ಕುವೈತ್ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ವಿಮಾನ ಸೇವೆಗೆ ನಿಷೇಧ ಹೇರಿದ್ದ ಕುವೈತ್ ಇದೀಗ ವಿಮಾನಯಾನ ಸೇವೆ ಪುನರಾರಂಭಿಸುವ ಘೋಷಣೆ ಮಾಡಿದೆ. ಅಗಸ್ಟ್ 22 ರಿಂದ ಭಾರತ ಸೇರಿ ಹಲವು ರಾಷ್ಟ್ರಗಳಿಗೆ ವಿಮಾನ ಸೇವೆ ಪುನರಾರಂಭ ಮಾಡಲಿದೆ.
ಸುಮಾರು ಒಂದೂವರೆ ವರ್ಷಗಳಿಂದಲೂ ಕುವೈತ್ ವಾಣಿಜ್ಯ ವಿಮಾನಯಾನ ಸೇವೆಗಳಿಗೆ ನಿಷೇಧ ಹೇರಿತ್ತು. ಇದರಿಂದಾಗಿ ಭಾರತ ಸೇರಿದಂತೆ ಹಲವು ದೇಶಗಳ ನಿವಾಸಿಗಳು ಕುವೈತ್ ನಲ್ಲಿ ಉಳಿದುಕೊಂಡಿದ್ದಾರೆ. ಆದ್ರೀಗ ಕೊರೊನಾ ವೈರಸ್ ಸೋಂಕಿನ ಪ್ರಮಾಣದಲ್ಲಿ ಇಳಿಕೆಯಾದ ಬೆನ್ನಲ್ಲೇ ಕುವೈತ್ ಸರಕಾರ ವಿಮಾನಯಾನ ಸೇವೆ ಪುನರಾರಂಭಕ್ಕೆ ಮನಸ್ಸು ಮಾಡಿದೆ. ಕುವೈತ್ ಕ್ಯಾಬಿನೆಟ್ ಸಭೆಯಲ್ಲಿ ವಾಣಿಜ್ಯ ವಿಮಾನಗಳ ಪುನರಾರಂಭದ ಜೊತೆಗೆ ಕೊರೊನಾ ಹರಡದಂತೆ ಕೈಗೊಳ್ಳಬಹುದಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಕೂಡ ಚರ್ಚಿಸಲಾಗಿದೆ.
ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಈಜಿಪ್ಟ್, ಶ್ರೀಲಂಕಾ, ನೇಪಾಳ ದೇಶಗಳ ಜೊತೆಗೆ ವಾಣಿಜ್ಯ ವಿಮಾನ ಸೇವೆಯನ್ನು ಆರಂಭಿಸಲಿದೆ. ಅಲ್ಲದೇ ವಿಮಾನ ನಿಲ್ದಾಣದ ಕಾರ್ಯಾಚರಣೆ ಯ ಸಾಮರ್ಥ್ಯವನ್ನು ದಿನಕ್ಕೆ 15 ಸಾವಿರಕ್ಕೆ ಹೆಚ್ಚಳ ಮಾಡಲಾಗುತ್ತಿದ್ದು, ಇದರಿಂದಾಗಿ ನಿತ್ಯವೂ ಹೆಚ್ಚು ಜನರು ಪ್ರಯಾಣಿಸಲು ಅನುಕೂಲವಾಗಲಿದೆ.
ಇದನ್ನೂ ಓದಿ : ಅನಿವಾಸಿಗರನ್ನು ಹೊರಹಾಕಲು ಮುಂದಾದ ಕುವೈತ್ : ಭಾರತೀಯರಿಗೂ ಎದುರಾಗುತ್ತಾ ಸಂಕಷ್ಟ ..?
ಇದನ್ನೂ ಓದಿ : ಸೌದಿ, ಕುವೈತ್‌ನಿಂದ ಭಾರತಕ್ಕೆ ವಿಮಾನ ಸೇವೆ : ಟಿಕೆಟ್ ಬುಕ್ಕಿಂಗ್ ಆರಂಭ
ಇದನ್ನೂ ಓದಿ : NEET UG UAE : ಮೊದಲ ಬಾರಿಗೆ ಕುವೈತ್, ದುಬೈನಲ್ಲಿ ನಡೆಯುತ್ತೆ ನೀಟ್ ಪರೀಕ್ಷೆ