prabhakar rane ex minister died : ಶಿಕ್ಷಕರ ದಿನಾಚರಣೆಯಂದೇ ಮಾಜಿ ಶಿಕ್ಷಣ ಸಚಿವ ಪ್ರಭಾಕರ ರಾಣೆ ವಿಧಿವಶ

ಕಾರವಾರ : prabhakar rane ex minister died : ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಭಾರೀ ಕೊಡುಗೆಗಳನ್ನು ನೀಡಿದ್ದ ಮಾಜಿ ಸಚಿವ ಪ್ರಭಾಕರ ರಾಣೆ ಶಿಕ್ಷಕರ ದಿನಾಚರಣೆಯ ದಿನದಂದೇ ಕೊನೆಯುಸಿರೆಳೆದಿದ್ದಾರೆ. 81 ವರ್ಷ ಪ್ರಾಯದವರಾಗಿದ್ದ ಮಾಜಿ ಸಚಿವ ಪ್ರಭಾಕರ್​ ರಾಣೆ ಇಂದು ಮಧ್ಯಾಹ್ನ 1:30ರ ಸುಮಾರಿಗೆ ನಿಧನರಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರ ಹಾಗೂ ಜೊಯಿಡಾ ಭಾಗಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದ ಮಾಜಿ ಸಚಿವ ಪ್ರಭಾಕರ ರಾಣೆ ಕಳೆದ ಒಂದು ತಿಂಗಳಿನಿಂದ ಜ್ವರ ದಿಂದ ಬಳಲುತ್ತಿದ್ದರು. ಇದಾದ ಬಳಿಕ ಅವರನ್ನು ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಲ್ಲಿ ಆರೋಗ್ಯ ಸುಧಾರಿಸಿದ ಬಳಿಕ ಅವರನ್ನು ಮನೆಗೆ ಕರೆದುಕೊಂಡು ಬರಲಾಗಿತ್ತು. ಆದರೆ ಇದೀಗ ಮತ್ತೆ ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನೆಲೆಯಲ್ಲಿ ಮಧ್ಯಾಹ್ನ 1: 30ರ ಸುಮಾರಿಗೆ ಅವರು ವಿಧಿವಶರಾಗಿದ್ದಾರೆ.

ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯಲ್ಲಿ ದೈಹಿಕ ಶಿಕ್ಷಕನಾಗಿ ನೇಮಕಗೊಂಡು ತಮ್ಮ ಸೇವೆಯನ್ನು ಆರಂಭಿಸಿದ್ದ ಪ್ರಭಾಕರ ರಾಣೆ ಆ ಬಳಿಕ ಶಿಕ್ಷಣ ಕ್ಷೇತ್ರಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಕಾಲಾಂತರದಲ್ಲಿ ಇದೇ ಶಿಕ್ಷಣ ಸಂಸ್ಥೆಯ ಅಧ್ಯಕ್ಷರೂ ಸಹ ಆಗಿದ್ದ ಪ್ರಭಾಕರ ರಾಣೆ ಬಾಪೂಜಿ ಗ್ರಾಮೀಣ ವಿಕಾಸ ಸಂಸ್ಥೆಯ ಅಡಿಯಲ್ಲಿ ಹಳ್ಳಿ ಹಳ್ಳಿಗಳಲ್ಲಿ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಕಾಲೇಜುಗಳನ್ನು ಆರಂಭಿಸಿದ್ದರು. ಕಾರವಾರ ಹಾಗೂ ಜೊಯಿಡಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿಯೂ ವಿಜೇತರಾಗಿದ್ದ ಪ್ರಭಾಕರ ರಾಣೆ ಗ್ರಂಥಾಲಯ ಹಾಗೂ ವಯಸ್ಕರ ಶಿಕ್ಷಣ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಇದನ್ನು ಓದಿ : hotel fire : ಐಷಾರಾಮಿ ಹೋಟೆಲ್​ನಲ್ಲಿ ಅಗ್ನಿ ಅವಘಡ : ನಾಲ್ವರು ಸಾವು, 20 ಮಂದಿ ರಕ್ಷಣೆ

ಇದನ್ನೂ ಓದಿ : Rishabh Pant: ಜವಾಬ್ದಾರಿ ಮರೆತ ರಿಷಭ್ ಪಂತ್’ಗೆ ಹಿಗ್ಗಾಮುಗ್ಗ ಬೈದ ಕ್ಯಾಪ್ಟನ್ ರೋಹಿತ್ ಶರ್ಮಾ

ಇದನ್ನೂ ಓದಿ : Rishabh Pant: ಜವಾಬ್ದಾರಿ ಮರೆತ ರಿಷಭ್ ಪಂತ್’ಗೆ ಹಿಗ್ಗಾಮುಗ್ಗ ಬೈದ ಕ್ಯಾಪ್ಟನ್ ರೋಹಿತ್ ಶರ್ಮಾ

ಇದನ್ನೂ ಓದಿ : hotel fire : ಐಷಾರಾಮಿ ಹೋಟೆಲ್​ನಲ್ಲಿ ಅಗ್ನಿ ಅವಘಡ : ನಾಲ್ವರು ಸಾವು, 20 ಮಂದಿ ರಕ್ಷಣೆ

Prabhakar Rane ex minister died on teachers day in Karwar

Comments are closed.