ಮಹಾರಾಷ್ಟ್ರದಲ್ಲಿ ಅಬ್ಬರಿಸುತ್ತಿದೆ ಕೋವಿಡ್ ಸೋಂಕು : ಇಂದಿನಿಂದ ಮೇ 1ರವರೆಗೆ ಸಂಪೂರ್ಣ ಲಾಕ್ ಡೌನ್

ಮುಂಬೈ : ಕೋವಿಡ್ ಎರಡನೇ ಅಲೆಯ ಆರ್ಭಟಕ್ಕೆ ಮಹಾರಾಷ್ಟ್ರ ಸಂಪೂರ್ಣವಾಗಿ ತತ್ತರಿಸಿ ಹೋಗಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ಮೇ 1ರ ವರೆಗೆ ಸಂಪೂರ್ಣ ಲಾಕ್ ಡೌನ್ ಆದೇಶ ಜಾರಿ ಮಾಡಲಾಗಿದೆ.

ಇಂದು ರಾತ್ರಿ 8 ಗಂಟೆಯಿಂದಲೇ ಲಾಕ್ ಡೌನ್ ಆದೇಶ ಜಾರಿ ಮಾಡಲಾಗುತ್ತಿದ್ದು, ಮಹಾರಾಷ್ಟ್ರ ಇಂದಿನಿಂದ ಒಂದು ವಾರಗಳ ಕಾಲ ಸಂಪೂರ್ಣವಾಗಿ ಬಂದ್ ಆಗಲಿದೆ. ಸರಕಾರಿ ಕಚೇರಿಗಳು ಶೇ.15ರಷ್ಟು ಸಿಬ್ಬಂದಿಗಳು ಮಾತ್ರವೇ ಕರ್ತವ್ಯ ನಿರ್ವಹಣೆ ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ. ತುರ್ತು ಸೇವೆಯಲ್ಲಿ ಕೆಲಸ ಮಾಡುವವರು, ಆಸ್ಪತ್ರೆಯ ಸಿಬ್ಬಂದಿ ಹಾಗೂ ಸರಕಾರಿ ನೌಕರರಿಗೆ ಮಾತ್ರವೇ ಸ್ಥಳೀಯ ರೈಲುಗಳಲ್ಲಿ ಸಂಚರಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಅಲ್ಲದೇ ಸ್ಥಳೀಯ ರೈಲು ಹಾಗೂ ಬಸ್ ಗಳಲ್ಲಿ ಶೇ.50ರಷ್ಟು ಪ್ರಯಾಣಿಕರ ಸಂಚಾರಕ್ಕೆ ಮಾತ್ರವೇ ಅವಕಾಶವನ್ನು ಕಲ್ಪಿಸಲಾಗಿದೆ.

ಲಾಕ್ ಡೌನ್ ಅವಧಿಯಲ್ಲಿ ಮದುವೆ ನಡೆಸೋದಕ್ಕೆ ಮಹಾರಾಷ್ಟ್ರ ಸರಕಾರ ಅವಕಾಶವನ್ನು ಕಲ್ಪಿಸಿದ್ದು, ಮದುವೆಯಲ್ಲಿ ಕೇವಲ 25 ಮಂದಿಗೆ ಮಾತ್ರವೇ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ 2 ಗಂಟೆಗಳ ಅವಧಿಯಲ್ಲಿ ಮದುವೆ ಸಮಾರಂಭವನ್ನೇ ಮುಕ್ತಾಯಗೊಳಿಸಬೇಕಾಗಿದೆ. ಒಂದೊಮ್ಮೆ ಮಾರ್ಗಸೂಚಿಯನ್ನು ಉಲ್ಲಂಘನೆ ಮಾಡಿದವರಿಗೆ 50 ಸಾವಿರ ರೂಪಾಯಿ ದಂಡ ವಿಧಿಸುವುದಾಗಿ ಸರಕಾರ ಎಚ್ಚರಿಸಿದೆ.

ಮಹಾರಾಷ್ಟ್ರದಲ್ಲಿ ಕಳೆದೆರಡು ದಿನಗಳಲ್ಲಿ ಬರೋಬ್ಬರಿ ಮಂಗಳವಾದ 68,631, ಬುಧವಾರ 67,468 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ ಸಾವಿನ ಸಂಖ್ಯೆಯಲ್ಲಿಯೂ ಏರಿಕೆಯಾಗಿದ್ದು, ನಿನ್ನೆ ಒಂದೇ ದಿನ 568 ಮಂದಿಯನ್ನು ಕೊರೊನಾ ಹೆಮ್ಮಾರಿ ಬಲಿ ಪಡೆದಿದೆ. ಕಳೆದ ವರ್ಷ ಒಂದು ದಿನ 519 ಮಂದಿ ಒಂದೇ ದಿನ ಸಾವನ್ನಪ್ಪಿರೋದು ದಾಖಲೆಯಾಗಿತ್ತು.

ಆದ್ರೆ ಈ ಬಾರಿ ಸಾವಿನ ವಿಚಾರದಲ್ಲಿಯೂ ಹಳೆಯ  ದಾಖಲೆಗಳನ್ನು ಕೊರೊನಾ ಹೆಮ್ಮಾರಿ ಮೀರಿಸಿ ಮುನ್ನುಗ್ಗುತ್ತಿದೆ. ಮಹಾರಾಷ್ಟ್ರದಲ್ಲಿ ಇದುವರೆಗೂ ಬರೋಬ್ಬರಿ 40,27,827 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.

Comments are closed.