ದಸರಾ ಹಬ್ಬಕ್ಕೆ ಬ್ಲೂ ಸೀರೆಯಲ್ಲಿ ಸ್ಪೆಶಲ್ ಪೋಟೋಶೂಟ್: ಮತ್ತೊಮ್ಮೆ ಮಿಂಚಿದ ರಾಕಿಂಗ್ ನಟ ಯಶ್, ರಾಧಿಕಾ ಪಂಡಿತ್

ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸ್ಟಾರ್ ಜೋಡಿಗಳಿವೆ. ಅ ಪೈಕಿ ಅತ್ಯಂತ ಕ್ಯೂಟ್ ಹಾಗೂ ಸಖತ್ ಸುದ್ದಿಯಾಗೋ ಜೋಡಿ ಅಂದ್ರೇ ಅದು ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ (Radhika Pandit) ಹಾಗೂ ರಾಕಿಂಗ್ ಸ್ಟಾರ್ ಯಶ್ (Actor Yash).

ನಾಡಿನಾದ್ಯಂತ ಹಬ್ಬದ ಸಂಭ್ರಮ‌ ಮನೆಮಾಡಿದೆ. ವಿಜಯದಶಮಿ ಸಂಭ್ರಮದಲ್ಲಿರೋ ಸ್ಯಾಂಡಲ್ ವುಡ್ ಗೆ ಹಾಗೂ ತಮ್ಮ ಅಭಿಮಾನಿಗಳಿಗೆ ರಾಮಾಚಾರಿ ಜೋಡಿ ಹಬ್ಬದೂಟದಂತ ಪೋಟೋಶೂಟ್ ಶೇರ್ ಮಾಡೋ ಮೂಲಕ ಸಂಭ್ರಮ‌ಹೆಚ್ಚಿಸಿದೆ. ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸ್ಟಾರ್ ಜೋಡಿಗಳಿವೆ. ಅ ಪೈಕಿ ಅತ್ಯಂತ ಕ್ಯೂಟ್ ಹಾಗೂ ಸಖತ್ ಸುದ್ದಿಯಾಗೋ ಜೋಡಿ ಅಂದ್ರೇ ಅದು ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ (Radhika Pandit) ಹಾಗೂ ರಾಕಿಂಗ್ ಸ್ಟಾರ್ ಯಶ್ (Actor Yash).

Radhika Pandit Special photoshoot in blue saree Dussehra festival Rocking actor Yash, Radhika Pandit shine again
Image Credit : Radhika Pandit/Instagram

ಬಹುವರ್ಷಗಳ ಕಾಲ ಪ್ರೀತಿಸಿ ಮದುವೆಯಾದ ಈ ಜೋಡಿ ತಮ್ಮ ಪ್ರೀತಿಯನ್ನು ಸ್ಯಾಂಡಲ್ ವುಡ್ ನಲ್ಲಿ ಯಾರಿಗೂ ಗೊತ್ತಿಲ್ಲದಂತೆ ಕಾಪಾಡಿಕೊಂಡು ಬಂದಿದ್ದು ಇತಿಹಾಸ. ಆದರೆ ಅಷ್ಟೇ ಸಂಭ್ರಮದಿಂದ ಮದುವೆ,ಪ್ರೀತಿ ಎಲ್ಲವನ್ನು ಹೇಳಿಕೊಂಡ ಈ ಕಪಲ್ಸ್ ಅದ್ದೂರಿ ವಿವಾಹ, ಗೃಹಪ್ರವೇಶ, ಮಕ್ಕಳ‌ ನಾಮಕರಣ ಎಲ್ಲವನ್ನು ನೆರವೇರಿಸಿ ಫರ್ಪೆಕ್ಟ್ ಕಪಲ್ಸ್ ಎನ್ನಿಸಿಕೊಂಡ್ರು.

Radhika Pandit Special photoshoot in blue saree Dussehra festival Rocking actor Yash, Radhika Pandit shine again
Image Credit : Radhika Pandit/Instagram

ಸದ್ಯ ಸಿನಿಮಾದಿಂದ ಬ್ರೇಕ್ ಪಡೆದುಕೊಂಡಿರೋ ರಾಧಿಕಾ ಪಂಡಿತ್ ಬ್ಯುಸಿ ಮಮ್ಮಿಯಾಗಿ ತಮ್ಮ ಪೇರೆಂಟ್ ಡೇಸ್ ಎಂಜಾಯ್ ಮಾಡ್ತಿದ್ದಾರೆ. ಆಯ್ರಾ ಮತ್ತು ಯಥರ್ವ ಜೊತೆ ಮನೆಯಲ್ಲೇ ಇದ್ದು ಮಕ್ಕಳ ಆರೈಕೆಯಲ್ಲಿದ್ದಾರೆ. ಯಶ್ ಕೆಜಿಎಫ್ ಹಾಗೂ ಕೆಜಿಎಫ್ -2 ಸಿನಿಮಾ ಬಳಿಕ ಬಹುಬೇಡಿಕೆಯ ನಟ ಎನ್ನಿಸಿಕೊಂಡಿದ್ದು, ಸದ್ಯ ತಮ್ಮ 19 ನೇ ಸಿನಿಮಾದ ಸಿದ್ಧತೆಯಲ್ಲಿದ್ದಾರೆ.

ಇದನ್ನೂ ಓದಿ : 7 ವರ್ಷಗಳ ಬಳಿಕ ಮಲೆಯಾಳಂನಲ್ಲಿ ಮೇಘನಾ‌ ರಾಜ್ ಸರ್ಜಾ ಸಿನಿಮಾ : ತತ್ಸಮ ತದ್ಬವ ಅ.27 ಕ್ಕೆ ರಿಲೀಸ್

ಇನ್ನೂ ಅನೌನ್ಸ್ ಆಗದೇ ಇರೋ ಈ ಸಿನಿಮಾ ಬಾಲಿವುಡ್, ಸ್ಯಾಂಡಲ್ ವುಡ್ ಸೇರಿದಂತೆ ಎಲ್ಲಾ ಚಿತ್ರರಂಗದಲ್ಲೂ ಕುತೂಹಲ ಹೆಚ್ಚಿಸಿದೆ. ಹೀಗೆ ಬ್ಯುಸಿ‌ ಶೆಡ್ಯೂಲ್ ನಡುವೆಯೂ ನಟ ಯಶ್ ತಮ್ಮ ಫ್ಯಾಮಿಲಿಗೆ ಟೈಂ ಕೊಡೋದನ್ನು ಮರೆಯೋದಿಲ್ಲ. ಹೀಗಾಗಿಯೇ ಎಲ್ಲ ಹಬ್ಬಗಳಲ್ಲೂ ಯಶ್ ತಮ್ಮ ಫ್ಯಾಮಿಲಿ ಪೋಟೋಗಳಿಗೆ ಪೋಸ್ ನೀಡುತ್ತಾರೆ.

Radhika Pandit Special photoshoot in blue saree Dussehra festival Rocking actor Yash, Radhika Pandit shine again
Image Credit : Radhika Pandit/Instagram

ಅದ್ದೂರಿಯಾಗಿ ಪೋಟೋಶೂಟ್ ಮಾಡಿಸಿಕೊಂಡು ಪೋಟೋಗಳನ್ನು ಶೇರ್ ಮಾಡಿ ಅಭಿಮಾನಿಗಳ ಹಬ್ಬದ ಸಂಭ್ರಮ ಇಮ್ಮಡಿಸುವಂತೆ ನೋಡಿ ಕೊಳ್ತಾರೆ. ಮಹಾನವಮಿಯ ಆಯುಧ ಪೂಜೆಯಂದು ನಟಿ ರಾಧಿಕಾ ಪಂಡಿತ್ ತಮ್ಮ ಮನೆಯ ಐಷಾರಾಮಿ ಕಾರುಗಳನ್ನು ಪೂಜಿಸುವ ವೀಡಿಯೋ ಶೇರ್ ಮಾಡಿದ್ದರು.

ಇದನ್ನೂ ಓದಿ : ಬಂಗಾಳಿ ಬ್ಯೂಟಿ ನಟಿ ಐಂದ್ರಿತಾ ರೈ ಹೊಸ ಪೋಟೋಶೂಟ್ 

ಅಷ್ಟೇ ಅಲ್ಲ ಆಯ್ರಾ ಹಾಗೂ ಯಥರ್ವ ಸೈಕಲ್ ಗಳಿಗೂ ಪೂಜೆ ಮಾಡಿದ ವಿಡಿಯೋಗಳನ್ನು ರಾಧಿಕಾ ಶೇರ್ ಮಾಡಿದ್ದರು. ವಿಜಯ ದಶಮಿ ಯಂದು ನಟಿ ರಾಧಿಕಾ ಹಾಗೂ ಯಶ್ ತಮ್ಮ ಮಲ್ಲೇಶ್ವರಂ ನಿವಾಸದಲ್ಲಿ ಪೂಜೆ ನೆರವೇರಿಸಿದ್ದಾರೆ. ಇದಾದ ಬಳಿಕ ಸ್ಯಾಂಡಲ್ ವುಡ್ ನ ರಾಕಿಂಗ್ ಕಪಲ್ಸ್ ಪೋಟೋಶೂಟ್ ಗೆ ಪೋಸ್ ನೀಡಿದ್ದಾರೆ.

Radhika Pandit Special photoshoot in blue saree Dussehra festival Rocking actor Yash, Radhika Pandit shine again
Image Credit : Radhika Pandit/Instagram

ಲೈಟ್ ಬ್ಲೂ ಕಲರ್ ಗೆ ಮಧ್ಯ‌ಮಧ್ಯದಲ್ಲಿ ಸಿಲ್ವರ್ ಲೈನ್ಸ್ ಇರೋ ಸಾಫ್ಟ್ ಸೀರೆ, ಸ್ಲಿವ್ ಲೆಸ್ ಬ್ಲೌಸ್, ಆಂಟಿಕ್ ಜ್ಯುವೆಲ್ಲರಿಯಲ್ಲಿ ರಾಧಿಕಾ ಸಖತ್ ಬ್ಯೂಟಿಫುಲ್ ಆಗಿ ಕಾಣ್ತಿದ್ದರೇ, ನಟ ಯಶ್ ಗ್ರೇ ಕಲರ್ ಕುರ್ತಾ ಹಾಗೂ ವೈಟ್ ಪ್ಯಾಂಟ್ ನಲ್ಲಿ ಸಖತ್ ಡ್ರೆಡಿಶನಲ್ ಆಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ : ಮತ್ತೆ ನಟನೆಗೆ ಮರಳಿದ್ರಾ ನಟಿ ಅಮೂಲ್ಯ ? ಶೇರ್ ಮಾಡಿದ್ರು ಸ್ಪೆಷಲ್‌ ವಿಡಿಯೋ

ಪೋಟೋ ಶೇರ್ ಮಾಡಿದ ಕೆಲವೇ ನಿಮಿಷಗಳಲ್ಲಿ ಸಾವಿರಾರು ಜನರು ಲೈಕ್ಸ್ ಒತ್ತಿದ್ದು, ಅಣ್ಣಾ ಅತ್ತಿಗೆ ಸೂಪರ್ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಸದ್ಯ ಯಶ್ 19 ನೇ ಸಿನಿಮಾ‌ ಯಾವುದು ಎಂಬ ಕುತೂಹಲಕ್ಕೆ ಇದುವರೆಗೂ ಉತ್ತರ ಸಿಕ್ಕಿಲ್ಲ. ದಸರಾ ಹಬ್ಬದ ವೇಳೆಗಾದರೂ ಈ ಪ್ರಶ್ನೆಗೆ ಉತ್ತರ ಸಿಗಬಹುದೆಂಬ ನೀರಿಕ್ಷೆ ಹುಸಿಯಾಗಿದೆ.

Radhika Pandit Special photoshoot in blue saree Dussehra festival Rocking actor Yash, Radhika Pandit shine again
Image Credit : Radhika Pandit/Instagram

ದಸರಾ ವೇಳೆಗೂ ಯಶ್ ಸಿನಿಮಾದ ಬಗ್ಗೆ ಯಾವುದೇ ಅಪ್ಡೇಟ್ ಸಿಕ್ಕಿಲ್ಲ. ಯಶ್ 19 ನೇ ಸಿನಿಮಾದ ಕೆಲಸ ಈ ನವೆಂಬರ್ ವೇಳೆಗೆ ಶೂಟಿಂಗ್ ಆರಂಭಿಸಿ ಡಿಸೆಂಬರ್ 2024 ರ ವೇಳೆಗೆ ತೆರೆಗೆ ಬರೋ ಸಾಧ್ಯತೆ ಇದೆ ಎನ್ನಲಾಗ್ತಿದ್ದು, ದೀಪಾವಳಿ ವೇಳೆಗಾದರೂ ಯಶ್ ಸಿನಿಮಾದ ಗುಟ್ಟು ಬಿಟ್ಟು ಕೊಡ್ತಾರಾ ಕಾದು ನೋಡಬೇಕಿದೆ.

Radhika Pandit Special photoshoot in blue saree Dussehra festival Rocking actor Yash, Radhika Pandit shine again

Comments are closed.