ನವದೆಹಲಿ : ಜನಸಾಮಾನ್ಯರಿಗೆ ಕೇಂದ್ರ ಸರಕಾರ ಗುಡ್ ನ್ಯೂಸ್ ಕೊಟ್ಟಿದೆ ತೈಲ ಮಾರುಕಟ್ಟೆಯ ಕಂಪೆನಿಗಳು ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 100 ರೂಪಾಯಿ ಇಳಿಕೆ ಮಾಡಿವೆ. ಆದರೆ ಗೃಹ ಬಳಕೆಯ 14.5 ಲೀಟರ್ ಗ್ಯಾಸ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಮೇ ತಿಂಗಳಿನಲ್ಲಿ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ 45 ರೂಪಾಯಿ ಇಳಿಕೆಯಾಗಿತ್ತು. ಇದೀಗ ಬರೋಬ್ಬರಿ ನೂರು ರೂಪಾಯಿ ಇಳಿಕೆ ಮಾಡಿರುವುದು ಗ್ರಾಹಕರಿಗೆ ಸಂತಸವನ್ನು ಮೂಡಿಸಿದೆ.
19 ಕೆ.ಜಿ ತೂಕದ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ರೂ. 122 ಕಡಿಮೆ ಆಗಿದೆ. ಜೂನ್ 1ರಿಂದ ಒಂದು ಸಿಲಿಂಡರ್ಗೆ ಪರಿಷ್ಕೃತ ದರ ರೂ. 1473.50 ಆಗುತ್ತದೆ. ಈ ಹಿಂದೆ ವಾಣಿಜ್ಯ ಉದ್ದೇಶದ ಎಲ್ಪಿಜಿ ಸಿಲಿಂಡರ್ 1595.50 ಇತ್ತು. ಆದರೆ ಗ್ಯಾಸ್ ಸಿಲಿಂಡರ್ ಬೆಲೆ ರಾಜ್ಯ ದಿಂದ ರಾಜ್ಯಕ್ಕೆ ಬದಲಾವಣೆಯಿದೆ. ದೆಹಲಿಯಲ್ಲಿ ಎಲ್ಪಿಜಿ ಅನಿಲ ಬೆಲೆ ಒಂದು ಸಿಲಿಂಡರ್ಗೆ ರೂ. 1473.50 ಇದೆ. ಮುಂಬೈನಲ್ಲಿ 1422.50 ಇದ್ದರೆ, ಕೋಲ್ಕತ್ತಾದಲ್ಲಿ ಪ್ರತಿ ಸಿಲಿಂಡರ್ಗೆ 1544.50 ಇದೆ. ಚೆನ್ನೈನಲ್ಲಿ 19 ಕೇಜಿ ತೂಕದ ಸಿಲಿಂಡರ್ ಬೆಲೆ 1603 ರೂಪಾಯಿ ಇದೆ.