Black magic: ಇನ್ ಸ್ಟಾಗ್ರಾಂನಲ್ಲಿ ಪರಿಚಯವಾದ ಜ್ಯೋತಿಷಿ ಉದ್ಯಮಿ ಮನೆಗೆ ಬಂದು ಮಾಡಿದ್ದು ಎಂಥಾ ಕೆಲಸ ನೋಡಿ..

ಮುಂಬೈ: Black magic: ಕಳೆದ 4 ದಿನಗಳ ಹಿಂದೆ ಸತ್ತ ಅಪ್ಪನನ್ನು ಮರಳಿ ಬದುಕಿಸಲು ಮಹಿಳೆಯೊಬ್ಬಳು 2 ತಿಂಗಳ ಗಂಡು ಮಗುವನ್ನು ಬಲಿ ಕೊಡಲು ಯತ್ನಿಸಿದಂಥ ಘಟನೆ ದೆಹಲಿಯಲ್ಲಿ ಬೆಳಕಿಗೆ ಬಂದಿತ್ತು. ಇಂಥದ್ದೇ ಮೂಢನಂಬಿಕೆಗೆ ಮರುಳಾಗಿ ಮಹಿಳೆಯೊಬ್ಬಳು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ಮುಂಬೈನಲ್ಲಿ ನಡೆದಿದೆ.

ಇದನ್ನೂ ಓದಿ: Masks not mandatory: ವಿಮಾನ ಪ್ರಯಾಣಿಕರಿಗೆ ಇನ್ಮುಂದೆ ಮಾಸ್ಕ್ ಕಡ್ಡಾಯವಿಲ್ಲ ಆದರೆ..

ಮುಂಬೈನ ಉದ್ಯಮಿಯೊಬ್ಬರ ಪತ್ನಿ ಗಂಡನನ್ನು ತನ್ನ ಹತೋಟಿಗೆ ತರಬೇಕು ಎಂಬ ಉದ್ದೇಶದಿಂದ ಮಾಟಗಾರನ ಮೊರೆ ಹೋಗಿ 59 ಲಕ್ಷ ರೂ. ಕಳೆದುಕೊಂಡಿದ್ದಾಳೆ. ಮನೆಯಲ್ಲಿ ಹಣ ನಾಪತ್ತೆಯಾಗಿದ್ದನ್ನು ಕಂಡು ಉದ್ಯಮಿ ತನ್ನ ಪತ್ನಿಯ ವಿಚಾರಣೆ ನಡೆಸಿದಾಗ ನಿಜಾಂಶ ಬಯಲಾಗಿದೆ.

ಪ್ರಕರಣದ ಹಿನ್ನೆಲೆ ಹೀಗಿದೆ:
ಮುಂಬೈನ ಅಂಧೇರಿ ಪೂರ್ವದಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದ 39 ವರ್ಷದ ಉದ್ಯಮಿಯೊಬ್ಬರು ದೀಪಾವಳಿ ಸಂದರ್ಭದಲ್ಲಿ ತಮ್ಮ ಉದ್ಯೋಗಿಗಳಿಗೆ ಬೋನಸ್ ನೀಡುವ ಸಲುವಾಗಿ 35 ಲಕ್ಷ ರೂ. ನಗದನ್ನು ತಂದು ಮನೆಯ ಕಬೋರ್ಡ್ ನಲ್ಲಿಟ್ಟಿದ್ದರು. ಆದರೆ ಅವರು ಇಟ್ಟಿದ್ದ ಹಣ ಇದ್ದಕ್ಕಿದ್ದಂತೆ ನಾಪತ್ತೆ ಆಗಿತ್ತು. ಗಾಬರಿಗೊಂಡ ಅವರು ಪತ್ನಿಯನ್ನು ವಿಚಾರಿಸಿದಾಗ ಆಕೆ ತನಗೆ ಗೊತ್ತೇ ಇಲ್ಲ ಎಂದಿದ್ದಾಳೆ. ಹೀಗಾಗಿ ಉದ್ಯಮಿ ಹಣ ಕಳುವಾದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನ್ನ ನೌಕರರಿಗೆ ದೀಪಾವಳಿ ಬೋನಸ್ ನೀಡುವ ಸಲುವಾಗಿ ಅಕ್ಟೋಬರ್ 2ನೇ ವಾರದಲ್ಲಿ ಬ್ಯಾಂಕ್ ನಿಂದ 39 ಲಕ್ಷ ರೂ. ಹಣ ತಂದು ಮನೆಯಲ್ಲಿ ಇಟ್ಟಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದರು.

ಅಲ್ಲದೇ ತನ್ನವರೇ ಈ ಪ್ರಕರಣದಲ್ಲಿ ಶಾಮೀಲು ಆಗಿದ್ದಾರೆ ಎಂಬ ಸಂಶಯವನ್ನು ದೂರಿನಲ್ಲಿ ಉಲ್ಲೇಖಿಸಿದ್ದಲ್ಲದೇ, ತನ್ನ ಪತ್ನಿಗೆ ಪರೇಶ್ ಗಡಾ ಎಂಬುವವನ ಜೊತೆ 13 ವರ್ಷಗಳ ಹಿಂದೆ ಸಂಬಂಧವಿತ್ತು. ತನಗೆ ಈ ಸಂಗತಿ ತಿಳಿದಾಗ ಅವರಿಬ್ಬರ ಸಂಬಂಧ ಮುರಿದುಬಿತ್ತು ಎಂದು ಉದ್ಯಮಿ ಪತಿ ದೂರಿನಲ್ಲಿ ತಿಳಿಸಿದ್ದರು.

ಅ,18ರಂದು ಕಪಾಟಿನಲ್ಲಿದ್ದ ಹಣ ಕಳುವಾದ ವಿಚಾರ ತನ್ನ ಗಮನಕ್ಕೆ ಬಂದಿದ್ದು ಪತ್ನಿಯನ್ನು ವಿಚಾರಿಸಿದಾಗ ಆಕೆ ತನಗೆ ಗೊತ್ತೇ ಇಲ್ಲ ಎಂದಿದ್ದಾಳೆ. ಕೊನೆಗೆ ತನ್ನ ಅಕ್ಕನ ಜೊತೆ ತನ್ನ ಪತ್ನಿಯ ಜೊತೆ ಹಣ ಕಳವಾದ ಬಗ್ಗೆ ಪ್ರತ್ಯೇಕವಾಗಿ ಮಾತನಾಡುವಂತೆ ಉದ್ಯಮಿ ಹೇಳಿದ್ದಾರೆ. ಘಟನೆ ನಡೆದು ಕೆಲ ದಿನಗಳ ಬಳಿಕ ಉದ್ಯಮಿ ಪತ್ನಿ ತಾನು ಹಣ ಹಾಗೂ ತನ್ನ ಚಿನ್ನವನ್ನು ಜ್ಯೋತಿಷಿ ಒಬ್ಬರಿಗೆ ನೀಡಿರುವುದಾಗಿ ಬಾಯ್ಬಿಟ್ಟಿದ್ದಾಳೆ. ಅಲ್ಲದೇ ಪತಿಯನ್ನು ಕಂಟ್ರೋಲ್ ಗೆ ತೆಗೆದುಕೊಳ್ಳುವ ಉದ್ದೇಶದಿಂದ ಈ ರೀತಿ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ.

ಇದನ್ನೂ ಓದಿ: Suicide Attempt: ಗೋಳಗುಮ್ಮಟದಿಂದ ಜಿಗಿದು ವ್ಯಕ್ತಿಯೋರ್ವ ಸಾವು: ಆತ್ಮಹತ್ಯಾ ತಾಣವಾಗುತ್ತಿದೆಯಾ ಪ್ರವಾಸಿ ಸ್ಥಳ..?

ಬಾದಲ್ ಶರ್ಮಾ ಎಂಬ ಜ್ಯೋತಿಷಿ ಇನ್ ಸ್ಟಾಗ್ರಾಂನಲ್ಲಿ ಉದ್ಯಮಿಯ ಪತ್ನಿಗೆ ಪರಿಚಯವಾಗಿದ್ದ. ಆತನ ಜಾಹೀರಾತನ್ನು ನೋಡಿ ಅವನನ್ನು ಸಂಪರ್ಕಿಸಿದ್ದ ಆಕೆ ಕುಟುಂಬಸ್ಥರ ಮಾತನ್ನು ಕೇಳಿ ಗಂಡ ತನಗೆ ಕಿರುಕುಳ ನೀಡುತ್ತಿದ್ದಾನೆ. ಹೀಗಾಗಿ ಆತನನ್ನು ತನ್ನ ಹತೋಟಿಗೆ ತೆಗೆದುಕೊಳ್ಳಬೇಕೆಂಬ ತನ್ನ ಉದ್ದೇಶವನ್ನು ಆತನಿಗೆ ತಿಳಿಸಿದ್ದಾಳೆ. ಆತ ಅವಳಿಗೆ ಕೆಲಸ ಮಾಡಿಕೊಡುವುದಾಗಿ ನಂಬಿಸಿ ಹಣ ಹಾಗೂ ಚಿನ್ನಕ್ಕೆ ಡಿಮ್ಯಾಂಡ್ ಮಾಡಿದ್ದ. ಇನ್ನು ಆಕೆಯ ಮಾಜಿ ಗೆಳೆಯ ಪರೇಶ್ ಗಡಾ ಕೂಡಾ ಆಕೆಗೆ ಸಹಕಾರ ನೀಡುವುದಾಗಿ ಹೇಳಿದ್ದಾನೆ. ಕೊನೆಗೆ ಅವರಿಬ್ಬರು ಮಾಟ ಮಂತ್ರದ ಹೆಸರಿನಲ್ಲಿ ಉದ್ಯಮಿ ಮನೆಗೆ ಬಂದು ಆಕೆಯ ಮನೆ ತಪಾಸಣೆ ಹೆಸರಲ್ಲಿ ಕಬೋರ್ಡ್ ನಲ್ಲಿದ್ದ 39 ಲಕ್ಷ ರೂ. ಎಗರಿಸಿದ್ದಾರೆ. ಮೇಲಾಗಿ ಆಕೆ 20 ಲಕ್ಷ ಮೌಲ್ಯದ ಚಿನ್ನ ಕೂಡಾ ಆಕೆ ಅವರಿಗೆ ನೀಡಿದ್ದು, ಒಟ್ಟು 59 ಲಕ್ಷ ರೂ. ಎಗರಿಸಿ ಖದೀಮರು ಎಸ್ಕೇಪ್ ಆಗಿದ್ದಾರೆ. ವಿಚಾರಣೆ ವೇಳೆ ಸತ್ಯ ಬಯಲಾಗಿದೆ.

Black magic: Wife pays 60 lakhs to Instagram astrologer for total control over husband

Comments are closed.