ಭಾನುವಾರ, ಏಪ್ರಿಲ್ 27, 2025
HomebusinessLPG Cylinders Just rs 500 : ಕೇವಲ 500 ರೂ. ಇಳಿಕೆಯಾಗಲಿದೆ ಎಲ್‌ಪಿಜಿ ಸಿಲಿಂಡರ್‌...

LPG Cylinders Just rs 500 : ಕೇವಲ 500 ರೂ. ಇಳಿಕೆಯಾಗಲಿದೆ ಎಲ್‌ಪಿಜಿ ಸಿಲಿಂಡರ್‌ !

- Advertisement -

ಹೊಸದಿಲ್ಲಿ: ದೇಶದಾದ್ಯಂತ ಎಲ್‌ಪಿಜಿ ಸಿಲಿಂಡರ್‌ ದರ ಏರಿಕೆಯಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಈ ನಡುವಲ್ಲೇ ಗ್ರಾಹಕರಿಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಮ್ಮ ರಾಜ್ಯದಲ್ಲಿನ ಬಿಪಿಎಲ್ ಮತ್ತು ಉಜ್ವಲಾ ವರ್ಗದ ಜನರಿಗೆ ಕೇವಲ 500 ರೂ.ಗೆ ಗ್ಯಾಸ್ ಸಿಲಿಂಡರ್ (LPG Cylinders Just rs 500 ) ಎಂದು ಘೋಷಣೆ ಮಾಡಿದ್ದಾರೆ.

ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಬೆಲೆ ಏರಿಕೆ ಗಂಭೀರವಾದ ವಿಚಾರವಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವರ್ಷ ಏಪ್ರಿಲ್ 1ರ ನಂತರ ಬಿಪಿಎಲ್ ಕುಟುಂಬಗಳಿಗೆ ತಲಾ 500 ರೂಪಾಯಿಯಂತೆ ವರ್ಷದಲ್ಲಿ 12 ಗ್ಯಾಸ್ ಸಿಲಿಂಡರ್ ನೀಡುತ್ತೇವೆ. ಸರಕಾರದ ಈ ಕಲ್ಯಾಣ ಯೋಜನೆಗಳಿಂದ ಯಾರೂ ಕೂಡ ವಂಚಿತರಾಗಬಾರದು ಎಂದಿದ್ದಾರೆ.

ಎಲ್‌ಪಿಜಿ ಸಿಲಿಂಡರ್‌ ಬೆಲೆ ಇಳಿಕೆ ಮಾಡುವ ಕುರಿತಂತೆ ರಾಜ್ಯ ಸರಕಾರ ವಿವರಗಳನ್ನು ಅಧ್ಯಯನ ನಡೆಸುತ್ತಿದೆ. ಮುಂದಿನ ತಿಂಗಳು ವಿಧಾನಸಭೆ ಬಜೆಟ್ ಮಂಡನೆಯನ್ನು ಮಾಡುತ್ತಿದ್ದು, ಉಜ್ವಲ ಯೋಜನೆ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಎಲ್‌ಪಿಜಿ ಕನೆಕ್ಷನ್ ಮತ್ತು ಗ್ಯಾಸ್ ಸ್ಟೌವ್ ಕೊಡುವ ನಾಟಕ ಮಾಡಿದ್ದಾರೆ. ಈಗ ಅವರ ಸಿಲಿಂಡರ್‌ಗಳು ಖಾಲಿ ಬಿದ್ದಿವೆ. ಎಲ್‌ಪಿಜಿ ಬೆಲೆ 400 ರೂ.ನಿಂದ 1040 ರೂ.ಗೆ ಏರಿಕೆಯಾಗಿರುವುದರಿಂದ ಯಾರೂ ಖರೀದಿಸುತ್ತಿಲ್ಲ. ಬಿಪಿಎಲ್ ಅಡಿಯಲ್ಲಿ ಬರುವ ಜನರು ಅಥವಾ ಉಜ್ವಲ ಯೋಜನೆಗೆ ಸಂಬಂಧಿಸಿರುವವರು, ನಾವು ಅವರ ಅಧ್ಯಯನವನ್ನು ನಡೆಸುತ್ತೇವೆ ಮತ್ತು ಏಪ್ರಿಲ್ 1 ರಿಂದ ಅವರಿಗೆ 12 ಸಿಲಿಂಡರ್‌ಗಳು ಸಿಗುತ್ತವೆ. ಈಗಿನ ಬೆಲೆ 1040 ರೂ. ಬದಲಿಗೆ ಪ್ರತಿ ವರ್ಷಕ್ಕೆ 500 ರೂ. ಎಂದು ಮಾಧ್ಯಮಗಳು ವರದಿ ಮಾಡಿವೆ.

ಮುಂದಿನ ವರ್ಷ ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಚುನಾವಣೆಗೆ ಮೊದಲು ಅಶೋಕ್ ಗೆಹ್ಲೋಟ್ ಅವರು ದೊಡ್ಡ ಘೋಷಣೆ ಮಾಡಿದ್ದಾರೆ. ಕಳೆದ ಚುನಾವಣೆಯ ವೇಳೆಯಲ್ಲಿ ಕಾಂಗ್ರೆಸ್ ನೂರು ಸ್ಥಾನವನ್ನು ಪಡೆಯುವ ಮೂಲಕ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಕಳೆದ ಒಂದು ವರ್ಷದ ಅವಧಿಯಲ್ಲಿ ಪಕ್ಷದಲ್ಲಿ ನಡೆದಿರುವ ಆಂತರಿಕ ಕಚ್ಚಾಟ ಪಕ್ಷಕ್ಕೆ ಮುಳುವಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಅಶೋಕ್ ಗೆಹ್ಲೋಟ್ ಕಸರತ್ತು ಆರಂಭಿಸಿದ್ದು, ಈ ಬಾರಿಯ ಬಜೆಟ್ ನಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತರುವ ಸಾಧ್ಯತೆಯಿದೆ.

ಇದನ್ನೂ ಓದಿ : Manohari tea from Assam : 1 ಕೆಜಿ ಟೀ ಪುಡಿ 1.15 ಲಕ್ಷ ರೂ.ಗೆ ಮಾರಾಟ : ದಾಖಲೆ ಬರೆದ ಅಸ್ಸಾಂನ ಮನೋಹರಿ ಟೀ

ಇದನ್ನೂ ಓದಿ : PM Kisan 13th installment : ದೇಶದ ರೈತರಿಗೆ ಸಿಹಿ ಸುದ್ದಿ : ಶೀಘ್ರವೇ ಬಿಡುಗಡೆ ಆಗಲಿದೆ ಪಿಎಂ ಕಿಸಾನ್‌ ಯೋಜನೆಯ 13ನೇ ಕಂತು

LPG Cylinders Just rs 500 in this State for Next Year

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular