Lok Sabha Election 2024 Result Live : ಲೋಕಸಭೆ ಚುನಾವಣೆ ಫಲಿತಾಂಶ 2024 : ಎನ್‌ಡಿಎ 271, ಐಎನ್‌ಡಿಐಎ 183 ಕ್ಷೇತ್ರಗಳಲ್ಲಿ ಮುನ್ನಡೆ: ಯಾರಿಗೆ ಕ್ಷೇತ್ರ ಯಾರಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ

Lok Sabha Election 2024 Result Live :  ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದೆ. ಆರಂಭಿಕ ಸುತ್ತುಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಭರ್ಜರಿ ಮುನ್ನಡೆ ಸಾಧಿಸಿದೆ

Lok Sabha Election 2024 Result Live :  ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದೆ. ಆರಂಭಿಕ ಸುತ್ತುಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಭರ್ಜರಿ ಮುನ್ನಡೆ ಸಾಧಿಸಿದೆ. ಇಂಡಿಯಾ ಮೈತ್ರಿಕೂಟ 183 ಕ್ಷೇತ್ರಗಳಲ್ಲಿ ಮುನ್ನೆಡೆಯಲ್ಲಿದ್ರೆ, 60  ಕ್ಷೇತ್ರಗಳಲ್ಲಿ ಇತರರು ಮುನ್ನಡೆ ಕಾಯ್ದುಕೊಂಡಿದ್ದಾರೆ.

Lok Sabha Election Results 2024 NDA 271 INDIA 183 Lead
Image Credit to Original Source

ಭಾರತದಲ್ಲಿ ಹಲವು ವರ್ಷಗಳ ಬಳಿ ಸುಧೀರ್ಘ ಅವಧಿಯ ಅಂದ್ರೆ ಆರು ವಾರಗಳ, ಏಳು ಹಂತಗಳಲ್ಲಿ ಮತದಾನ ನಡೆದಿತ್ತು. ಇಂದು ಬೆಳಗಿನಿಂದಲೇ ಮತ ಎಣಿಕೆ ಕಾರ್ಯ ಆರಂಭಗೊಂಡಿತ್ತು. 543 ಸ್ಥಾನಗಳಲ್ಲಿ 272 ಸ್ಥಾನ ಪಡೆಯುವ ಪಕ್ಷ ಕೇಂದ್ರದಲ್ಲಿ ಅಧಿಕಾರ ನಡೆಸಲಿದೆ. ಏಪ್ರಿಲ್ 19 ಮತ್ತು ಜೂನ್ 1 ರ ನಡುವೆ ಮತದಾನ ನಡೆದಿದೆ. 1951-52ರಲ್ಲಿ ನಡೆದ ಭಾರತದ ಮೊದಲ ಚುನಾವಣೆಯ ನಂತರ ಈ ವರ್ಷದ ಲೋಕಸಭೆ ಚುನಾವಣೆ ಎರಡನೇ ಸುದೀರ್ಘ ಅವಧಿಯ ಚುನಾವಣೆಯಾಗಿದೆ.

ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬೀಳಲಿದೆ. ಅಂಚೆ ಮತಗಳ ಎಣಿಕೆ ಮುಗಿದ 30 ನಿಮಿಷಗಳ ನಂತರ ಇವಿಎಂ ಮತಗಳ ಎಣಿಕೆ ಆರಂಭವಾಗಲಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಈ ಬಾರಿ ಬಿಜೆಪಿ ತನಗೆ 370 ಮತ್ತು ಎನ್‌ಡಿಎಗೆ 400 ಸೀಟುಗಳ ಗುರಿ ಹೊಂದಿದೆ.

ಇದನ್ನೂ ಓದಿ :  Noni Juice : ನೋನಿ ಜ್ಯೂಸ್‌ ಕುಡಿಯೋದು ಅಪಾಯಕಾರಿ : ಮಧುಮೇಹ ನಿಯಂತ್ರಣಕ್ಕೆ ಬರೋದು ನಿಜನಾ ?

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಚುನಾವಣೆಯನ್ನು ನಡೆಸಿತ್ತು. ಅಲ್ಲದೇ ಅತಿದೊಡ್ಡ ಸ್ಟಾರ್ ಪ್ರಚಾರಕ, ಪಿಎಂ ಮೋದಿ ರಾಲಿ ಮತ್ತು ರೋಡ್‌ಶೋಗಳಲ್ಲಿ ಪಾಲ್ಗೊಂಡಿದ್ದರು. ಬಿಜೆಪಿ 370 ಮತ್ತು ಎನ್‌ಡಿಎಗೆ 400 ಸ್ಥಾನಗಳ ಗುರಿ ಹೊಂದಿದೆ. ಅಲ್ಲದೇ ಸಮೀಕ್ಷೆಗಳಲ್ಲಿಯೂ ಬಿಜೆಪಿ ಭರ್ಜರಿ ಗೆಲುವು ಸಾಧಿಸುವುದಾಗಿ ಹೇಳಿದೆ.

Lok Sabha Election Results 2024 NDA 271 INDIA 183 Lead
Image Credit to Original Source

ಇನ್ನು ಕರ್ನಾಟಕದಲ್ಲಿ ಬಿಜೆಪಿ 17 ಸ್ಥಾನಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. 9 ಸ್ಥಾನಗಳಲ್ಲಿ ಸದ್ಯ ಕಾಂಗ್ರೆಸ್‌ ಮುನ್ನಡೆಯಲ್ಲಿದೆ. ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ, ಶ್ರೀರಾಮುಲು, ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ, ಜಗದೀಶ್‌ ಶೆಟ್ಟರ್, ರಮೇಶ್‌ ಜಿಣಜಿಣಗಿ, ಡಾ.ಕೆ.ಸುಧಾಕರ್‌ ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ, ಉಡುಪಿ – ಚಿಕ್ಕಮಗಳೂರು ಕ್ಷೇತ್ರದಿಂದ ಕೋಟ ಶ್ರೀನಿವಾಸ ಪೂಜಾರಿ, ದಕ್ಷಿಣ ಕನ್ನಡದಲ್ಲಿ ಬ್ರಿಜೆಶ್‌ ಚೌಟ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿ‌ ಮುನ್ನೆಡೆ ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ : Tinton Adventure Resort : ಪ್ರವಾಸಿಗರ ಪಾಲಿನ ಸ್ವರ್ಗ ಗೋಳಿಯಂಗಡಿಯ ಟಿಂಟನ್‌ ಅಡ್ವೆಂಚರ್ ರೆಸಾರ್ಟ್

ಇನ್ನು ರಾಜ್ಯದಲ್ಲಿ ಜೆಡಿಎಸ್‌ ಮೂರು ಕ್ಷೇತ್ರಗಳಲ್ಲಿ ಕಣಕ್ಕೆ ಇಳಿದಿದ್ದು, ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ, ಮಂಡ್ಯದಲ್ಲಿ ಎಚ್‌ಡಿ ಕುಮಾರಸ್ವಾಮಿ ಹಾಗೂ ಕೋಲಾರದಲ್ಲಿಯೂ ಜೆಡಿಎಸ್‌ ಅಭ್ಯರ್ಥಿ ಮಲ್ಲೇಶ್‌ ಬಾಬು ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ಇನ್ನು ಕಾಂಗ್ರೆಸ್‌ನಿಂ ಕಣಕ್ಕೆ ಇಳಿದಿದ್ದ ಘಟಾನುಘಟಿ ನಾಯಕರು ಹಿನ್ನೆಡೆ ಸಾಧಿಸಿದ್ದಾರೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರ ತಮ್ಮ ಡಿಕೆ ಸುರೇಶ್‌ ಹಿನ್ನೆಡೆಯನ್ನು ಕಾಯ್ದುಕೊಂಡಿದ್ದಾರೆ.

Lok Sabha Election 2024 Results  NDA 271 INDIA 183 Lead

Comments are closed.