Norovirus : ವಿಶ್ವದಲ್ಲಿ ಕೊರೊನಾ ವೈರಸ್ ಹಾಗೂ ಮಂಕಿಪಾಕ್ಸ್ನ ಆತಂಕದ ನಡುವೆಯೇ ಕೇರಳದಲ್ಲಿ ಇದೀಗ ಮತ್ತೊಂದು ಮಾರಿ ವಕ್ಕರಿಸಿದೆ. ಕೇರಳದ ತಿರುವನಂತಪುರಂನಲ್ಲಿ ಪ್ರಾಥಮಿಕ ಶಾಲೆಯ ಇಬ್ಬರು ವಿದ್ಯಾರ್ಥಿಗಳು ನೊರೊವೈರಸ್ ಸೋಂಕಿಗೆ ತುತ್ತಾಗಿದ್ದಾರೆ. ಸೋಂಕಿತ ಮಕ್ಕಳಲ್ಲಿ ವಾಂತಿ, ಭೇದಿ ಹಾಗೂ ಜ್ವರದ ಲಕ್ಷಣಗಳು ಕಂಡು ಬಂದಿವೆ. ನೊರೊವೈರಸ್ ಒಂದು ಸಾಂಕ್ರಾಮಿಕ ಕಾಯಿಲೆಯಾಗಿದ್ದು ಇದು ಕಲುಷಿತ ಆಹಾರ, ನೀರುಗಳಿಂದ ಹರಡುತ್ತದೆ.
ಹೆಚ್ಚಿನ ವರದಿಗಾಗಿ ಸೋಂಕಿತ ಮಕ್ಕಳ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಮಧ್ಯಾಹ್ನ ನೀಡಿದ ಊಟದಿಂದ ಈ ಕಾಯಿಲೆ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಈ ಘಟನೆಯ ಬಳಿಕ ಕೇರಳ ಶಿಕ್ಷಣ ಸಚಿವ ವಿ. ಶಿವಕುಟ್ಟಿ ಅಧಿಕಾರಿಗಳೊಂದಿಗೆ ಸಭೆಯನ್ನು ಕರೆದಿದ್ದು ಮಧ್ಯಾಹ್ನದ ಬಿಸಿಯೂಟದಲ್ಲಿ ಕೈಗೊಳ್ಳಬಹುದಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿಯೂ ವಯ್ನಾಡಿನ ಪಶುವೈದ್ಯಕೀಯ ಕಾಲೇಜಿನ ಡಜನ್ಗೂ ಅಧಿಕ ವಿದ್ಯಾರ್ಥಿಗಳು ಇದೇ ವೈರಸ್ನ ಸೋಂಕಿಗೆ ಒಳಗಾಗಿದ್ದರು.
ನೊರೊವೈರಸ್ ಎನ್ನುವುದು ಎಲ್ಲಾ ವಯೋಮಾನದವರಿಗೆ ಬರುವ ಒಂದು ಕಾಯಿಲೆಯಾಗಿದೆ. ಇದು ಅತಿಸಾರವನ್ನು ಉಂಟುಮಾಡವಲ್ಲ ರೋಟವೈರಸ್ನಂತೆಯೇ ಒಂದು ಮಾರಕ ಸೋಂಕಾಗಿದೆ. ಸೋಂಕಿಗೆ ಒಳಗಾದವರಲ್ಲಿ ಮೊದಲು ವಾಂತಿ, ಅತಿಸಾರದಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಸೋಂಕಿಗೆ ತುತ್ತಾದ ಎರಡು ದಿನಗಳ ಬಳಿಕ ಈ ಲಕ್ಷಣಗಳು ಕಾಣಿಸಿಕೊಳ್ಳಲು ಶುರುವಾಗುತ್ತದೆ. ಇದಾದ ಬಳಿಕ ರೋಗಿಗಳು ಹೊಟ್ಟೆ ನೋವು, ಜ್ವರ, ತಲೆನೋವು ಹಾಗೂ ಮೈ ಕೈ ನೋವುಗಳಿಂದ ಬಳಲುತ್ತಾರೆ. ವಿಪರೀತ ಸಂದರ್ಭಗಳಲ್ಲಿ ನಿರ್ಜಲೀಕರಣ ಕೂಡ ಉಂಟಾಗಬಹುದು.
ಇದನ್ನು ಓದಿ : Maharashtra : ಮುಂಬೈನಲ್ಲಿ ಕೋವಿಡ್ -19 ಆರ್ಭಟ : ಲಾಕ್‌ಡೌನ್ ಜಾರಿ ಸಾಧ್ಯತೆ
ಇದನ್ನೂ ಓದಿ : India To Tour West Indies : ಭಾರತ ವೆಸ್ಟ್ ಇಂಡಿಸ್ ಸರಣಿ : T20, ಏಕದಿನ ಸರಣಿ ವೇಳಾಪಟ್ಟಿ ಪ್ರಕಟ
Kerala: Two primary school students infected with Norovirus