ಮಹಾರಾಷ್ಟ್ರ (Maharashtra Accident) : ಕೊಲ್ಲಾಪುರದಿಂದ ಪಂಡರಾಪುರಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಗಳ ಮೇಲೆ ಕಾರು ಹರಿದು 7 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿ, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಸಂಗೋಲ್ ಪಟ್ಟಣದಲ್ಲಿ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.
ಮುಂಬೈನಿಂದ ಸುಮಾರು 390 ಕಿಮೀ ದೂರದಲ್ಲಿರುವ ಸಂಗೋಲಾ ಪಟ್ಟಣದ ಬಳಿ ಸಂಜೆ 6.45 ರ ಸುಮಾರಿಗೆ ಅಪಘಾತ ಸಂಭವಿಸಿದೆ, 32 ಯಾತ್ರಾರ್ಥಿಗಳ ತಂಡವು ಕೊಲ್ಹಾಪುರ ಜಿಲ್ಲೆಯ ಜಥರ್ವಾಡಿಯಿಂದ ಪಂಢರಪುರದ ದೇವಸ್ಥಾನದ ಪಟ್ಟಣಕ್ಕೆ ಬಹುದಿನಗಳಿಂದ ಹಿಂದೆಯೇ ಪಾದಯಾತ್ರೆಗೆ ಸಿದ್ದತೆ ಮಾಡಿಕೊಂಡಿದ್ದು, ಮೂರು ದಿನಗಳ ಹಿಂದೆ ಕೊಲ್ಲಾಪುರದಿಂದ ನಡೆದುಕೊಂಡು ತೆರಳುತ್ತಿದ್ದರು. ಪಾದಯಾತ್ರಿಗಳು ಸಂಗೋಳ ತಲುಪುತ್ತಿದ್ದಂತೆಯೇ ವೇಗವಾಗಿ ಬಂದ ಎಸ್‌ಯುವಿ ಕಾರು ಪಾದಯಾತ್ರಿಗಳಿಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಏಳು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
Maharashtra | Seven dead, several injured in a road accident near Sangole town in Solapur district. pic.twitter.com/WnHvGFPBMt
— ANI (@ANI) October 31, 2022
ಮೇಲ್ನೋಟಕ್ಕೆ ಚಾಲಕನ ಅಜಾಗರೂಕತೆ ಹಾಗೂ ಅತೀ ವೇಗದ ಚಾಲನೆಯೇ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಗಾಯಾಳುಗಳನ್ನು ಸದ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ ಎಂದು ಸೊಲ್ಲಾಪುರ ಎಸ್ಪಿ ಶಿರೀಶ ಸರದೇಶಪಾಂಡೆ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ದುರಂತದ ಬೆನ್ನಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ ಐದು ಲಕ್ಷ ರೂಪಾಯಿ ಪರಿಹಾರವನ್ನು ಘೋಷಣೆ ಮಾಡಿದ್ದಾರೆ.
Maharashtra | Seven dead, several injured in a road accident near Sangole town in Solapur district. Pilgrims were traveling from Kolhapur to Pandharpur. More details awaited: Solapur SP Shirish Sardeshpande
— ANI (@ANI) October 31, 2022
ಗುಜರಾತ್‌ನಲ್ಲಿ ಒಂದು ದಿನದ ಹಿಂದೆಯಷ್ಟೇ ತೂಗು ಸೇತುವೆ ಕುಸಿದು ೧೪೦ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಈ ಘಟನೆಯ ಕಹಿ ನೆನಪು ಮರೆಯಾಗುವ ಮೊದಲೇ ಇದೀಗ ಮತ್ತೊಂದು ದುರಂತ ಸಂಭವಿಸಿದೆ.
ಇದನ್ನೂ ಓದಿ : Somalia Bomb Attack: ಸೊಮಾಲಿಯಾದ ಶಿಕ್ಷಣ ಇಲಾಖೆ ಕಚೇರಿ ಬಳಿ 2 ಕಾರು ಬಾಂಬ್ ಬ್ಲಾಸ್ಟ್: 100ಕ್ಕೂ ಅಧಿಕ ಮಂದಿ ಬಲಿ
ಇದನ್ನೂ ಓದಿ : 3 girls suicide: ಕ್ಲಾಸ್ ಬಂಕ್ ಮಾಡಿ ವಿಷ ಕುಡಿದ ಮೂವರು ಬಾಲಕಿಯರು: ಕಾರಣ ಕೇಳಿದ್ರೆ ಶಾಕ್ ಆಗ್ತೀರಾ
Maharashtra : car Accident 7 dead 5 pilgrims injured Solapur to Pandhrapur Religious walk