ಕೇರಳ : remove bra for NEET exam : ಪರೀಕ್ಷೆಗಳಲ್ಲಿ ನಕಲು ನಡೆಯಬಾರದು ಅಥವಾ ಇನ್ನಿತರ ಯಾವುದೇ ಅಕ್ರಮಗಳು ಉಂಟಾಗಬಾರದು ಅಂತಾ ಪರೀಕ್ಷಾ ಕೇಂದ್ರಗಳಲ್ಲಿ ಕೆಲವೊಂದು ನಿಯಮಗಳನ್ನು ವಿಧಿಸಲಾಗುತ್ತದೆ. ಆದರೆ ಈ ನಿಯಮಗಳು ಅಭ್ಯರ್ಥಿಗಳಿಗೆ ಮಾನಸಿಕವಾಗಿ ಹಿಂದೆ ನೀಡುವಂತಿರಬಾರದು. ಕೇರಳದ ಕೊಲ್ಲಂ ಜಿಲ್ಲೆಯ ಚಡಮಂಗಳದ ಮಾರ್ಥೋಮಾ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಸೆಂಟರ್ನಲ್ಲಿ ನಡೆಯುತ್ತಿದ್ದ ನೀಟ್ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯುವ ಮುನ್ನ ನೀನು ಬ್ರಾ ಕಳಚಬೇಕು ಎಂದು ಪರೀಕ್ಷಾ ಸಿಬ್ಬಂದಿ ಪೀಡಿಸಿದ ಘಟನೆಯೊಂದು ವರದಿಯಾಗಿದೆ. ಭಾನುವಾರದಂದು ನಡೆದ ಪರೀಕ್ಷೆಯಲ್ಲಿ ಈ ಘಟನೆ ಸಂಭವಿಸಿದ್ದು ಈ ಬಗ್ಗೆ ವಿದ್ಯಾರ್ಥಿನಿಯ ಪೋಷಕರು ಕೊಲ್ಲಂ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ ಅಭ್ಯರ್ಥಿಯು ಮೆಟಲ್ ಹುಕ್ಗಳನ್ನು ಹೊಂದಿರುವ ಬ್ರಾ ಧರಿಸಬಾರದು ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ ಎಂಬುದು ವಿದ್ಯಾರ್ಥಿನಿಯ ತಂದೆ ಗೋಪಕುಮಾರ್ ಸೂರನಾಡ್ ವಾದವಾಗಿದೆ. ನನ್ನ ಪುತ್ರಿಯ ಒಳ ಉಡುಪನ್ನು ತೆಗೆಯಲು ಒಪ್ಪದೇ ಇದ್ದಾಗ ಆಕೆಗೆ ಪರೀಕ್ಷೆಯನ್ನೇ ಬರೆಯಬೇಡ ಎಂದು ಹೇಳುವ ಮೂಲಕ ಮಾನಸಿಕ ಒತ್ತಡವನ್ನು ಹೇರಿದ್ದಾರೆ. ನನ್ನ ಪುತ್ರಿ ಅನೇಕ ಸಮಯದಿಂದ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು. ಆದರೆ ಈ ಘಟನೆ ಬಳಿಕ ಆಕೆಗೆ ಸರಿಯಾಗಿ ಪರೀಕ್ಷೆಯನ್ನು ಎದುರಿಸಲು ಸಾಧ್ಯವಾಗಲಿಲ್ಲ. ಆಕೆ ಅಳುತ್ತಾ ಮನೆಗೆ ಬಂದಿದ್ದಾಳೆ. ಪರೀಕ್ಷಾ ಸಿಬ್ಬಂದಿ ಒಳ ಉಡುಪನ್ನು ತೆಗೆಯಲೇಬೇಕೆಂದು ಪಟ್ಟು ಹಿಡಿದಿದ್ದರು. ಇದರಿಂದ ಅನೇಕ ವಿದ್ಯಾರ್ಥಿನಿಯರು ಮುಜುಗರ ಅನುಭವಿಸಿದ್ದಾರೆ ಎಂದು ಗೋಪಕುಮಾರ್ ಹೇಳಿದ್ದಾರೆ.
ಇದು ಮಾತ್ರವಲ್ಲದೇ ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಿ ವಿದ್ಯಾರ್ಥಿನಿಯರನ್ನು ಒಂದೇ ಕೊಠಡಿಯೊಳಗೆ ಸೇರಿಸಿ ಒಳ ಉಡುಪನ್ನು ತೆಗೆದು ಬರುವಂತೆ ಹೇಳಿದ್ದಾರೆ. ಇದು ಖಂಡಿತವಾಗಿಯೂ ಒಂದು ಮಾನಸಿಕ ಹಿಂದೆಯಾಗಿದೆ ಎಂದು ಗೋಪಕುಮಾರ್ ಆರೋಪಿಸಿದ್ದಾರೆ.
ಈ ನಡುವೆ ಮಾರ್ ಥೋಮಾ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಷನ್ ಟೆಕ್ನಾಲಜಿ ಅಧಿಕಾರಿಗಳು ಈ ಆರೋಪವನ್ನು ನಿರಾಕರಿಸಿದ್ದು ನಮ್ಮ ಯಾವುದೇ ಸಿಬ್ಬಂದಿ ಈ ಕೃತ್ಯವನ್ನು ಎಸಗಿಲ್ಲ ಎಂದು ಹೇಳಿದ್ದಾರೆ. ಬಯೋಮೆಟ್ರಿಕ್ ಹಾಜರಾತಿ ಪರೀಕ್ಷೆಗೆ ಎನ್ಟಿಎನಿಂದ ಎರಡು ಏಜೆನ್ಸಿಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದೆ .
ಇದನ್ನು ಓದಿ : actress kajal agarwal : ನಾಲ್ಕು ತಿಂಗಳ ಕಂದಮ್ಮನೊಂದಿಗೆ ಗೋವಾ ಬೀಚ್ನಲ್ಲಿ ಕಾಜಲ್ ಅಗರ್ವಾಲ್ ಎಂಜಾಯ್
Kerala man alleges daughter forced to remove bra for NEET exam