ಬ್ರಿಟನ್ : Liz Truss to be Britain’s next PM Liz Truss Rishi Sunak: ಬ್ರಿಟನ್ ಪ್ರಧಾನಿ ಹುದ್ದೆಗಾಗಿ ನಡೆದ ಚುನಾವಣೆಯಲ್ಲಿ ಭಾರತೀಯ ಮೂಲದ ರಿಷಿ ಸುನಕ್ ಗೆಲುವು ಬಹುತೇಕ ಪಕ್ಕಾ ಎನ್ನಲಾಗಿತ್ತು. ಆದರೆ ಬ್ರಿಟನ್ ಪ್ರಧಾನಿ ಹಣಾಹಣಿಯಲ್ಲಿ ರಿಷಿ ಸುನಕ್ರಿಗೆ ಸೋಲುಣಿಸಿದ ಆಡಳಿತ ಕನ್ಸರ್ವೇಟಿವ್ ಪಕ್ಷದ ನಾಯಕತ್ವದ ಸ್ಪರ್ಧೆಯಲ್ಲಿ ಯುಕೆ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರುಸ್ ಜಯಭೇರಿ ಬಾರಿಸಿದ್ದಾರೆ.
ಯುಕೆ ವಿದೇಶಾಂಗ ಕಾರ್ಯದರ್ಶಿಯಾಗಿರುವ ಲಿಜ್ ಟ್ರುಸ್ ಬ್ರಿಟನ್ ಪ್ರಧಾನಿಯಾಗಲು ಕನ್ಸರ್ವೇಟಿವ್ ಪಕ್ಷದ ನಾಯಕತ್ವದ ಸ್ಪರ್ಧೆಯಲ್ಲಿ ರಿಷಿ ಸುನಕ್ರನ್ನು ಸೋಲಿಸಿ ಜಯ ಸಾಧಿಸಿದ್ದಾರೆ ಎಂದು ಪಕ್ಷವು ಇಂದು ಮಾಹಿತಿ ನೀಡಿದ್ದಾರೆ. ಬ್ರಿಟನ್ ದೇಶವು ಜೀವನ ವೆಚ್ಚದ ಬಿಕ್ಕಟ್ಟು, ಕೈಗಾರಿಕಾ ಅಶಾಂತಿ ಹಾಗೂ ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಲಿಜ್ ಟ್ರೂಸ್ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ಬ್ರಿಟನ್ನಲ್ಲಿ ಕಳೆದೊಂದು ತಿಂಗಳಿನಿಂದ ಬ್ರಿಟನ್ ಪ್ರಧಾನಿ ವಿಚಾರವಾಗಿ ಭಾರೀ ರಾಜಕೀಯ ಹೈ ಡ್ರಾಮಾ ನಡೆದಿತ್ತು. ಕೊನೆಗೂ ಈ ರಾಜಕೀಯ ಹೈಡ್ರಾಮಾಕ್ಕೆ ತೆರೆ ಬಿದ್ದಂತಾಗಿದೆ. 1922ರ ಬ್ಯಾಕ್ಬೆಂಚ್ ಟೋರಿ ಸಂಸದರ ಸಮಿತಿಯ ಅಧ್ಯಕ್ಷರು ಹಾಗೂ ನಾಯಕತ್ವದ ಚುನಾವಣೆಯ ರಿಟರ್ನಿಂಗ್ ಆಫೀಸರ್ 10 ಡೌನಿಂಗ್ ಸ್ಟ್ರೀಟ್ನಲ್ಲಿ ನಡೆಸಿದ ಸ್ಪರ್ಧೆಯಲ್ಲಿ 47 ವರ್ಷ ವಯಸ್ಸಿನ ಲಿಜ್ ಟ್ರೂಸ್ ವಿಜೇತರಾಗಿದ್ದಾರೆ.
ಇನ್ಪೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯನಾಗಿರುವ ರಿಷಿ ಸುನಕಲ್ ಈ ಬಾರಿ ಬ್ರಿಟನ್ ಪ್ರಧಾನಿ ಆಗುತ್ತಾರೆ ಅನ್ನೋ ಮಾತುಗಳು ಕೇಳಿಬಂದಿದ್ದವು. ಆದ್ರೆ ಬ್ರಿಟನ್ ಚುನಾವಣೆಯಲ್ಲಿ ಅಧಿಕ ಮತಗಳನ್ನು ಪಡೆದಿರುವ ಲಿಜ್ ಟ್ರುಸ್ ಪ್ರಧಾನಿ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಭಾರತೀಯ ಮೂಲದ ವ್ಯಕ್ತಿಯಾಗಿರುವ ರಿಷಿ ಸುನಕ್ ಬ್ರಿಟನ್ ಪ್ರಧಾನಿ ಆಗುತ್ತಾರೆ ಅನ್ನೋ ಭಾರತೀಯರ ಆಸೆ ಕೊನೆಗೂ ಫಲಿಸಲಿಲ್ಲ.
ಇದನ್ನು ಓದಿ : prabhakar rane ex minister died : ಶಿಕ್ಷಕರ ದಿನಾಚರಣೆಯಂದೇ ಮಾಜಿ ಶಿಕ್ಷಣ ಸಚಿವ ಪ್ರಭಾಕರ ರಾಣೆ ವಿಧಿವಶ
ಇದನ್ನೂ ಓದಿ : Rishabh Pant: ಜವಾಬ್ದಾರಿ ಮರೆತ ರಿಷಭ್ ಪಂತ್’ಗೆ ಹಿಗ್ಗಾಮುಗ್ಗ ಬೈದ ಕ್ಯಾಪ್ಟನ್ ರೋಹಿತ್ ಶರ್ಮಾ
Liz Truss to be Britain’s next PM, defeats Indian-origin Rishi Sunak