ICC T20 world Cup 2024 : ಐಸಿಸ್ ಬೆದರಿಕೆಯ ಮಧ್ಯೆಯೂ ಅಮೆರಿಕದಲ್ಲಿ ಬೀದಿ ಸುತ್ತುತ್ತಿದ್ದಾರೆ ರೋಹಿತ್ ಬಾಯ್ಸ್!

ICC t20 world Cup 2024 : ಭಾರತ ತಂಡ (Indian Cricket Team) ಟಿ20 ವಿಶ್ವಕಪ್’ನಲ್ಲಿ ಜೂನ್ 5ರಂದು ತನ್ನ ಅಭಿಯಾನ ಆರಂಭಿಸಲಿದ್ದು, ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದೆ.

ICC t20 world Cup 2024 : ನ್ಯೂ ಯಾರ್ಕ್: ರೋಹಿತ್ ಶರ್ಮಾ ನಾಯಕತ್ವದ ಭಾರತ ಕ್ರಿಕೆಟ್ ತಂಡ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ (ICC t20 world Cup 2024) ಆಡಲು ನ್ಯೂ ಯಾರ್ಕ್”ನಲ್ಲಿ ಬೀಡು ಬಿಟ್ಟಿದೆ. ಭಾರತ ತಂಡ (Indian Cricket Team) ಟಿ20 ವಿಶ್ವಕಪ್’ನಲ್ಲಿ ಜೂನ್ 5ರಂದು ತನ್ನ ಅಭಿಯಾನ ಆರಂಭಿಸಲಿದ್ದು, ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದೆ.

ICC t20 world Cup 2024 No Restrictions for India Cricketers in New York
Image Credit to Original Source

ಜೂನ್ 9ರಂದು ನ್ಯೂಯಾರ್ಕ್’ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ (India Vs Pakistan) ತಂಡಗಳು ಮುಖಾಮುಖಿಯಾಗಲಿವೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಐಸಿಸ್ ಉಗ್ರರ ದಾಳಿಯ ಭೀತಿ ಎದುರಾಗಿದೆ. ಐಸಿಸಿ ಉಗ್ರರಿಂದ ದಾಳಿ ನಡೆಯುವ ಸಾಧ್ಯತೆಗಳ ಬಗ್ಗೆ ವರದಿಯಾಗಿದ್ರೂ, ಟೀಮ್ ಇಂಡಿಯಾ ಆಟಗಾರರಿಗೆ ಇದರ ಬಿಸಿ ಇನ್ನೂ ತಟ್ಟಿಲ್ಲ.

ಇದನ್ನೂ ಓದಿ : Virat Kohli 27,000 Runs: 27 ಸಾವಿರ ರನ್’ಗಳ ಹೊಸ್ತಿಲಲ್ಲಿ ವಿರಾಟ್ ಕೊಹ್ಲಿ, ಟಿ20 ವಿಶ್ವಕಪ್’ನಲ್ಲೇ ದಾಖಲೆ ಬರೆಯಲಿದ್ದಾನೆ ಕಿಂಗ್ !

ಭಾರತ ತಂಡದ ಆಟಗಾರರು ಯಾವ ಭಯ, ಆತಂಕವೂ ಇಲ್ಲದೆ ನ್ಯೂ ಯಾರ್ಕ್’ನಲ್ಲಿ ರೌಂಡ್ಸ್ ಹೊಡೆಯುತ್ತಿದ್ದಾರೆ. ಅಷ್ಟೇ ಅಲ್ಲ, ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಭದ್ರತೆ ಬಗ್ಗೆ ಭಾರತ ತಂಡದ ಆಟಗಾರರಿಗೆ ಅಮೆರಿಕದ ಸೆಕ್ಯುರಿಟಿ ಏಜೆನ್ಸಿಗಳಿಂದ ಇನ್ನೂ ಯಾವುದೇ ನಿರ್ದೇಶನ ಬಂದಿಲ್ಲ.

https://x.com/Sahil_Malhotra1/status/1797312887242776618

“ಭದ್ರತೆಯ ವಿಚಾರದಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ಇನ್ನೂ ಯಾವುದೇ ರೀತಿಯ ನಿರ್ದೇಶನಗಳು ಬಂದಿಲ್ಲ. ಹೀಗಾಗಿ ಆಟಗಾರರು ನ್ಯೂ ಯಾರ್ಕ್ ತುಂಬೆಲ್ಲಾ ಓಡಾಡುತ್ತಿದ್ದಾರೆ. ಭಾರತ ತಂಡ ನ್ಯೂ ಯಾರ್ಕ್’ಗೆ ಕಾಲಿಟ್ಟ ದಿನದಿಂದ ಹಿಡಿದು ಅಭ್ಯಾಸ ಪಂದ್ಯದವರೆಗೆ ಇಲ್ಲಿ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ” ಎಂದು ಭಾರತ ತಂಡದ ಮೂಲಗಳು ತಿಳಿಸಿವೆ.

ICC t20 world Cup 2024 No Restrictions for India Cricketers in New York
Image Credit to Original Source

ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಪ್ರೇಕ್ಷಕನೊಬ್ಬ ಕ್ರೀಡಾಂಗಣಕ್ಕೆ ನುಗ್ಗಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಕೈಕುಲುಕುವ ಪ್ರಯತ್ನ ಮಾಡಿದ್ದ. ಕ್ಷಣ ಮಾತ್ರದಲ್ಲಿ ಮೈದಾನಕ್ಕೆ ನುಗ್ಗಿದ್ದ ಭದ್ರತಾ ಸಿಬ್ಬಂದಿ ಆ ಯುವಕನನ್ನು ಹೆಡೆಮುರಿ ಕಟ್ಟಿದ್ದರು.

ಇದನ್ನೂ ಓದಿ : Shubman Gill Marriage: ಲವ್ವಲ್ಲಿ ಬಿದ್ದಿದ್ದಾರಾ ಟೀಮ್ ಇಂಡಿಯಾ ಪ್ರಿನ್ಸ್? ಈ ಬಾಲಿವುಡ್ ಚೆಲುವೆಯನ್ನು ಮದುವೆಯಾಗಲಿದ್ದಾರಾ ಶುಭಮನ್ ಗಿಲ್?

https://x.com/mufaddal_vohra/status/1796959867971973592

ಜೂನ್ ಒಂದರಂದು ನ್ಯೂ ಯಾರ್ಕ್’ನಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗ ಬಾಂಗ್ಲಾದೇಶ ವಿರುದ್ಧ 60 ರನ್’ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಭಾರತ ತಂಡ ಟಿ20 ವಿಶ್ವಕಪ್’ನಲ್ಲಿ ಜೂನ್ 5ರಂದು ತನ್ನ ಅಭಿಯಾನ ಆರಂಭಿಸಲಿದ್ದು, ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದೆ.

ಜೂನ್ 9ರಂದು ನ್ಯೂಯಾರ್ಕ್’ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಪಾಕಿಸ್ತಾನ, ಕೆನಡಾ, ಅಮೆರಿಕ ಮತ್ತು ಐರ್ಲೆಂಡ್ ತಂಡಗಳ ಜೊತೆ ಗ್ರೂಪ್ ’ಎ’ನಲ್ಲಿ ಸ್ಥಾನ ಪಡೆದಿದೆ.

ಇದನ್ನೂ ಓದಿ : Kohli Vs Rayudu: ವಿರಾಟ್ ಕೊಹ್ಲಿ ಮೇಲೆ ಅಂಬಾಟಿ ರಾಯುಡುಗೇಕೆ ಈ ಪರಿ ಕೋಪ ? ಇಲ್ಲಿದೆ ಅಸಲಿ ಸತ್ಯ !

ICC t20 world Cup 2024 : No Restrictions for India Cricketers in New York

Comments are closed.