Man Carries His Wife on Shoulders: ತಿರುಪತಿ ತಿರುಮಲನ ದರ್ಶನವೇ ಶ್ರೇಷ್ಠ. ಅದರಲ್ಲೂ ಮೆಟ್ಟಿಲು ಹತ್ತಿ ತಿರುಪತಿ ತಿರುಮಲನ ದರ್ಶನ ಪಡೆಯೋದು ಇನ್ನು ಶ್ರೇಷ್ಟ ಅನ್ನೋಮಾತಿದೆ. ಆದರೆ ಜನರು ಅವರವರ ಅನುಕೂಲಕ್ಕೆ ತಕ್ಕಂತೆ ಬಸ್, ಕಾರು, ಪಾದಯಾತ್ರೆ ಹೀಗೆ ನಾನಾಬಗೆಯಲ್ಲಿ ಏಳು ಕೊಂಡಲವಾಡನ ದರ್ಶನಕ್ಕೆ ಬರುತ್ತಾರೆ. ಆದರೆ ಇಲ್ಲೊಬ್ಬ ಪತಿ ಮಾತ್ರ ಪತ್ನಿಯನ್ನು ಹೆಗಲ ಮೇಲೆ ಹೊತ್ತು ತಿಮ್ಮಪ್ಪನ ದರ್ಶನ (Tirumala Hills) ಮಾಡೋ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಮಿಂಚಿದ್ದಾರೆ.
ಆಂಧ್ರಪ್ರದೇಶದ ಪೂರ್ವಗೋದಾವರಿ ಜಿಲ್ಲೆಯ ಕದಿಯಂ ಮಂಡಲದ ಕದಿಯಪುಂಕ ನಿವಾಸಿಯಾಗಿರುವ ಲಾರಿ ಮಾಲೀಕರಾಗಿರೋ ಸತ್ಯಬಾಬು ಹೀಗೆ ಪತ್ನಿಯನ್ನು ಭುಜದ ಮೇಲೆ ಹೊತ್ತು ಬೆಟ್ಟ ಹತ್ತಿದ ಶೂರ. ಸತ್ಯಬಾಬು ಹೀಗೆ ತಮ್ಮ ಲಾವಣ್ಯರನ್ನು ಭುಜದ ಮೇಲೆ ಹೊತ್ತು ಸಾಗಿದನ್ನು ನೋಡಿದ ಇತರ ಭಕ್ತರು ಯಾವುದೋ ಹರಕೆಯನ್ನು ತೀರಿಸಿಲು ಹೀಗೆ ಹೊರುತ್ತಿದ್ದಾರೆ ಎಂದುಕೊಂಡಿದ್ದರಂತೆ. ಇನ್ನು ಕೆಲವರು ಹೊಸದಾಗಿ ಮದುವೆಯಾದ ಜೋಡಿ ತಮ್ಮ ಪ್ರೀತಿ ವ್ಯಕ್ತಪಡಿಸಲು ಪತ್ನಿ ಇಂತಹ ಪ್ರಯತ್ನ ಮಾಡ್ತಿದ್ದಾರೆ ಅಂದುಕೊಂಡರಂತೆ. ಆದರೆ ಇದ್ಯಾವುದು ನಿಜವಲ್ಲ.

ಬದಲಾಗಿ ತಮ್ಮ ಪತ್ನಿಯ ಚಾಲೆಂಜ್ ಎದುರಿಸಿ ಗೆಲ್ಲಲು ಸತ್ಯಬಾಬು ತಮ್ಮ ಹೆಂಡತಿಯನ್ನು ಹೊತ್ತಿದ್ದಾರಂತೆ. ವೇಗವಾಗಿ ತಿರುಪತಿ ತಿಮ್ಮಪ್ಪ ನ ಸನ್ನಿಧಾನದ ಮೆಟ್ಟಿಲು ಹತ್ತುತ್ತಿದ್ದ ಸತ್ಯಬಾಬುಗೆ ಪತ್ನಿ ತನ್ನನ್ನು ಹೊತ್ತು ಹತ್ತುವಂತೆ ಚಾಲೆಂಜ್ ಹಾಕಿದ್ದರಂತೆ. ಅದಕ್ಕೆ ಸತ್ಯಬಾಬು ಹೆಂಡತಿಯ ಚಾಲೆಂಜ್ ಸ್ವೀಕರಿಸಿ ಆಕೆಯನ್ನು ಹೊತ್ತು ದೇವರ ದರ್ಶನ ಮಾಡಿದ್ದಾರೆ.
ಇಷ್ಟಕ್ಕೂ ಈ ಜೋಡಿ ಇಷ್ಟೊಂದು ಪ್ರೀತಿಯಿಂವ ವರ್ತಿಸಿದ್ದು ನೋಡಿ ನವ ವಿವಾಹಿತರು ಅಂದ್ಕೋಬೇಡಿ. ಈ ಜೋಡಿ ಮದುವೆಯಾಗಿ ಬರೋಬ್ಬರಿ 24 ವರ್ಷಗಳು ಸಂದಿವೆ. 1998 ರಲ್ಲಿ ಮದುವೆಯಾದ ಈ ಜೋಡಿಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಇಬ್ಬರಿಗೂ ಮದುವೆಯಾಗಿ ಮಕ್ಕಳಿದ್ದಾರಂತೆ. ಅಷ್ಟೇ ಅಲ್ಲ ಸತ್ಯಬಾಬು ಹಾಗೂ ಲಾವಣ್ಯ ಮೊಮ್ಮಕ್ಕಳನ್ನು ನೋಡಿ ಅಜ್ಜಿ ತಾತ ಎನ್ನಿಸಿಕೊಂಡಿದ್ದಾರೆ.

ಸತ್ಯಬಾಬು ಅಳಿಯನಿಗೆ ಒಳ್ಳೆಯ ಸಾಫ್ಟವೇರ್ ಕಂಪನಿಯಲ್ಲಿ ಕೆಲಸ ಸಿಕ್ಕಿದರೇ ಕುಟುಂಬಸಮೇತರಾಗಿ ಬಂದು ಪೂಜೆ ಸಲ್ಲಿಸೋದಾಗಿ ಹರಕೆ ಹೊತ್ತಿದ್ದರಂತೆ. ಹೀಗಾಗಿ ಸತ್ಯಬಾಬು ಅಳಿಯ ಗುರುದತ್ 40 ಜನ ಕುಟುಂಬ ಸದಸ್ಯರ ಜೊತೆ ಬಂದು ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಸತ್ಯಬಾಬು ಹಾಗೂ ಲಾವಣ್ಯ ಈ ವಿಡಿಯೋ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾ ಮಂದಿ ಮಾತ್ರ ಹೆಂಡತಿ ಮೇಲಿನ ಪ್ರೀತಿ ಅಂದ್ರೇ ಇದಪ್ಪ ಅಂತಿದ್ದಾರೆ.
ಇದನ್ನೂ ಓದಿ : Chandan Shetty – Niveditha Gowda : ರೀಲ್ಸ್ ನಲ್ಲಿ ಲಿಪ್ ಲಾಕ್ ಮಾಡಿದ ಚಂದನ್ ಶೆಟ್ಟಿ ನಿವೇದಿತಾ ಗೌಡ ಜೋಡಿ
ಇದನ್ನೂ ಓದಿ : Sarja family : ಸರ್ಜಾ ಫ್ಯಾಮಿಲಿಗೂ ಅಕ್ಟೋಬರ್ ಗೂ ಇದೆ ವಿಶೇಷ ನಂಟು ; ಇದು ಸರ್ಜಾ ಕುಟುಂಬದ ಸ್ಪೆಶಲ್ ಸ್ಟೋರಿ
Man Carries His Wife on Shoulders in Tirumala Hills tirumala Challenge Viral Video