ಭೋಪಾಲ್ : ಎಣ್ಣೆಪ್ರಿಯರಿಗೆ ಮಧ್ಯಪ್ರದೇಶ ಸರಕಾರ ( Madhya Pradesh ) ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ. ಅಬಕಾರಿ ನೀತಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿರುವ ಸರಕಾರ ಮದ್ಯದ ಬೆಲೆಯಲ್ಲಿ ಶೇ.20ರಷ್ಟು ಇಳಿಕೆ ಮಾಡಿದೆ. ವಿಮಾನ ನಿಲ್ದಾಣ, ಸೂಪರ್ ಮಾರ್ಕೇಟ್‌ಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿರುವ ಸರಕಾರ ಮನೆಗಳಲ್ಲಿಯೇ ಹೋಮ್ ಬಾರ್ ತೆರೆಯಲು ( home bar licenses ) ಅನುಮತಿಯನ್ನು ನೀಡಿದೆ.
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ಮಧ್ಯಪ್ರದೇಶ ಪರಂಪರೆ (ಸಾಂಪ್ರದಾಯಿಕ) ಮದ್ಯ ನೀತಿಯನ್ನು ಸಹ ತೆರವುಗೊಳಿಸಿದೆ. ಕ್ಯಾಬಿನೆಟ್ ಸಭೆಯಲ್ಲಿ ಅಬಕಾರಿ ನೀತಿ 2022-23 ರಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ. ಸರಕಾರಕ್ಕೆ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮದ್ಯದ ಚಿಲ್ಲರೆ ಮಾರಾಟದ ಬೆಲೆಯಲ್ಲಿ ಭಾರೀ ಇಳಿಕೆ ಮಾಡಿದೆ. ಹೊಸ ಅಬಕಾರಿ ನೀತಿಯ ಅಡಿಯಲ್ಲಿ, ಮಧ್ಯಪ್ರದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಮದ್ಯ ಮಾರಾಟ ಮಾಡುವ ಕೌಂಟರ್‌ಗಳನ್ನು ತೆರೆಯಬಹುದು ಮತ್ತು ಇಂದೋರ್, ಭೋಪಾಲ್, ಜಬಲ್‌ಪುರ ಮತ್ತು ಗ್ವಾಲಿಯರ್‌ನ ಆಯ್ದ ಸೂಪರ್‌ಮಾರ್ಕೆಟ್‌ಗಳಲ್ಲಿ ಪ್ರಾಯೋಗಿಕವಾಗಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.
ಇಷ್ಟೇ ಅಲ್ಲಾ ಜನರು ಇನ್ಮುಂದೆ ಮನೆಯಲ್ಲಿಯೇ ಬಾರ್ ಹೊಂದಲು ಅವಕಾಶ ಕಲ್ಪಿಸಲಾಗಿದೆ. ವಾರ್ಷಿಕವಾಗಿ 1 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ವೈಯಕ್ತಿಕ ಆದಾಯವನ್ನು ಹೊಂದಿರುವವರು ಹೋಮ್ ಬಾರ್ ಆರಂಭಿಸಬಹುದಾಗಿದೆ. ಆದರೆ ಅರ್ಜಿದಾರರು 50,000 ಶುಲ್ಕ ಪಾವತಿ ಮಾಡಿದ್ರೆ, ಹೋಮ್ ಬಾರ್ ಪರವಾನಗಿ ನೀಡಲಾಗುತ್ತದೆ. ಮಧ್ಯಪ್ರದೇಶ ದೇಶದಲ್ಲಿಯೇ ಹೋಮ್ ಬಾರ್ ಲೈಸೆನ್ಸ್ ನೀಡುತ್ತಿರುವ ಮೊದಲ ರಾಜ್ಯವಾಗಿದೆ. ಈಗಾಗಲೇ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಈಗಾಗಲೇ ಹೋಮ್ ಬಾರ್ ಚಾಲ್ತಿಯಲ್ಲಿದೆ. ಆದರೆ ಅಧಿಕೃತವಾಗಿ ಹೋಮ್ ಬಾರ್ ಚಾಲ್ತಿಗೆ ಬರುತ್ತಿದೆ. ಆದರೆ ತೈಲ ಬೆಲೆ ಏರಿಕೆಯಿಂದ ಜನರು ಕಂಗಾಲಾಗಿದ್ದು, ಇಂಧನದ ಮೇಲಿನ ತೆರಿಗೆಯನ್ನು ಕಡಿತಗೊಳಿಸುವ ಮೂಲಕ ಸಾಮಾನ್ಯರ ಮೇಲಿನ ಹೊರೆಯನ್ನು ತಪ್ಪಿಸುವ ಬದಲು ಮದ್ಯ ಬೆಲೆಯನ್ನು ಕಡಿಮೆ ಮಾಡುತ್ತಿದೆ ಎಂದು ಕಾಂಗ್ರೆಸ್ ಪಕ್ಷ ಬಿಜೆಪಿ ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದೆ.
ಮಧ್ಯಪ್ರದೇಶ ಸರಕಾರ ಅಬಕಾರಿ ನೀತಿಯನ್ನು ಹಲವು ಸಡಿಲಿಕೆಯನ್ನು ಮಾಡಿದೆ. ಪ್ರವಾಸಿ ತಾಣ, ಪರಿಸರ-ಪ್ರವಾಸೋದ್ಯಮ ಮಂಡಳಿ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಕಾರ್ಯನಿರ್ವಹಿಸುತ್ತಿರುವ ತಾತ್ಕಾಲಿಕ ಘಟಕಗಳಿಗೆ ರಿಯಾಯಿತಿ ದರದಲ್ಲಿ ಬಾರ್ ಪರವಾನಗಿಗಳನ್ನು ನೀಡಬಹುದು. ರಾಜ್ಯ ಸರ್ಕಾರವು ಮದ್ಯ ಆಮದು ಪ್ರಕ್ರಿಯೆ ಯನ್ನು ಸರಳಗೊಳಿಸಲು ನಿರ್ಧರಿಸಿದೆ. ಭೋಪಾಲ್ ಮತ್ತು ಇಂದೋರ್ ನಗರಗಳಲ್ಲಿ ಮೈಕ್ರೋಬ್ರೂವರಿಗಳನ್ನು ತೆರೆಯಲು ಸ್ಥಳೀಯ ನಾಗರಿಕ ಸಂಸ್ಥೆಗಳು ಮತ್ತು ವಿದ್ಯುತ್ ಇಲಾಖೆಯಿಂದ ನೀಡಲಾಗುವ ನಿರಾಕ್ಷೇಪಣಾ ಪ್ರಮಾಣಪತ್ರಗಳಿಗೆ (ಎನ್‌ಒಸಿ) ಒಳಪಟ್ಟು ಮತ್ತು ಪರಿಸರ ಅನುಮತಿ ಪಡೆದ ನಂತರ ಅನುಮತಿಸಲಾಗುತ್ತದೆ.
ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಇನ್ನು ಮುಂದೆ ಎಲ್ಲ ಮದ್ಯದಂಗಡಿಗಳು ಕಾಂಪೋಸಿಟ್ ಶಾಪ್ ಆಗಲಿವೆ. ಅಂಗಡಿಗಳು, ವ್ಯಾಪಾರಿಗಳು ಭಾರತೀಯ ನಿರ್ಮಿತ ವಿದೇಶಿ ಮದ್ಯ (IMFL), ದೇಶ ನಿರ್ಮಿತ ಮದ್ಯ ಮತ್ತು ಬಿಯರ್ ಅನ್ನು ಒಟ್ಟಿಗೆ ಮಾರಾಟ ಮಾಡಬಹುದು. ಹೊಸ ಅಬಕಾರಿ ನೀತಿಯಡಿಯಲ್ಲಿ ಅಗತ್ಯಬಿದ್ದರೆ, ಮದ್ಯದಂಗಡಿಗಳ ಸ್ಥಳವನ್ನು ಬದಲಾಯಿಸಲು ಜಿಲ್ಲಾಧಿಕಾರಿ ಮತ್ತು ಶಾಸಕರನ್ನು ಒಳಗೊಂಡ ಜಿಲ್ಲಾ ಮಟ್ಟದ ಉನ್ನತಾಧಿಕಾರ ಸಮಿತಿಗಳಿಗೆ ಅಧಿಕಾರ ನೀಡಲಾಗುವುದು. ಅಲ್ಲದೆ, ಸಂಸದರಲ್ಲಿ ರೈತರು ದ್ರಾಕ್ಷಿಯಿಂದ ತಯಾರಿಸಿದ ವೈನ್ ಅನ್ನು ಸುಂಕ ಮುಕ್ತಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : Divya Suresh : ಬಿಗ್‌ಬಾಸ್ ಖ್ಯಾತಿಯ ನಟಿ ದಿವ್ಯಾ ಸುರೇಶ್‌ಗೆ ಅಪಘಾತ
ಇದನ್ನೂ ಓದಿ : ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ : ಬಾಂಬ್ ಸಿಡಿಸಿ ಅತ್ಯಾಚಾರಿಯನ್ನು ಕೊಂದ ಪತಿ !
(Liquor will be cheap in Madhya Pradesh government has also decided to issue home bar licenses)