ನವದೆಹಲಿ: Masks not mandatory: ದೇಶದಲ್ಲಿ ಕೋವಿಡ್ ಅಲೆ ಬಂದಿದ್ದೂ ಆಯ್ತು.. ಹೋಗಿದ್ದೂ ಆಯ್ತು. ಆದರೆ ವಿಮಾನ ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯ ಎಂಬ ನಿಯಮ ಸಡಿಲಗೊಂಡಿರಲಿಲ್ಲ. ಇದರಿಂದ ಬೇಸತ್ತ ಮಾಸ್ಕ್ ವಿರೋಧಿ ವಿಮಾನ ಪ್ರಯಾಣಿಕರಿಗೆ ನಾಗರಿಕ ವಿಮಾನಯಾನ ಸಚಿವಾಲಯ ಮಾಸ್ಕ್ ಕಡ್ಡಾಯ ರೂಲ್ಸ್ ತೆಗೆದುಹಾಕುವ ಮೂಲಕ ಸಿಹಿ ಸುದ್ದಿ ನೀಡಿದೆ.
ಇದನ್ನೂ ಓದಿ: Shabrimala Yatre : ಶಬರಿಮಲೆ ಯಾತ್ರಿಕರಿಗಾಗಿ ಕೊಟ್ಟಾಯಂ ರೈಲು ನಿಲ್ದಾಣದಲ್ಲಿ ಪ್ರಾರಂಭವಾದ ‘ಶಬರಿಮಲೆ ಯಾತ್ರಿಕ ಕೇಂದ್ರ’
ಕೊರೋನಾ ಭೀತಿ ಹಿನ್ನೆಲೆಯಲ್ಲಿ ವಿಮಾನದಲ್ಲಿ ಪ್ರಯಾಣಿಸುವ ಜನರು ಮಾಸ್ಕ್ ಧರಿಸಬೇಕು. ವಿಮಾನಯಾನ ಸಂಸ್ಥೆಗಳೂ ಈ ಬಗ್ಗೆ ಪ್ರಯಾಣಿಕರಿಗೆ ಮನವರಿಕೆ ಮಾಡಿಕೊಡಬೇಕು. ಆದರೆ ಇನ್ಮುಂದೆ ಕೆಲ ಕಾರಣಗಳಿಂದಾಗಿ ಮಾಸ್ಕ್ ಧರಿಸದೇ ಇರುವ ಪ್ರಯಾಣಿಕರಿಗೆ ದಂಡ ಅಥವಾ ಶಿಕ್ಷೆ ವಿಧಿಸುವ ಹಾಗಿಲ್ಲ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಎಲ್ಲಾ ವಿಮಾನ ಪ್ರಯಾಣಿಕರಿಗೆ ಈ ನಿಯಮ ಅನ್ವಯವಾಗಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಆದೇಶ ಹೊರಡಿಸಿದೆ.
ವಿಮಾನ ಪ್ರಯಾಣದ ಸಮಯದಲ್ಲಿ ಮಾಸ್ಕ್ ಬಳಕೆ ಕಡ್ಡಾಯವಲ್ಲ. ಆದರೆ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವ ನಡುವೆಯೂ ಪ್ರಯಾಣಿಕರು ಮಾಸ್ಕ್ ಬಳಸುವುದು ಉತ್ತಮ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಸಲಹೆ ನೀಡಿದೆ. ಕೋವಿಡ್ ದೇಶಕ್ಕೆ ಕಾಲಿಟ್ಟ ದಿನದಿಂದ ಇಂದಿನವರೆಗೆ ವಿಮಾನ ಪ್ರಯಾಣಿಕರು ಮಾಸ್ಕ್ ಅಥವಾ ಫೇಸ್ ಕವರ್ ಗಳನ್ನು ಕಡ್ಡಾಯವಾಗಿ ಬಳಸಲೇಬೇಕಿತ್ತು. ನಿಗದಿತ ವಿಮಾನಯಾನ ಸಂಸ್ಥೆಗಳಿಗೆ ನೀಡಿದ ಸಂವಹನದಲ್ಲಿ, ಕೋವಿಡ್-19 ನಿರ್ವಹಣೆಯ ಪ್ರತಿಕ್ರಿಯೆಗೆ ಶ್ರೇಣಿಕೃತ ವಿಧಾನದ ಸರ್ಕಾರದ ನೀತಿಗೆ ಅನುಗುಣವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿನ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆಯು ಒಟ್ಟು ಸೋಂಕುಗಳ ಶೇಕಡಾ 0.02 ರಷ್ಟು ಮಾತ್ರ. ಮತ್ತು ಕೋವಿಡ್ ನಿಂದ ಚೇತರಿಕೆಗೊಂಡವರ ಪ್ರಮಾಣ ಶೇಕಡಾ 98.79ರಷ್ಟು ಏರಿಕೆ ಕಂಡಿದೆ ಎಂದು ತಿಳಿದುಬಂದಿದೆ. ಅಂತೆಯೇ ಕೋವಿಡ್ ನಿಂದ ಚೇತರಿಕೆ ಕಂಡವರ ಸಂಖ್ಯೆ 4,41,28,580 ಹಾಗೂ ಸಾವಿನ ಪ್ರಮಾಣವು ಶೇಕಡಾ 1.19ರಷ್ಟಿದೆ.
Masks not mandatory: Aviation ministry says that face masks not mandatory on flights anymore