ಶಬರಿಮಲೆ : ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿಯ ಸನ್ನಿಧಿ ಮಂಡಲಪೂಜೆ (Mandala pooja) ಹಾಗೂ ಮಕರಜ್ಯೋತಿ ದರ್ಶನಕ್ಕೆ (Makara Jyothi Darsanam) ಸಜ್ಜಾಗುತ್ತಿದೆ. ಈ ನಡುವಲ್ಲೇ ಶಬರಿಮಲೆಯ ಭಕ್ತರಿಗೆ ಹೊಸ ರೂಲ್ಸ್ ಜಾರಿ ಮಾಡಿದ್ದು, ಕೇರಳ ಹೈಕೋರ್ಟ್ (Kerala High Court) ಮಹತ್ವದ ಆದೇಶ ಹೊರಡಿಸಿದೆ.
ಶಬರಿಮಲೆಯ ಪವಿತ್ರ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಅಯ್ಯಪ್ಪಸ್ವಾಮಿಯ ದರ್ಶನಕ್ಕೆ ಬರುವ ಭಕ್ತರು ತಮ್ಮ ವಾಹನಗಳನ್ನು ಹೂವು ಹಾಗೂ ಬಾಳೆಗಿಡಗಳಿಂದ ಅಲಂಕರಿಸುತ್ತಾರೆ. ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಭಕ್ತರು ತಮ್ಮ ವಾಹನಗಳನ್ನು ಸರ್ವಾಲಂಕಾರ ಮಾಡುತ್ತಾರೆ.

ಆದರೆ ಮಂಡಲ ಪೂಜೆ ಹಾಗೂ ಮಕರಜ್ಯೋತಿ ದರ್ಶನಕ್ಕೆ ಬರುವ ಅಯ್ಯಪ್ಪ ಭಕ್ತರು ಯಾವುದೇ ಕಾರಣಕ್ಕೆ ತಮ್ಮ ವಾಹನವನ್ನು ಹೂವು ಮತ್ತು ಬಾಳೆಯ ಗಿಡಗಳಿಂದ ಅಲಂಕಾರ ಮಾಡಬಾರದು ಎಂದು ಕೇರಳ ಹೈಕೋರ್ಟ್ ಆದೇಶ ಹೊರಡಿಸಿದೆ. ಯಾವುದೇ ಕಾರಣಕ್ಕೂ ಶಬರಿಮಲೆಗೆ ಬರುವ ವಾಹನಗಳನ್ನು ಹೂವು ಮತ್ತು ಎಲೆಗಳಿಂದ ಅಲಂಕರಿಸಬಾರದು. ಇದು ಮೋಟಾರು ವಾಹನ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಹೈಕೋರ್ಟ್ ಸೂಚಿಸಿದೆ.
ಇದನ್ನೂ ಓದಿ : ಪತಿ ತನ್ನ ಪತ್ನಿಯ ಪೋನ್ ಸಂಭಾಷಣೆ ರೆಕಾರ್ಡ್ ಮಾಡುವುದು ಅಪರಾಧ : ಹೈಕೋರ್ಟ್ ಮಹತ್ವದ ತೀರ್ಪು
ಇನ್ನು ಸರಕಾರಿ ಸ್ವಾಮ್ಯದ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್‌ಗಳಿಗೂ ಕೂಡ ನ್ಯಾಯಲಯ ಸೂಚನೆಯನ್ನು ನೀಡಿದೆ. ಭದ್ರತೆ ಧಕ್ಕೆಯಾಗುವ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದ್ದು, ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ನ್ಯಾಯಾಲಯ ಹೇಳಿದೆ. ಅಲ್ಲದೇ ನಿಯಮ ಉಲ್ಲಂಘನೆ ಮಾಡುವವರ ವಿರುದ್ದ ಸೂಕ್ತಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.

ಕೇರಳ ಹೊರತುಪಡಿಸಿ ಸರಕಾರಿ ಬೋರ್ಡ್‌ನೊಂದಿಗೆ ಬರುವ ಯಾತ್ರಾರ್ಥಿ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಸೂಚನೆಯನ್ನು ನೀಡಿದೆ. ಶಬರಿಮಲೆಗೆ ಬೆದರಿಕೆಯ ಹಿನ್ನೆಲೆ ಯಲ್ಲಿ ಹಲವು ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅದ್ರಲ್ಲೂ ಮಕರ ಜ್ಯೋತಿ ಸಂಭ್ರಮಕ್ಕೆ ಶಬರಿಮಲೆಗೆ ಲಕ್ಷಾಂತರ ಮಂದಿ ಆಗಮಿಸುತ್ತಿದ್ದಾರೆ.
ಇದನ್ನೂ ಓದಿ : ಸರಕಾರಿ ನೌಕರರಿಗೆ ದೀಪಾವಳಿ ಬೋನಸ್ ಘೋಷಣೆ : ಆದ್ರೆ ಈ ನೌಕರರಿಗೆ ಮಾತ್ರವೇ ಅವಕಾಶ
ಮಳೆದ ಬಾರಿಯೂ ಮಂಡಲ ಪೂಜೆ ಹಾಗೂ ಮಕರಜ್ಯೋತಿಗೆ ಬರುವ ವಾಹನಗಳ ಮುಂಭಾಗದ ಗಾಜನ್ನು ಮುಚ್ಚುವಂತೆ ಹೂವಿನಿಂದ ಅಲಂಕರಿಸಿರುವ ವಾಹನಗಳ ವಿರುದ್ದ ಸೂಕ್ತಕ್ರಮವನ್ನು ಕೈಗೊಳ್ಳಲಾಗಿತ್ತು. ಅಲ್ಲದೇ ಶಬರಿಮಲೆಯ ದರ್ಶನಕ್ಕೆ ಕೆಎಸ್‌ಆರ್‌ಟಿಸಿ ೧೨ ವರ್ಷಕ್ಕಿಂತ ಕಡಿಮೆ ಹಳೆಯದಾಗಿ ಇರುವ ಬಸ್ಸುಗಳನ್ನು ಮಾತ್ರವೇ ಬಳಕೆ ಮಾಡುವುದಾಗಿ ತಿಳಿಸಿದೆ.

ಈ ವರ್ಷ ಶಬರಿಮಲೆಯಲ್ಲಿ ನಡೆಯುವ ಮಂಡಲ ಹಾಗೂ ಮಕರ ಸಂಕ್ರಾಂತಿ ಉತ್ಸವಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನೇತತ್ವದಲ್ಲಿ ಉನ್ನತ ಮಟ್ಟದ ಸರಕಾರಿ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದೆ. ಸಭೆಯಲ್ಲಿ ಮುಜರಾಯಿ ರಾಜ್ಯ ಸಚಿವ ಕೆ.ರಾಧಾಕೃಷ್ಣನ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ : ಯುವತಿಯರ ಮದುವೆಗೆ 10 ಗ್ರಾಂ ಚಿನ್ನ, 1 ಲಕ್ಷ ರೂಪಾಯಿ ಉಚಿತ : ಗೃಹಲಕ್ಷ್ಮೀ ಬೆನ್ನಲ್ಲೇ ಮಹಾಲಕ್ಷ್ಮೀ ಯೋಜನೆ ಘೋಷಣೆ
ಇನ್ನು ಶಬರಿಮಲೆಯಲ್ಲಿ ಮಂಡಲ ಮಹೋತ್ಸವದ ನಿಮಿತ್ತ ನವೆಂಬರ್ 17ರಂದು ಶಬರಿಮಲೆ ದ್ವಾರ ತೆರೆಯಲಾಗುತ್ತದೆ. ಈ ವೇಳೆಯಲ್ಲಿ ಕೈಗೊಳ್ಳಬೇಕಾದ ವ್ಯವಸ್ಥೆ, ಯಾತ್ರಾರ್ಥಿಗಳಿಗ ಭದ್ರತೆ, ಮೂಲಸೌಕರ್ಯ ಸೇರಿದಂತೆ ಹಲವು ವಿಚಾರಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.
Kerala High Court Issued New Order To Sabarimala Ayyappa Devotees Makara Jyothi Darsanam and Mandala pooja