Mysore dasara 2022 :ನಾಡಹಬ್ಬ ದಸರಾಕ್ಕೆ 46 ಸ್ತಬ್ದಚಿತ್ರಗಳು ಸಜ್ಜು : ಅರಮನೆ ನಗರಿಯಲ್ಲಿ ರಾರಾಜಿಸಲಿದೆ ಅಪ್ಪು ಸ್ತಬ್ದಚಿತ್ರ

ಮೈಸೂರು:(Mysore dasara 2022 Appu) ಕಳೆದ ಎರಡು ವರ್ಷಗಳ ಕಾಲ ಕೊರೊನಾ ಸಂಕಷ್ಟದಿಂದಾಗಿ ನಾಡಹಬ್ಬ ಮೈಸೂರು ದಸರಾವನ್ನು ಸರಳವಾಗಿ ಆಚರಿಸಲಾಗಿತ್ತು. ಆದರೆ ಈ ಬಾರಿ ದಸರಾ ವಿಜೃಂಭಣೆಯಿಂದ ನಡೆಯಲಿದೆ. ಮೈಸೂರು ದಸರಾದಲ್ಲಿ ಸ್ತಬ್ದಚಿತ್ರ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಿದ್ದು, ಪ್ರತೀ ಜಿಲ್ಲೆಗಳ ವಿಶೇಷತೆಗಳನ್ನು ಸ್ತಬ್ದಚಿತ್ರದ ಮೂಲಕ ಪ್ರದರ್ಶಿಸಲಾಗುತ್ತದೆ. ಈ ಬಾರಿ 46 ಸ್ತಬ್ದಚಿತ್ರಗಳು ನಾಡಹಬ್ಬದಲ್ಲಿ ಪ್ರದರ್ಶನಗೊಳ್ಳಲಿವೆ. ಆದರೆ ಚಾಮರಾಜನಗರದಿಂದ ಅಪ್ಪು ಮುಖದ ಸ್ತಬ್ದಚಿತ್ರ ಪ್ರಮುಖ ಆಕರ್ಷಣೆಯಾಗಿರಲಿದೆ.

(Mysore dasara 2022)ಈಗಾಗಲೇ ನೂರಾರು ಕಲಾವಿದರು ಸ್ತಬ್ದಚಿತ್ರ ನಿರ್ಮಾಣದ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಶೇಕಡಾ 80 ರಷ್ಟು ಕೆಲಸವನ್ನು ಪೂರ್ಣಗೊಳಿಸಿದ್ದಾರೆ. ರಾಜ್ಯ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸ್ತಬ್ದಚಿತ್ರಗಳ ಮೂಲಕ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿವೆ. ಪ್ರತೀ ಜಿಲ್ಲೆಗಳ ಪ್ರತಿ ಜಿಲ್ಲೆಗಳ ಐತಿಹಾಸಿಕ , ಪ್ರಾಕೃತಿಕ, ಭೌಗೋಳಿಕ ಮತ್ತು ಪಾರಂಪರಿಕಗಳನ್ನು ಒಳಗೊಂಡಿರುವ ಸ್ತಬ್ದಚಿತ್ರಗಳಿಗೆ ಆದ್ಯತೆ ನೀಡಲಾಗುತ್ತಿದೆ.

ಪ್ರತಿ ಜಿಲ್ಲೆಯ ಸ್ತಬ್ದಚಿತ್ರದ ಜೊತೆಗೆ ಇದರ ಉಪಸಮಿತಿಯಿಂದ, ಮೈಸೂರು ವಿಶ್ವ ವಿದ್ಯಾನಿಲಯ, ಚೆಸ್ಕಾಂ, ಸಮಾಜ ಕಲ್ಯಾಣ ಇಲಾಖೆ, ಪ್ರವಾಸೋದ್ಯಮ ಇಲಾಖೆ,ಕೌಶಲ್ಯ ಕರ್ನಾಟಕ, ಕೆಎಂಎಫ್‌, ಕಾವೇರಿ ನಿರಾವರಿ ನಿಗಮ,ಆಜಾದಿ ಕಾ ಅಮೃತ ಮಹೋತ್ಸವ ಸಾರುವ ಸ್ತಬ್ದಚಿತ್ರದ ಮೂಲಕ ಕ್ಷೇತ್ರದ ಸಾಧನೆಗಳನ್ನು ಅಕ್ಟೋಬರ್‌ 5 ರಂದು ಜನರ ಮುಂದೆ ಪ್ರದರ್ಶಿಸಲಾಗುತ್ತದೆ.

ಇದನ್ನೂ ಓದಿ:Selfless Virat Kohli: ದಾಖಲೆಗಾಗಿ ಆಡಲ್ಲ ವಿರಾಟ್, ಇಲ್ಲಿದೆ ಮತ್ತೊಂದು ಸಾಕ್ಷಿ, ಕಿಂಗ್ ಕೊಹ್ಲಿ ನಿಸ್ವಾರ್ಥತೆಗೆ ಫ್ಯಾನ್ಸ್ ಫಿದಾ

ಇದನ್ನೂ ಓದಿ:Virat Kohli 11000 runs : ಟಿ20 ಕ್ರಿಕೆಟ್: ಕೊಹ್ಲಿ@11000, ವಿರಾಟ ದಾಖಲೆ ಬರೆದ ಕಿಂಗ್

ಇದನ್ನೂ ಓದಿ:Assam boy spent 23k to meet Virat Kohli : ವಿರಾಟ್ ಕೊಹ್ಲಿ ಸೆಲ್ಫಿಗಾಗಿ ಬರೋಬ್ಬರಿ 23 ಸಾವಿರ ಖರ್ಚು ಮಾಡಿದ ಅಸ್ಸಾಂ ಹುಡುಗ, ಅಭಿಮಾನಿಯ ಆಸೆ ನೆರವೇರಿಸಿದ ಕಿಂಗ್

ಪ್ರತಿ ಬಾರಿ ಜಂಬೂ ಸವಾರಿಯಲ್ಲಿ ನಡೆಯುವ ಸ್ತಬ್ದಚಿತ್ರದ ಪ್ರದರ್ಶನಕ್ಕೆ ಭಾಗವಹಿಸುವ ತಂಡಕ್ಕೆ ಮೈಸೂರು ಜಿಲ್ಲಾ ಪಂಚಾಯಿತಿ ವತಿಯಿಂದ ಉತ್ತಮ ಸ್ತಬ್ದಚಿತ್ರಕ್ಕೆ ಬಹುಮಾನವನ್ನು ಕೊಡಲಾಗುತ್ತದೆ. ಈ ಬಾರಿಯ ಪ್ರದರ್ಶನದಲ್ಲಿ ಯಾವ ಸ್ತಬ್ದಚಿತ್ರಕ್ಕೆ ಬಹುಮಾನ ಬರುತ್ತದೆ ಎಂದು ಕಾದು ನೋಡಬೇಕಿದೆ.

Mysore dasara 2022 Appu: 46 stills ready for dasara

Comments are closed.