ಸೋಮವಾರ, ಏಪ್ರಿಲ್ 28, 2025
HomeNational7 Medical Students Killed : ಕಾರು ಅಪಘಾತದಲ್ಲಿ ಬಿಜೆಪಿ ಶಾಸಕನ ಪುತ್ರ ಸೇರಿ 7...

7 Medical Students Killed : ಕಾರು ಅಪಘಾತದಲ್ಲಿ ಬಿಜೆಪಿ ಶಾಸಕನ ಪುತ್ರ ಸೇರಿ 7 ವೈದ್ಯಕೀಯ ವಿದ್ಯಾರ್ಥಿಗಳ ದುರ್ಮರಣ

- Advertisement -

ಮುಂಬೈ : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಬ್ರಿಡ್ಜ್‌ ಕೆಳಗೆ ಉರುಳಿ ಬಿಜೆಪಿ ಶಾಸಕನ ಪುತ್ರ ಸೇರಿದಂತೆ ಒಟ್ಟು 7 ಮಂದಿ ವೈದ್ಯಕೀಯ (7 Medical Students Killed)ವಿದ್ಯಾರ್ಥಿ ಸಾವನ್ನಪ್ಪಿರುವ ಭೀಕರ ಘಟನೆ ಮಹಾರಾಷ್ಟ್ರದ ಸೆಲ್ಸೂರಬಳಿಯಲ್ಲಿ ನಡೆದಿದೆ.

ಗೊಂಡಿಯಾ ಜಿಲ್ಲೆಯ ತಿರೋರಾ ಕ್ಷೇತ್ರದ ಬಿಜೆಪಿ ಶಾಸಕ ವಿಜಯ್ ರಹಾಂಗದಲೆ ಅವರ ಪುತ್ರ ಆವಿಷ್ಕಾರ್ ರಹಾಂಗದಲೆ, ಪ್ರತ್ಯುಷ್ ಸಿಂಗ್ (2017 ಎಂಬಿಬಿಎಸ್), ಶುಭಂ ಜೈಸ್ವಾಲ್ (2017 ಎಂಬಿಬಿಎಸ್), ನೀರಜ್ ಚೌಹಾಣ್ (ಪ್ರಥಮ ವರ್ಷದ ಎಂಬಿಬಿಎಸ್), ನಿತೇಶ್ ಸಿಂಗ್ (2015 ಇಂಟರ್ನ್ ಎಂಬಿಬಿಎಸ್), ವಿವೇಕ್ ನಂದನ್ (2018, ಎಂಬಿಬಿಎಸ್ ಫೈನಲ್), ಮತ್ತು ಪವನ್ ಶಕ್ತಿ (2020 ಎಂಬಿಬಿಎಸ್) ಎಂಬವರೇ ಮೃತ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.

ನಿನ್ನೆ ರಾತ್ರಿ ಸ್ನೇಹಿತರೆಲ್ಲರೂ ಸೇರಿಕೊಂಡು ಪಾರ್ಟಿ ಮಾಡಿದ್ದಾರೆ. ಪಾರ್ಟಿ ಮುಗಿದ ಡಿಯೋಲಿಯಿಂದ ವಾರ್ದಾಗೆ ಮಹೀಂದ್ರಾ XUV 500 ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆಯಲ್ಲಿ ಕಾರು ಮಹಾರಾಷ್ಟ್ರದ ಸೆಲ್ಸೂರ ಬಳಿ ಬ್ರಿಡ್ಜ್ ನಿಂದ ಕಾರು ಕೆಳಗೆ ಉರುಳಿ ಬಿದ್ದಿದೆ. ಇದರಿಂದಾಗಿ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲರೂ ಕೂಡ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ. ಎಲ್ಲರೂ ಕೂಡ ವೈದ್ಯಕೀಯ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.

ಮದುವೆಯಾಗಲು ನಾದಿನಿಯನ್ನೇ ಕಿಡ್ನಾಪ್‌ ಮಾಡಿದ ಬಾವ

ಬೆಂಗಳೂರು : ಪತ್ನಿಯ ಸಹೋದರಿಯ ಪ್ರೀತಿಗೆ ಬಿದ್ದಿದ್ದ ವ್ಯಕ್ತಿಯೋರ್ವ ಮದುವೆಯಾಗಲು ನಿಕಾರಿಸಿದ ನಾದಿನಿಯನ್ನೇ ಕಿಡ್ನಾಪ್‌ ಮಾಡಿರುವ ಘಟನೆ ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ದೇವರಾಜ್‌ ಎಂಬಾತನಿಗೆ ಈಗಾಗಲೇ ಮದುವೆಯಾಗಿತ್ತು. ಮದುವೆಯಾದ ನಂತರದಲ್ಲಿ ಪತ್ನಿಯ ತಂಗಿಯ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದ. ಆದರೆ ಬಾವನ ಪ್ರೀತಿಯನ್ನು ನಾದಿನಿ ನಯವಾಗಿಯೇ ತಿರಸ್ಕರಿಸಿದ್ದಳು. ಆದರೆ ಇದು ದೇವರಾಜ್‌ನನ್ನು ಕೆರಳುವಂತೆ ಮಾಡಿತ್ತು. ಕೊನೆಗೆ ದೇವರಾಜ್‌ ತನ್ನನ್ನು ಮದುವೆಯಾಗುವಂತೆ ಪೀಡಿಸುವುದಕ್ಕೆ ಶುರು ಮಾಡಿದ್ದಾನೆ. ನಾದಿನಿ ಒಪ್ಪದೇ ಇದ್ದಾಗ ದೇವರಾಜ್‌ ಆಕೆಯನ್ನು ಕಿಡ್ನಾಪ್‌ ಮಾಡಿದ್ದಾನೆ.

ನಾದಿನಿಯನ್ನು ಬಲವಂತವಾಗಿ ಮದುವೆಯಾಗುವ ಸಲುವಾಗಿ ತನ್ನ ಸ್ನೇಹಿತರಾದ ನವೀನ್‌ ಹಾಗೂ ಕುಮಾರ್‌ ಅವರ ಜೊತೆಗೆ ಸೇರಿಕೊಂಡು ನಾದಿನಿಯನ್ನು ಕಿಡ್ನಾಪ್‌ ಮಾಡಿದ್ದಾನೆ. ಈ ಕುರಿತು ಯುವತಿಯ ಪೋಷಕರು ಕೊಡಿಗೆಹಳ್ಳಿ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ತನಿಖೆಯನ್ನು ಆರಂಭಿಸಿದ್ದರು. ಅಂತಿಮವಾಗಿ ಕೊಡಿಗೆಹಳ್ಳಿ ಠಾಣೆಯ ಪೊಲೀಸರು ಆರೋಪಿಗಳಾದ ದೇವರಾಜ್‌, ನವೀನ್‌ ಹಾಗೂ ಕುಮಾರ್‌ ಎಂಬವರನ್ನು ಬಂಧಿಸಿ, ಯುವತಿಯನ್ನು ರಕ್ಷಿಸಿದ್ದಾರೆ.

ಇದನ್ನೂ ಓದಿ : ಮೊಬೈಲ್​ ಖರೀದಿಸಿದ ಪತ್ನಿಯ ಕೊಲೆಗೆ ಸ್ಕೆಚ್​ ಹಾಕಿದ್ದ ಪತಿ ಅಂದರ್​​

ಇದನ್ನೂ ಓದಿ : ಮದುವೆಯಾಗಲು ನಾದಿನಿಯನ್ನೇ ಕಿಡ್ನಾಪ್‌ ಮಾಡಿದ ಬಾವ

(Maharashtra BJP MLA Son and 7 Medical Students Killed In Car Accident)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular