿಸಿದ್ದಾರೆ. ‘ಕಾಶ್ಮೀರ್ ಫೈಲ್ಸ್ ಸಿನಿಮಾವನ್ನ ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿದ್ರು. 1990ರ ದಶಕದಲ್ಲಿ ಕಾಶ್ಮೀರ ಕಣಿವೆಯಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಕುರಿತು ಚಿತ್ರವನ್ನ ನಿರ್ಮಿಸಲಾಗಿದ್ದು, ಕ್ರೈಂ ಸನ್ನಿವೇಶಗಳನ್ನ ವೈಭವಿಕರಿಸಲಾಗಿತ್ತು. ಇದು ದೇಶಾದ್ಯಂತ ದೊಡ್ಡ ಚರ್ಚೆಯನ್ನ ಹುಟ್ಟುಹಾಕಿತ್ತು.. ಕಾಂಗ್ರೆಸ್ ಬಿಜೆಪಿ ಮಧ್ಯೆ ರಾಜಕೀಯ ತಿಕ್ಕಾಟಕ್ಕೂ ಸಾಕ್ಷಿಯಾಗಿತ್ತು..

ಇದೀಗ ಗೋವಾದಲ್ಲಿ ನಡೆದ 53 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ತೀರ್ಪುಗಾರರು ಈ ಸಿನಿಮಾವನ್ನ ಟೀಕಿಸಿದ್ದಾರೆ. ಇದನ್ನು “ಪ್ರಚಾರ” ಮತ್ತು “ಅಶ್ಲೀಲ ಚಲನಚಿತ್ರ” ಎಂದು ಕರೆದ ಇಸ್ರೇಲಿ ಚಲನಚಿತ್ರ ನಿರ್ಮಾಪಕ ನಡಾವ್ ಲ್ಯಾಪಿಡ್, ಎಲ್ಲರೂ” ಉತ್ಸವದಲ್ಲಿ ಚಲನಚಿತ್ರವನ್ನು ಪ್ರದರ್ಶನಗೊಂಡ ಈ ಸಿನಿಮಾ ನೋಡೋದಕ್ಕೆ ಎಲ್ಲರೂ ವಿಚಲಿತರಾಗಿದ್ರು, ಮತ್ತು ಆಘಾತಕ್ಕೊಳಲಾಗಿದ್ರು. ಇಂತಹ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ, ಸ್ಪರ್ಧಾತ್ಮಕ ವಿಭಾಗಕ್ಕೆ ಇದು ಸೂಕ್ತವಲ್ಲದ ಪ್ರಚಾರಕ ಚಲನಚಿತ್ರದಂತೆ ನಮಗೆ ತೋರುತ್ತಿದೆ ಎಂದಿದ್ದಾರೆ ಲ್ಯಾಪಿಡ್

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ ಮತ್ತು ಪಲ್ಲವಿ ಜೋಶಿ ಅಭಿನಯದ ಚಲನಚಿತ್ರವು ಕಳೆದ ವಾರ ಉತ್ಸವದ “ಪನೋರಮಾ” ವಿಭಾಗದಲ್ಲಿ ಪ್ರದರ್ಶನಗೊಂಡಿತ್ತು. ಚಿತ್ರವು ಬಿಜೆಪಿಯಿಂದ ಶ್ಲಾಘಿಸಲ್ಪಟ್ಟಿದೆ ಮತ್ತು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ತೆರಿಗೆ ಮುಕ್ತ ಎಂದು ಘೋಷಿಸಲ್ಪಟ್ಟಿದೆ ಮತ್ತು ಬಾಕ್ಸ್ ಆಫೀಸ್ ಹಿಟ್ ಆಗಿತ್ತು. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಕಳೆದ ಮೇ ತಿಂಗಳಲ್ಲಿ, ಸಿಂಗಾಪುರ  ಈ ಚಲನಚಿತ್ರವನ್ನು ನಿಷೇಧಿಸಿ , ಚಿತ್ರದ ಕುರಿತು ಕಳವಳ ವ್ಯಕ್ತಪಡಿಸಿತ್ತು.

ಕಾಶ್ಮೀರ್ ಫೈಲ್ಸ್ ಸಿನಿಮಾ ಕುರಿತು ಇಸ್ರೇಲಿ ನಿರ್ಮಾಪಕ ಹೇಳಿದ ಮಾತಿಗೆ ಚಿತ್ರದ ನಟ ಅನುಪಮ್ ಖೇರ್ ತಿರುಗೇಟು ಕೊಟ್ಟಿದ್ದಾರೆ, ಕಾಶ್ಮೀರದ ಚಿತ್ರಗಳನ್ನ ಟ್ವೀಟ್ ಮಾಡಿರೋ ಅನುಪಮ್ ಖೇರ್ ‘ಸುಳ್ಳಿನ ಎತ್ತರ ಎಷ್ಟೇ ಇರಲಿ..ಸತ್ಯಕ್ಕೆ ಹೋಲಿಸಿದರೆ ಇದು ಯಾವಾಗಲೂ ಚಿಕ್ಕದಾಗಿರುತ್ತೆ’ ಎಂದಿದ್ದಾರೆ.

https://twitter.com/AnupamPKher/status/1597293128767385602

ಇದನ್ನೂ ಓದಿ : Vijay Hazare Trophy Karnataka : ಪಂಜಾಬ್ ವಿರುದ್ಧ ಸೇಡು ತೀರಿಸಿಕೊಂಡು ಸೆಮಿಫೈನಲ್’ಗೆ ಲಗ್ಗೆ ಇಟ್ಟ ಕರ್ನಾಟಕ

ಇದನ್ನೂ ಓದಿ : Guddattu shri vinayaka temple: ಕಲ್ಲು ಬಂಡೆಯ ನಡುವೆ ಮೂಡಿಬಂದ ಬಲಮುರಿ ಗಣಪ

Kashmir Files IFFI 2022 jury head calls The Kashmir Files vulgar movie

RELATED ARTICLES

Most Popular