ಭಾನುವಾರ, ಏಪ್ರಿಲ್ 27, 2025
HomeNationalAcid Attack boyfriend : ಪ್ರೀತಿಸಿ ಮದುವೆಗೆ ನಿರಾಕರಿಸಿದ ಯುವಕನ ಮುಖಕ್ಕೆ ಆಸಿಡ್‌ ಎರಚಿದ 2...

Acid Attack boyfriend : ಪ್ರೀತಿಸಿ ಮದುವೆಗೆ ನಿರಾಕರಿಸಿದ ಯುವಕನ ಮುಖಕ್ಕೆ ಆಸಿಡ್‌ ಎರಚಿದ 2 ಮಕ್ಕಳ ತಾಯಿ

- Advertisement -

ಕೊಚ್ಚಿ : ಅವರಿಬ್ಬರೂ ಪರಸ್ಪರ ಪ್ರೀತಿಸಿದ್ದರು. ನಂತರ ಮದುವೆಯಾಗೋದಕ್ಕೂ ತಯಾರಿ ನಡೆಸಿದ್ದರು. ಆದರೆ ಯುವಕ ಮದುವೆಯನ್ನು ನಿರಾಕರಿಸಿದ್ದ. ಇಷ್ಟಕ್ಕೆ ಕೋಪಗೊಂಡ ಮಹಿಳೆಯೋರ್ವರು ಯವಕ ಮೇಲೆ ಆಸಿಡ್‌ ಎರಚಿದ (Acid Attack boyfriend ) ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ಆದಿಮಾಲಿ ಎಂಬಲ್ಲಿ ನಡೆದಿದೆ.

ತಿರುವನಂತಪುರಂ ಜಿಲ್ಲೆಯ ಪೂಜಾಪ್ಪುರ ಮೂಲದ ಅರುಣ್‌ ಕುಮಾರ್‌ ( 27 ವರ್ಷ) ಎಂಬಾತನೇ ಆಸಿಡ್‌ ದಾಳಿಗೆ ಒಳಗಾದ ಯುವಕ. ಆರೋಪಿ ಶಿಬಾ ( 35 ವರ್ಷ) ಎಂಬಾಕೆಯೇ ಆಸಿಡ್‌ ಹಾಕಿದ ಮಹಿಳೆ. ಅರುಣ್‌ ಕುಮಾರ್‌ ಹಾಗೂ ಶಿಬಾ ಇಬ್ಬರಿಗೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿತ್ತು. ಪರಿಚಯ ಪರಸ್ಪರ ಪ್ರೀತಿಗೆ ತಿರುಗಿತ್ತು. ಇಬ್ಬರೂ ಮದುವೆಯಾಗುವುದಕ್ಕೆ ನಿರ್ಧಾರ ಮಾಡಿಕೊಂಡಿದ್ದರು. ಆದರೆ ಶಿಬಾಗೆ ಈಗಾಗಲೇ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದರು. ಈ ವಿಷಯ ತಿಳಿಯುತ್ತಲೇ ಅರುಣ್‌ ಕುಮಾರ್‌ ಮದುವೆ ಪ್ರಸ್ತಾಪವನ್ನು ತಿರಸ್ಕಾರ ಮಾಡಿದ್ದಾನೆ.

ನಂತರದಲ್ಲಿ ಅರುಣ್‌ ಕುಮಾರ್‌ ಬೇರೊಂದು ಹುಡುಗಿಯನ್ನು ಮದುವೆಯಾಗಲು ರೆಡಿಯಾಗಿದ್ದಾನೆ. ಇದು ಶಿಬಾಳ ಮನಸ್ಥಾಪಕ್ಕೆ ಕಾರಣವಾಗಿತ್ತು. ನಂತರದಲ್ಲಿ ಶಿಬಾ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದಾಳೆ. ಅಲ್ಲದೇ ನಿರಂತರವಾಗಿ ಬ್ಲ್ಯಾಕ್‌ಮೇಲ್ ಮಾಡಲು ಪ್ರಯತ್ನಿಸಿದ್ದಳು ಎಂದು ಅರುಣ್‌ ಕುಮಾರ್‌ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾನೆ. ಅದ್ರಲ್ಲೂ ನವೆಂಬರ್ 16 ರಂದು ಆದಿಮಲಿ ಸಮೀಪದ ಇರುಂಪುಪಾಲಂನಲ್ಲಿರುವ ಸೇಂಟ್ ಆಂಟೋನಿ ಚರ್ಚ್ ಬಳಿಯಲ್ಲಿ ಶಿಬಾ ಅರುಣ್ ಕುಮಾರ್ ಗೆ ಕರೆ ಮಾಡಿ ಬರುವುದಕ್ಕೆ ಹೇಳಿದ್ದಾಳೆ.

ಆದರೆ ಅರುಣ್‌ ಬರುತ್ತಿದ್ದಂತೆಯೇ ಆತನ ಬಳಿಗೆ ತೆರಳಿ ಆಸಿಡ್‌ ದಾಳಿ ನಡೆಸಿದ್ದಾಳೆ. ಈ ಘಟನೆ ಸಂಪೂರ್ಣವಾಗಿ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೇ ಆಸಿಡ್‌ ದಾಳಿಯಿಂದಾಗಿ ಅರುಣ್‌ ಕುಮಾರ್‌ ಒಂದು ಕಣ್ಣು ದೃಷ್ಟಿ ಕಳೆದುಕೊಂಡಿದ್ದು, ಶಿಬಾ ಮುಖ ಹಾಗೂ ಕೈಗೆ ಗಂಭೀರವಾಗಿ ಗಾಯವಾಗಿದೆ. ಸದ್ಯ ಅರುಣ್ ಕುಮಾರ್ ನನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಆರೋಪಿ ಶಿಬಾಳನ್ನು ಆದಿಮಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ : Bike Ride for Appu : ಅಪ್ಪುಗಾಗಿ ಬೈಕ್ ರೈಡ್ : ಪುನೀತ್ ರಾಜ್ ಕುಮಾರ್ ಸ್ಮರಿಸಲು ವಿಶಿಷ್ಟ ಕಾರ್ಯಕ್ರಮ

ಇದನ್ನೂ ಓದಿ : ansi kabeer : ಕೇರಳ ಸುಂದರಿ ಅನ್ಸಿ ಕಬೀರ್‌ ಸಾವು : ತನಿಖೆಯ ವಿವರ ಸೋರಿಕೆಗೆ ಎಡಿಜಿಪಿ ಅಸಮಾಧಾನ

( Mother of 2 children’s Acid Attack on boyfriend face for rejecting marriage proposal : Caught on cam)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular