ಲಖನೌ : ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶ ರಾಜಧಾನಿ ಲಖನೌನ ಕಾಕೊರಿ ಎಂಬಲ್ಲಿ ನಡೆದಿದೆ. ಬಂಧಿತರಿಂದ ಅಪಾರ ಪ್ರಮಾಣ ಸ್ಪೋಟಕ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾಕೋರಿಯ ಫರೀದಿಪುರದಲ್ಲಿ ಇನ್ನಿಬ್ಬರು ಶಂಕಿತರ ಉಗ್ರರು ಇರುವ ಮಾಹಿತಿಯ ಹಿನ್ನೆಲೆಯಲ್ಲಿ ಎಟಿಎಸ್ ಕಾರ್ಯಾಚರಣೆಯನ್ನು ನಡೆಸಿದೆ. ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಬಾಂಬ್ ಸಿಷ್ಕ್ರೀಯ ದಳ ಹಾಗೂ ಎಟಿಎಸ್ ಕಮಾಂಡೋಗಳು ಕಾರ್ಯಾಚರಣೆಗೆ ಸಾಥ್ ನೀಡಿದ್ದಾರೆ ಎನ್ನಲಾಗುತ್ತಿದೆ.
ಉತ್ತರ ಪ್ರದೇಶದಲ್ಲಿ ದೊಡ್ಡಮಟ್ಟದಲ್ಲಿ ಭಯೋತ್ಪಾದಕ ಚಟುವಟಿಕೆಯನ್ನು ನಡೆಸಲು ಶಂಕಿತರರು ಸಂಚು ರೂಪಿಸಿದ್ದರು. ಅಲ್ಲದೇ ಹಲವರು ಜನರೊಂದಿಗೆ ಶಂಕಿತರರು ಸಂಪರ್ಕದಲ್ಲಿದ್ದರು ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.