ತಿರುವನಂತಪುರ : ಕೊರೊನಾ ವೈರಸ್ ಸೋಂಕು ಕೇರಳದಲ್ಲಿ ನಿಯಂತ್ರಣಕ್ಕೆ ಬರುತ್ತಿಲ್ಲ. ಕಳೆದ 24 ಗಂಟೆಗಳ ಅವಧಿಯಲ್ಲಿ ಕೇರಳದಲ್ಲಿ ಬರೋಬ್ಬರಿ 21,427 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿದ್ದು, 179 ಮಂದಿಯನ್ನು ಬಲಿ ಪಡೆದಿದೆ. ಅಷ್ಟೇ ಅಲ್ಲಾ ಪಾಸಿಟಿವಿ ದರ 15.5ಕ್ಕೆ ಏರಿಕೆ ಕಂಡಿದೆ.
ಕೇರಳದ ಆರೋಗ್ಯ ಇಲಾಖೆ ನೀಡಿರುವ ಅಂಕಿಅಂಶಗಳ ಪ್ರಕಾರ ಬುಧವಾರ 21,427 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆಯ 37,25,005 ಕ್ಕೆ ಏರಿಕೆ ಕಂಡಿವೆ. ಅದ್ರಲ್ಲೂ 179 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದು, ಕೊರೊನಾದಿಂದ ಮೃತಪಟ್ಟಿರುವವರ ಸಂಖ್ಯೆ 19,049 ಕ್ಕೆ ಏರಿಕೆಯಾಗಿದೆ.
ಕೇರಳದಲ್ಲಿ ದಿನ ಕಳೆಯುತ್ತಿದ್ದಂತೆಯೇ ಪಾಸಿಟಿವಿಟಿ ದರದಲ್ಲಿ ಭಾರೀ ಏರಿಕೆಯನ್ನು ಕಾಣುತ್ತಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಚೇತರಿಕೆಯ ಪ್ರಮಾಣ ಏರಿಕೆಕಂಡಿದೆ. ಇದೀಗ 18730 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ, ಇದುವರೆಗೆ 35,48,196 ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೇರಳದಲ್ಲಿ ನಿತ್ಯವೂ ಇಪ್ಪತ್ತು ಸಾವಿರಕ್ಕೂ ಅಧಿಕ ಪ್ರಕರಣ ದಾಖಲಾಗುತ್ತಿದ್ದು, ಸದ್ಯ1,77,683 ಸಕ್ರೀಯ ಪ್ರಕರಣಗಳಿವೆ ಎಂದು ಕೇರಳ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಹೊಸ ಕೊರೊನಾ ಸೋಂಕಿತರ ಪೈಕಿ 86 ಮಂದಿ ಆರೊಗ್ಯ ಕಾರ್ಯಕರ್ತರಾಗಿದ್ದು, 108 ಮಂದಿ ಹೊರ ರಾಜ್ಯದಿಂದ ಬಂದಿದವರು. ಉಳಿದಂತೆ 971 ಪ್ರಕರಣಗಳಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿಲ್ಲ. ಅಲ್ಲದೇ ರಾಜ್ಯದಲ್ಲಿ ಕೊರೊನಾ ಸೋಂಕಿತರ ಜೊತೆಗೆ ಸಂಪರ್ಕದಲ್ಲಿರುವ 4,98,630 ಜನರನ್ನು ಆರೋಗ್ಯ ಇಲಾಖೆಯ ಕಣ್ಗಾವಲಿನಲ್ಲಿದೆ. ಅದ್ರಲ್ಲೂ 4,70,771 ಮಂದಿ ಮನೆ ಮತ್ತು ಸಾಂಸ್ಥಿಕ ಕ್ವಾರಂಟೈನಲ್ಲಿದ್ರೆ, 27,859 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ : ದ.ಕ, ಉಡುಪಿಯಲ್ಲಿ ನಿಯಂತ್ರಣಕ್ಕೆ ಬರ್ತಿಲ್ಲಾ ಕೊರೊನಾ : ಈ ನಿಯಮಗಳನ್ನು ಪಾಲಿಸಿ ಅಂತಿದೆ ಆರೋಗ್ಯ ಇಲಾಖೆ