LPG Cylinder Weight : ಮಹಿಳೆಯರ ಕಷ್ಟ ತಗ್ಗಿಸಲು ಕೇಂದ್ರ ಸರ್ಕಾರದಿಂದ ಸಿಲಿಂಡರ್ ತೂಕ ಇಳಿಕೆ ಸಾಧ್ಯತೆ

ನವದೆಹಲಿ: ದಿನನಿತ್ಯದ ಅಗತ್ಯ ವಸ್ತುಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಕೂಡ ಒಂದು. ಪ್ರಸ್ತುತ14.2 ಕೆ ಜಿ ಇರುವ ಅಡುಗೆ ಸಿಲಿಂಡರ್‌ ಒಂದು ಕಡೆಯಿಂದ ಮತ್ತೊಂದು ಕಡೆ ಸಾಗಿಸುವುದು ದೊಡ್ಡ ಕೆಲಸವೇ ಸರಿ. ಅದರಲ್ಲೂ ಮುಖ್ಯವಾಗಿ ಮಹಿಳೆಯರಿಗೆ ಅದೆಷ್ಟೋ ಬಾರಿ, ತುರ್ತು ಸಂದರ್ಭಗಳಲ್ಲಿ ಈ ಸಿಲಿಂಡರ್ ಸಾಗಾಣಿಕೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ಮನೆ ಒಳಗೇ ಅತ್ತಿತ್ತ ಕೊಂಡೊಯ್ಯಲು ಸಾಧ್ಯವಾಗದೆ, ಇನ್ನೊಬ್ಬರ ಸಹಾಯ ಪಡೆಯಬೇಕಾಗುತ್ತದೆ. ಈ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಗ್ಯಾಸ್ ಸಿಲಿಂಡರ್ ತೂಕವನ್ನು (LPG Cylinder Weight) ಕಡಿಮೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸುವ ಸಾಧ್ಯತೆಗಳು ದಟ್ಟವಾಗಿದೆ.

14.2 ಕೆ ಜಿ ತೂಕದ ಸಿಲಿಂಡರ್ ಸಾಗಾಟ ಮಾಡಲು ಮಹಿಳೆಯರಿಗೆ ಕಷ್ಟ ಆಗುತ್ತಿದೆ. ಮಹಿಳೆಯರು ಅನುಭವಿಸುತ್ತಿರುವ ಈ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಸಿಲಿಂಡರ್ ತೂಕ ಕಡಿಮೆ ಮಾಡಲು ನಿರ್ಧರಿಸಲಾಗಿದೆ” ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ರಾಜ್ಯಸಭೆ ಕಲಾಪದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ರಾಜ್ಯಸಭೆ ಸದಸ್ಯರೊಬ್ಬರು ಎಲ್‌ಪಿಜಿ ಸಿಲಿಂಡರ್ ಭಾರವಾಗಿರುವುದರಿಂದ ಮಹಿಳೆಯರು ಕಷ್ಟ ಅನುಭವಿಸುತ್ತಿದ್ದಾರೆ ಎಂದು ಕಲಾಪದಲ್ಲಿ ಪ್ರಸ್ತಾಪ ಮಾಡಿದ್ದರು.
ಇದಕ್ಕೆ ಉತ್ತರಿಸಿದ ಹರ್ದೀಪ್ ಸಿಂಗ್ ಪುರಿ “ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ಅಷ್ಟೊಂದು ಭಾರ ಹೊರುವುದು ನಮಗೆ ಇಷ್ಟವಿಲ್ಲ. ಹಾಗಾಗಿ 14.2 ಕೆ ಜಿ ತೂಕದ ಸಿಲಿಂಡರ್ ಅನ್ನು 5 ಕೆ ಜಿ ಗೆ ಇಳಿಸುವ ಕುರಿತು ಚಿಂತಿಸಲಾಗುತ್ತಿದೆ” ಎಂದು ಹೇಳಿದ್ದಾರೆ.

ಮಹಿಳೆಯರು ಮಾತ್ರವಲ್ಲ, ಜನ ಸಾಮಾನ್ಯರಿಗೂ ಸಿಲಿಂಡರ್ ಹಗುರವಾಗಿ ಇದ್ದರೆ ಉಪಕರವಾಗಲಿದೆ. ಅದೇಷ್ಟೋ ಬಾರಿ ಎಲ್‌ಪಿಜಿ ಸಿಲಿಂಡರ್‌ ಅನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಲು ಕಷ್ಟ ಪಡಬೇಕಾಗುತ್ತದೆ. ದೊಡ್ಡ ದೊಡ್ಡ ಬಿಲ್ಡಿಂಗ್ ಗಳಲ್ಲಿ ಲಿಫ್ಟ್ ಇಲ್ಲದ ಕಡೆಗಳಲ್ಲಂತೂ, ಸಿಲಿಂಡರ್ ಹೊತ್ತೊಯ್ಯುವ ಕೆಲಸ ಅತಿ ದೊಡ್ಡ ಕೆಲಸವೇ ಸರಿ. ಇನ್ನು ವಾಹನ ಸೌಕರ್ಯ ಇಲ್ಲದ ಕುಗ್ರಾಮಗಳಲ್ಲೂ ಇದೇ ಕಥೆ. ಜನರ ಈ ಸಮಸ್ಯೆಗಳನ್ನು ಗಮನದಲ್ಲಿರಿಸಿ, ಸರ್ಕಾರ ಎಲ್‌ಪಿಜಿ ಸಿಲಿಂಡರ್ ತೂಕ ಕಡಿಮೆ ಮಾಡುವ ವಿಧಾನವನ್ನು ನೋಡುತ್ತಿದೆ.

ಇದನ್ನೂ ಓದಿ: Aadhaar : ಕನ್ನಡದಲ್ಲೇ ನವೀಕರಿಸಬಹುದು ಆಧಾರ್‌ ಕಾರ್ಡ್‌ ಮಾಹಿತಿ

ಇದನ್ನೂ ಓದಿ : Poco M3 battery explodes : ಪೋಕೊ M3 ಸ್ಮಾರ್ಟ್‌ಫೋನ್ ಸ್ಫೋಟದ ಸ್ಫೋಟಕ ಸುದ್ದಿಯಿದು

ಇದನ್ನೂ ಓದಿ : ಇಂಟರ್ನೆಟ್​ ಸೌಕರ್ಯವಿಲ್ಲದೇ ಮಾಡಬಹುದು ಯುಪಿಐ ಪಾವತಿ :ಫೀಚರ್​ ಫೋನ್​ಗಳಲ್ಲಿಯೂ ಡಿಜಿಟಲ್​ ಪಾವತಿ ಸೌಕರ್ಯಕ್ಕೆ ಮುಂದಾದ ಆರ್​ಬಿಐ

ಇದನ್ನೂ ಓದಿ : Bitcoin : ಬಿಟ್‌ಕಾಯಿನ್‌ ಹೇಗಿರುತ್ತೆ? ಚಲಾವಣೆ – ವ್ಯವಹಾರ ಹೇಗೆ ಮಾಡುತ್ತಾರೆ ? ಈಗೇಕೆ ಹೆಚ್ಚು ಚರ್ಚೆಯಾಗುತ್ತಿದೆ ಈ ಕ್ರಿಪ್ಟೋಕರೆನ್ಸಿ

(BJP Government to reduce LPG Cylinder Weight Union Minister Hardeep Singh Puri says)

Comments are closed.