ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಸೇನಾ ಸಿಬ್ಬಂದಿ ಹಾಗೂ ಕುಟುಂಬ ಸದಸ್ಯರು ಪ್ರಯಾಣಿಸುತ್ತಿದ್ದ Mi-17V5 ಸೇನಾ ಹೆಲಿಕಾಪ್ಟರ್ (helicopter crash) ತಮಿಳುನಾಡಿನ ಕುನೂರ್ ಎಂಬಲ್ಲಿ ಭೀಕರ ಅಪಘಾತಕ್ಕೀಡಾಗಿದ್ದು ಪರಿಣಾಮ ರಾವತ್ (Bipin Rawat) ಪತ್ನಿ ಮಧುಲಿಕಾ ರಾವತ್ (Madhulika Rawat) ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದಾರೆ. ದುರಂತದಲ್ಲಿ ಬಿಪಿನ್ ರಾವತ್ ಸ್ಥಿತಿ ಕೂಡ ಗಂಭೀರವಾಗಿದೆ ಎನ್ನಲಾಗಿದೆ.
ಸೇನಾ ವಿಮಾನದ ದುರಂತದಲ್ಲಿ ದುರ್ಮರಣಕ್ಕೀಡಾದ ಬಿಪಿನ್ ರಾವತ್ ಪತ್ನಿ ಮಧುಲಿಕಾ ರಾವತ್ ಆರ್ಮಿ ವೈವ್ಸ್ ವೆಲ್ಫೇರ್ ಅಸೋಸಿಯೇಷನ್ನ ಅಧ್ಯಕ್ಷೆಯಾಗಿದ್ದರು. ಈ ಅಸೋಸಿಯೇಷನ್ ಮೂಲಕ ಮಧುಲಿಕಾ ಸೇನಾ ಸಿಬ್ಬಂದಿಯ ಪತ್ನಿಯರು ಹಾಗೂ ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದರು. ಎಡಬ್ಲುಡಬ್ಲುಎ ಭಾರತದ ಅತೀದೊಡ್ಡ ಎನ್ಜಿಓಗಳಲ್ಲಿ ಒಂದಾಗಿದೆ. ಮಧುಲಿಕಾ ವೀರ ನಾರಿಯರು(ಹುತಾತ್ಮ ಯೋಧರ ಪತ್ನಿಯಂದಿರು) ಹಾಗೂ ವಿಕಲಚೇತನ ಮಕ್ಕಳಿಗೆ ಸಹಾಯ ಮಾಡುವ ಕಾರ್ಯ ಸೇರಿದಂತೆ ಅನೇಕ ಸಮಾಜ ಕಲ್ಯಾಣ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಮಧುಲಿಕಾ ರಾವತ್ ಸೇನಾ ಸಿಬ್ಬಂದಿಯ ಪತ್ನಿಯರ ಸಬಲೀಕರಣಕ್ಕಾಗಿ ಸಾಕಷ್ಟು ಕಾರ್ಯಗಳನ್ನು ಮಾಡಿದ್ದಾರೆ. ಸೇನಾ ಸಿಬ್ಬಂದಿಯ ಪತ್ನಿಯಂದಿರಿಗೆ ಬ್ಯೂಟಿಷಿಯನ್ ಕೋರ್ಸ್, ಟೈಲರಿಂಗ್, ನೇಯ್ಗೆ ಕೆಲಸ ಹಾಗೂ ಬ್ಯಾಗ್ ತಯಾರು ಮಾಡುವ ಕೋರ್ಸ್ ಸೇರಿದಂತೆ ಸಾಕಷ್ಟು ವೃತ್ತಿಪರ ಕೋರ್ಸ್ಗಳಲ್ಲಿ ಸೇರ್ಪಡೆಯಾಗುವಂತೆ ಪ್ರೋತ್ಸಾಹಿಸುತ್ತಿದ್ದರು. ಈ ಮೂಲಕ ಅವರನ್ನು ಆರ್ಥಿಕವಾಗಿ ಸ್ವತಂತ್ರರನ್ನಾಗಿ ಮಾಡುವುದು ಮಧುಲಿಕಾ ರಾವತ್ ಉದ್ದೇಶವಾಗಿತ್ತು. ಇದು ಮಾತ್ರವಲ್ಲದೇ ತಮ್ಮ ಸದಸ್ಯೆಯರಿಗೆ ಆರೋಗ್ಯದ ಬಗ್ಗೆ ಜಾಗೃತಿಯನ್ನೂ ಮೂಡಿಸುತ್ತಿದ್ದರು.
ದೆಹಲಿಯಲ್ಲಿ ಶಿಕ್ಷಣವನ್ನು ಪೂರೈಸಿದ್ದ ಮಧುಲಿಕಾ ರಾವತ್ ದೆಹಲಿ ವಿಶ್ವವಿದ್ಯಾಲಯದಲ್ಲಿ ಮನಶಾಸ್ತ್ರಜ್ಞ ವಿಭಾಗದಲ್ಲಿ ಪದವಿಯನ್ನು ಪಡೆದಿದ್ದರು. ಎಡಬ್ಲುಡಬ್ಲುಎಯನ್ನು ಹೊರತುಪಡಿಸಿ ಅವರು ಸಾಕಷ್ಟು ಸಮಾಜ ಮುಖಿ ಕಾರ್ಯ ಅದರಲ್ಲೂ ವಿಶೇಷವಾಗಿ ಕ್ಯಾನ್ಸರ್ ರೋಗಿಗಳ ಕ್ಷೇಮಕ್ಕಾಗಿ ಸಾಕಷ್ಟು ದುಡಿದಿದ್ದಾರೆ.
ಸಿಡಿಎಸ್ ಬಿಪಿನ್ ರಾವತ್ ಹಾಗೂ ಸೇನಾ ಸಿಬ್ಬಂದಿಯ ಜೊತೆಯಲ್ಲಿ ಮಧುಲಿಕಾ ರಾವತ್ ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತಮಿಳುನಾಡಿನ ಕೂನೂರ್ನಲ್ಲಿ ಈ ದುರಂತ ಸಂಭವಿಸಿದೆ. ರಾವತ್ ದಂಪತಿ ವೆಲ್ಲಿಂಗ್ಟನ್ನ ರಕ್ಷಣಾ ಸೇವಾ ಸಿಬ್ಬಂದಿ ಕಾಲೇಜಿನತ್ತ ತೆರಳುತ್ತಿದ್ದರು ಎನ್ನಲಾಗಿದೆ. ಮಾರ್ಗಮಧ್ಯದಲ್ಲಿ ಈ ದುರಂತ ಸಂಭವಿಸಿದೆ.
ಇದನ್ನು ಓದಿ : Army chopper crashes : ತಮಿಳುನಾಡಿನಲ್ಲಿ ಸೇನಾ ಹೆಲಿಕಾಪ್ಟರ್ ಪತನ : ಬಿಪಿಎನ್ ರಾವತ್ ಪ್ರಯಾಣಿಸುತ್ತಿದ್ದ ವಿಮಾನ !
ಇದನ್ನೂ ಓದಿ : IAF’s Mi-17V-5 helicopter crash : ರಷ್ಯಾ ನಿರ್ಮಿತ Mi-17V-5 ಚಾಪರ್ನ ಇತಿಹಾಸ ಹಾಗೂ ಸಾಮರ್ಥ್ಯದ ಬಗ್ಗೆ ಇಲ್ಲಿದೆ ಮಾಹಿತಿ
helicopter crash : Who is Madhulika Rawat, wife of CDS General Bipin Rawat – Know all about her