ಬುಧವಾರ, ಏಪ್ರಿಲ್ 30, 2025
HomeNationalMandus Cyclone: ಮ್ಯಾಂಡಸ್‌ ಚಂಡಮಾರುತಕ್ಕೆ ನಾಲ್ವರು ಬಲಿ: ಜಲಾವೃತಗೊಂಡ ತಮಿಳುನಾಡು

Mandus Cyclone: ಮ್ಯಾಂಡಸ್‌ ಚಂಡಮಾರುತಕ್ಕೆ ನಾಲ್ವರು ಬಲಿ: ಜಲಾವೃತಗೊಂಡ ತಮಿಳುನಾಡು

- Advertisement -

ಚೆನ್ನೈ: (Mandus Cyclone) ಮ್ಯಾಂಡಸ್‌ ಚಂಡಮಾರುತದ ಅಬ್ಬರ ಜೋರಾತಿದ್ದು, ತಮಿಳುನಾಡಿನಲ್ಲಿ ಮ್ಯಾಂಡಸ್‌ ಚಂಡಮಾರುತಕ್ಕೆ ನಾಲ್ವರು ಬಲಿಯಾಗಿದ್ದು, ಹಲವು ಕಡೆ ಭೂಕುಸಿತ ಉಂಟಾಗಿ ಹಲವು ಕಟ್ಟಡಗಳು ಹಾಗೂ ಮನೆಗಳಿಗೆ ಹಾನಿಗಳಾಗಿವೆ.

ಈ ಚಂಡಮಾರುತ(Mandus Cyclone)ವು ಗಂಟೆಗೆ 85 ಕಿ.ಮೀ ವೇಗದಲ್ಲಿ ಬೀಸುತ್ತಿರುವ ಪರಿಣಾಮ ತಮಿಳುನಾಡಿನಲ್ಲಿ ಭೂಕುಸಿತವಾಗಿದ್ದು, 400 ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ತಮಿಳುನಾಡಿನಾದ್ಯಂತ ಚಂಡಮಾರುತಕ್ಕೆ ಸಾಕಷ್ಟು ಮನೆಗಳು, ಕಟ್ಟಡಗಳು ಹಾನಿಯಾಗಿದ್ದು, ಸೈಕ್ಲೋನ್‌ ಗೆ ನಾಲ್ವರು ಬಲಿಯಾಗಿದ್ದಾರೆ. ಇನ್ನೂ ಅನೇಕ ಮರಗಳು ಧರೆಗುರುಳಿ ಬಿದ್ದಿದ್ದು, ಬಿದ್ದ ಮರಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ.

ಚೆನ್ನೈ ನಲ್ಲಿ ನಿಲ್ಲಿಸಿದ್ದ ಕಾರುಗಳ ಮೇಲೆ ಗೋಡೆಗಳು ಕುಸಿದು ಬಿದ್ದಿದ್ದು, ಪರಿಣಾಮ ಕಾರುಗಳು ಜಖಂ ಆಗಿವೆ. ಹಲವು ಕಡೆ ವಿದ್ಯುತ್‌ ಕಂಬಗಳು ದರೆಗುರುಳಿದ್ದು, ನಗರದಲ್ಲಿ ವಿದ್ಯುತ್‌ ಕೂಡ ವ್ಯತ್ಯಯವಾಗಿದೆ. ಇನ್ನೂ ತಮಿಳುನಾಡು ಪೂರ್ತಿಯಾಗಿ ಜಲಾವೃತವಾಗಿದ್ದು, ಮನೆಗಳಿಗೆ ನೀರು ನುಗ್ಗಿದೆ.

ಮ್ಯಾಂಡಸ್‌ ಚಂಡಮಾರುತಕ್ಕೆ ತಮಿಳುನಾಡಿನ ಜನರ ಜೀವನ ಅಸ್ತವ್ಯಸ್ತಗೊಂಡಿದ್ದು, 205 ರಿಲೀಫ್‌ ಕ್ಯಾಂಪ್ಗಳಲ್ಲಿ 9 ಸಾವಿರ ಜನರಿಗೆ ಆಶ್ರಯ ನೀಡಲಾಗಿದೆ. ರಾಜ್ಯದ 10 ಜಿಲ್ಲೆಗಳಲ್ಲಿ ಎನ್‌ಡಿಆರ್‌ಎಫ್( NDRF) ತಂಡಗಳನ್ನು ನಿಯೋಜನೆ ಮಾಡಲಾಗಿದ್ದು, ಚಂಡಮಾರುತಕ್ಕೆ ಹಾನಿಗೊಳಗಾದವನ್ನು ರಕ್ಷಿಸಲಾಗುತ್ತಿದೆ. ಈಗಾಗಲೇ ಚಂಡಮಾರುತಕ್ಕೆ ತಮಿಳು ನಾಡಿನ ಜನತೆ ಅಸ್ತವ್ಯಸ್ತಗೊಂಡಿದ್ದು, ಇಂದು ಕೂಡ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ : 7th Pay Commission Latest News | ಕೇಂದ್ರ ಸರಕಾರಿ ನೌಕರರಿಗೆ ಹೊಸ ವರ್ಷದ ಗಿಫ್ಟ್ : 10 ತಿಂಗಳ ಡಿಎ ಬಾಕಿ ಹೆಚ್ಚಳ

ಇದನ್ನೂ ಓದಿ : Kidnap Case: ಮನೆಗೆ ನುಗ್ಗಿ ಯುವತಿಯನ್ನು ಅಪಹರಿಸಿದ 100 ಜನ ಯುವಕರ ಗುಂಪು: ವಿಡಿಯೋ ವೈರಲ್‌

ಇದನ್ನೂ ಓದಿ : Boy fall into borewell: 4 ದಿನಗಳ ಕಾಲ ಜೀವನ್ಮರಣ ಹೋರಾಟ: ಕೊನೆಗೂ ಬದುಕಿ ಬರಲಿಲ್ಲ ಬೋರ್‌ ವೆಲ್‌ ಗೆ ಬಿದ್ದ 8 ವರ್ಷದ ಬಾಲಕ

(Mandus Cyclone) Cyclone Mandus was raging, four people were killed in Tamil Nadu due to cyclone Mandus, landslides occurred in many places and many buildings and houses were damaged.

RELATED ARTICLES

Most Popular