Smartphones: ಈ ವರ್ಷ ಕುತೂಹಲ ಹೆಚ್ಚಿಸಿದ್ದ 5 ಸ್ಮಾರ್ಟ್‌ಫೋನ್‌ಗಳು..

ಇನ್ನೇನು 2022 ಮುಗಿಯಲಿದೆ. ಈ ವರ್ಷ ಹಲವಾರು ಸ್ಮಾರ್ಟ್‌ಫೋನ್‌ಗಳು (Smartphones) ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಕೆಲವು ಬಜೆಟ್‌ ಫ್ರೆಂಡ್ಲಿ ಫೋನ್‌ಗಳಾದರೆ, ಇನ್ನು ಕೆಲವು ದುಬಾರಿಯವುಗಳು. ಈ ವರ್ಷ ಕೆಲವು ಫೋನ್‌ಗಳು ಬಹಳ ಕುತೂಹಲವನ್ನು ಹೆಚ್ಚಿಸಿದ್ದವು. ಅವುಗಳ ಕಿರು ಪರಿಚಯ ಇಲ್ಲಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್‌ : 7.6 ಇಂಚಿನ ಡೈನಾಮಿಕ್‌ AMOLED ಡಿಸ್ಪ್ಲೇ ಹೊಂದಿದ್ದು, ಕ್ವಾಲ್ಕಮ್‌ ಸ್ನಾಪ್‌ಡ್ರಾಗನ್‌ 888 ಪ್ರೊಸೆಸ್ಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 4400 mAh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ಕ್ಯಾಮೆರಾದ ಬಗ್ಗೆ ಹೇಳುವುದಾದರೆ, ಇದರಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ನೀಡಲಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22 ಅಲ್ಟ್ರಾ: ಇದು 6.8-ಇಂಚಿನ ಡೈನಾಮಿಕ್ AMOLED 2X ಡಿಸ್ಪ್ಲೇ ಹೊಂದಿದೆ. ಇದರ ಡಿಸ್ಪ್ಲೇಯ ರಿಫ್ರೆಶ್ ದರವು 120Hz ಆಗಿದೆ. ಈ ಫೋನ್ ಸ್ನಾಪ್‌ಡ್ರಾಗನ್ 8 ಜನ್ 1 ಚಿಪ್‌ಸೆಟ್ ಅನ್ನು ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 12 / OneUI 5 ಔಟ್-ಆಫ್-ಬಾಕ್ಸ್ ಅನ್ನು ಆಧರಿಸಿದೆ. ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22 ಅಲ್ಟ್ರಾ ಸ್ಮಾರ್ಟ್‌ಫೋನ್‌ನಲ್ಲಿ 5,000 mAh ಸಾಮರ್ಥ್ಯದ ಬ್ಯಾಟರಿ ಲಭ್ಯವಿದೆ.

ಆ್ಯಪಲ್‌ ಐಫೋನ್‌ 14 ಸೀರಿಸ್‌: ಆ್ಯಪಲ್‌ ಈ ಸರಣಿಯಲ್ಲಿ 14 ಪ್ರೋ ಮತ್ತು 14 ಪ್ರೋ ಮ್ಯಾಕ್ಸ್‌ ಅನ್ನು ಪರಿಚಯಿಸಿತ್ತು. ಇದರಲ್ಲಿ ಪಿಲ್‌–ಶೇಪ್‌ನ ನಾಚ್‌ ನೀಡಲಾಗಿದ್ದು ಅದನ್ನು ಡೈನಾಮಿಕ್‌ ಐಲ್ಯಾಂಡ್‌ ಎಂದು ಹೆಸರಿಸಿದೆ. ಈ ವೈಶಿಷ್ಟ್ಯವು ವಿಶೇಷವಾಗಿದ್ದು, ಯಾವುದೇ ಸ್ಮಾರ್ಟ್‌ಫೋನ್‌ಗಳಲ್ಲಿ ಕಂಡುಬಂದಿಲ್ಲ. ಇದು ಇತ್ತೀಚಿನ A16 ಬಯೋನಿಕ್ ಚಿಪ್‌ಸೆಟ್‌ನೊಂದಿಗೆ ಬರುತ್ತದೆ. ಇದರಲ್ಲಿ ಕ್ರ್ಯಾಶ್ ಡಿಟೆಕ್ಷನ್ ಫೀಚರ್ ಕೂಡ ಲಭ್ಯವಿದೆ. ಕ್ಯಾಮೆರಾದ ಬಗ್ಗೆ ಹೇಳುವುದಾದರೆ ಐಫೋನ್ 14 ಸರಣಿಯಲ್ಲಿ 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ.

ಒನ್‌ಪ್ಲಸ್‌ 10T 5G: ಕಂಪನಿಯು ಈ ಫೋನ್‌ನಲ್ಲಿ ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್‌ 8+ Gen 1 ಪ್ರೊಸೆಸರ್ ಅನ್ನು ನೀಡಿದೆ. ಇದರೊಂದಿಗೆ, ಇದು 16 GB ವರೆಗಿನ LPDDR5 RAM + 256 GB ವರೆಗಿನ UFS 3.1 ಸಂಗ್ರಹಣೆ ಪಡೆದುಕೊಂಡಿದೆ. ಒನ್‌ಪ್ಲಸ್‌ 10T 5G Android 12 ಆಧಾರಿತ OxygenOS 12.1 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಲಭ್ಯವಿದೆ. ಒನ್‌ಪ್ಲಸ್‌ 10T ಬ್ಯಾಟರಿ ಕ್ಷಮತೆಯು 4800mAh ಆಗಿದೆ. ಇದು 150W ವೇಗದ ಚಾರ್ಜಿಂಗ್‌ಅನ್ನು ಬೆಂಬಲಿಸುತ್ತದೆ.

ಗೂಗಲ್ ಪಿಕ್ಸೆಲ್ 7 ಮತ್ತು ಗೂಗಲ್ ಪಿಕ್ಸೆಲ್ 7 ಪ್ರೊ: ಗೂಗಲ್ ತನ್ನ ಹೊಸ ಪಿಕ್ಸೆಲ್ 7 ಸರಣಿಯನ್ನು ಉತ್ತಮ ಕ್ಯಾಮೆರಾ ಸೆಟಪ್‌ನೊಂದಿಗೆ ಪರಿಚಯಿಸಿದೆ. ಇದರಲ್ಲಿ ಟೆನ್ಸರ್ ಜಿ2 ಚಿಪ್‌ಸೆಟ್ ನೀಡಲಾಗಿದೆ. ಇದರ ವೆನಿಲ್ಲಾ ಮಾದರಿಯು ಡ್ಯುಯಲ್ ಕ್ಯಾಮೆರಾ ಸಿಸ್ಟಮ್‌ನೊಂದಿಗೆ ಬರುತ್ತದೆ. ಇದು 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಅನ್ನು ಒಳಗೊಂಡಿದೆ. ಜೊತೆಗೆ 12-ಮೆಗಾಪಿಕ್ಸೆಲ್ ಸೆಕೆಂಡರಿ ಸಂವೇದಕವನ್ನು ಹೊಂದಿದೆ. ಇದರ ಪ್ರೊ ಮಾದರಿಯ ಫೋನ್‌ನಲ್ಲಿ 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ, 12-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 30x ಸೂಪರ್ ರೆಸಲ್ಯೂಶನ್ ಜೂಮ್ ಮತ್ತು 5x ಆಪ್ಟಿಕಲ್ ಜೂಮ್ ಬೆಂಬಲದೊಂದಿಗೆ 48-ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಅನ್ನು ನೀಡಲಾಗಿದೆ.

ಇದನ್ನೂ ಓದಿ : Realme 10 Pro Plus 5G ಇಂದಿನಿಂದ ಭಾರತದಲ್ಲಿ ಮಾರಾಟ ಪ್ರಾರಂಭ; ಬೆಲೆ, ಲಭ್ಯತೆ ಮತ್ತು ವೈಶಿಷ್ಟ್ಯಗಳು

ಇದನ್ನೂ ಓದಿ : Twitter Accounts : ಖಾತೆಗಳ ಪರಿಶೀಲನೆಗಾಗಿ 3 ಬಣ್ಣಗಳನ್ನು ಪ್ರಾರಂಭಿಸಿದ ಎಲಾನ್‌ ಮಸ್ಕ್‌: ಇನ್ನು ಈ ಬಣ್ಣಗಳಲ್ಲಿ ಖಾತೆಗಳನ್ನು ಪರಿಶೀಲಿಸಲಿದೆ ಟ್ವಿಟರ್‌..

These are the premium smartphones launched in India in the year 2022

Comments are closed.