idol of his mother : ತಾಯಿ ಸವಿನೆನೆಪಿಗಾಗಿ ಎರಡೆರಡು ಮೂರ್ತಿಗಳನ್ನು ನಿರ್ಮಿಸಿದ ಪುತ್ರ

ಗದಗ : idol of his mother : ತಾಯಿ ಪ್ರೀತಿ ಹಾಗೂ ಮಮತೆಗೆ ಬೇರೆ ಸಾಟಿಯಿಲ್ಲ. ತಾಯಿಯಿಲ್ಲದ ಜೀವನವನ್ನು ಊಹಿಸಿಕೊಳ್ಳುವುದು ತುಂಬಾನೇ ಕಷ್ಟ. ಅಂತದ್ರಲ್ಲಿ ವಿಧಿಯಾಟಕ್ಕೆ ಅನೇಕರು ತಮ್ಮ ತಾಯಿಯನ್ನು ಕಳೆದುಕೊಂಡು ಬಿಡ್ತಾರೆ. ಅದೇ ರೀತಿ ತಾಯಿಯನ್ನು ಕಳೆದುಕೊಂಡ ಗದಗ ಗಜೇಂದ್ರಘಡದ ನಿವಾಸಿಯೊಬ್ಬರು ತಾಯಿಯ ಸವಿನೆನಪಿಗಾಗಿ ಪಂಚಲೋಹ ಹಾಗೂ ಫೈಬರ್​ನಿಂದ ಅವರ ಮೂರ್ತಿಯನ್ನು ನಿರ್ಮಿಸಿ ಪ್ರತಿ ನಿತ್ಯ ಪೂಜೆ ಸಲ್ಲಿಸುವ ಮೂಲಕ ತಾಯಿ ಅಗಲಿಕೆಯ ನೋವನ್ನು ಮರೆಯಲು ಯತ್ನಿಸುತ್ತಿದ್ದಾರೆ.

ಲಕ್ಕಲಕಟ್ಟಿ ಎಂಬ ಗ್ರಾಮದ ನಿವಾಸಿಯಾದ ದೇವಣ್ಣ ಲಿಂಗಪ್ಪ ಬೆನಕನವಾರಿ ಎಂಬವರ ತಾಯಿ 90 ವರ್ಷದ ಶಿವಲಿಂಗಮ್ಮ ಲಿಂಗಪ್ಪ ಬೆನಕವಾರಿ ಕಳೆದ ವರ್ಷ ಮೇ ತಿಂಗಳಲ್ಲಿ ವಿಧಿವಶರಾಗಿದ್ದರು. ಮೃತ ಶಿವಮ್ಮರಿಗೆ ಒಟ್ಟು 11 ಮಂದಿ ಮಕ್ಕಳು. ಏಳು ಮಂದಿ ಪುತ್ರಿಯರು ಹಾಗೂ ನಾಲ್ವರು ಪುತ್ರರಲ್ಲಿ ದೇವಣ್ಣ ಹತ್ತನೇಯವರು. ತಾಯಿ ಮೃತಪಟ್ಟು ಒಂದು ವರ್ಷ ಸರಿದ ಹಿನ್ನೆಲೆಯಲ್ಲಿ ತಮ್ಮ ಸಹೋದರ ಹಾಗೂ ಸಹೋದರಿಯರ ಜೊತೆ ಸೇರಿ ತಾಯಿಯ ಸವಿನೆನಪಿಗಾಗಿ ಪಂಚಲೋಹದ ಮೂರ್ತಿ ಹಾಗೂ ಫೈಬರ್​ ಮೂರ್ತಿಯನ್ನು ನಿರ್ಮಾಣ ಮಾಡಿದ್ದಾರೆ. ಬೆಂಗಳೂರಿನ ಮುರುಳೀಧರನ್​ ಆರ್ಚಾಯ 3 ಲಕ್ಷ ರೂಪಾಯಿ ಮೌಲ್ಯದಲ್ಲಿ ಫೈಬರ್​ ಮೂರ್ತಿ ನಿರ್ಮಿಸಿದ್ದರೆ ಹೊನ್ನಪ್ಪ ಆಚಾರ್ಯ 93 ಸಾವಿರ ರೂಪಾಯಿ ವೆಚ್ಚದಲ್ಲಿ 16 ಕೆಜಿ ತೂಕದ ಪಂಚಲೋಹದ ಮೂರ್ತಿ ನಿರ್ಮಿಸಿದ್ದಾರೆ.


ತಾಯಿಯ ಸವಿನೆನಪಿಗಾಗಿ ಏನನ್ನಾದರೂ ಮಾಡಬೇಕು ಎಂದುಕೊಂಡಿದ್ದ ದೇವಣ್ಣ ಈ ಬಗ್ಗೆ ತಮ್ಮ ಸಹೋದರಿ ಭಾಗ್ಯಲಕ್ಷ್ಮೀ ಎಂಬವರ ಬಳಿ ಚರ್ಚೆ ನಡೆಸಿದ್ದರು. ಅವರೆಲ್ಲರೂ ಒಪ್ಪಿದ ಬಳಿಕ ದೇವಣ್ಣ ಈ ಕಾರ್ಯಕ್ಕೆ ಮುಂದಾಗಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ದೇವಣ್ಣ, ನಾನು ತಾಯಿಯೊಂದಿಗೆ ಉತ್ತಮ ಸಮಯವನ್ನು ಕಳೆದಿದ್ದೇನೆ. ಹೀಗಾಗಿ ಅವರ ಸವಿ ನೆನಪಿಗಾಗಿ ಏನನ್ನಾದರೂ ನಿರ್ಮಿಸಬೇಕೆಂದು ಈ ರೀತಿ ಮಾಡಿದೆ. ನಾನು ತಾಯಿಯ ಮೂರ್ತಿಯನ್ನು ನಿರ್ಮಿಸಲು ಮುಂದಾದಾಗ ಅನೇಕರು ನನಗೆ ದುಡ್ಡಿನ ಬೆಲೆ ಗೊತ್ತಿಲ್ಲ ಎಂದರು. ಇನ್ನೂ ಕೆಲವರು ಈ ರೀತಿ ಸತ್ತವರ ಮೂರ್ತಿ ಮನೆಯಲ್ಲಿ ಇಡಬಾರದು ಎಂದರು. ಆದರೆ ನಾನು ಇದ್ಯಾವುದಕ್ಕೂ ಬೆಲೆ ನೀಡಿಲ್ಲ. ಕೆಟ್ಟದ್ದೆ ಆಗುವುದಾದರೆ ನನಗೆ ಆಗಲಿ . ನನಗೆ ಅಮ್ಮನ ಮೂರ್ತಿ ನಿರ್ಮಿಸಿದ್ದಕ್ಕೆ ತುಂಬಾನೇ ಖುಷಿ ಇದೆ ಎಂದು ಹೇಳಿದರು.

ಇದನ್ನು ಓದಿ : India To Tour West Indies : ಭಾರತ ವೆಸ್ಟ್‌ ಇಂಡಿಸ್‌ ಸರಣಿ : T20, ಏಕದಿನ ಸರಣಿ ವೇಳಾಪಟ್ಟಿ ಪ್ರಕಟ

ಇದನ್ನೂ ಓದಿ : ಕಮರಿಗೆ ಉರುಳಿದ ಬಸ್ : 22 ಸಾವು, 6 ಮಂದಿಗೆ ಗಾಯ

son installed idol of his mother in gajendragada in gadag

Comments are closed.