ಭಾನುವಾರ, ಏಪ್ರಿಲ್ 27, 2025
HomeNationalMekedatu DPR debate : ಮೇಕೆದಾಟು ಡಿಪಿಆರ್ ಚರ್ಚೆಗೂ ಅಡ್ಡಿ : ಮತ್ತೆ ಸುಪ್ರೀಂ ಮೆಟ್ಟಿಲೇರಿದ...

Mekedatu DPR debate : ಮೇಕೆದಾಟು ಡಿಪಿಆರ್ ಚರ್ಚೆಗೂ ಅಡ್ಡಿ : ಮತ್ತೆ ಸುಪ್ರೀಂ ಮೆಟ್ಟಿಲೇರಿದ ತಮಿಳುನಾಡು

- Advertisement -

ಬೆಂಗಳೂರು : ಕಳೆದ ಹಲವು ವರ್ಷಗಳಿಂದ ಕರ್ನಾಟಕದ ಬಹುನೀರಿಕ್ಷಿತ ಮೇಕೆದಾಟು ಆಣೆಕಟ್ಟು ಯೋಜನೆಗೆ ಅಡ್ಡಿ ಪಡಿಸುತ್ತಲೇ ಬಂದಿರೋ ತಮಿಳುನಾಡು ಈಗಲೂ ಮತ್ತೇ ಅದೇ ಪ್ರವೃತ್ತಿ ಮುಂದುವರಿಸಿದ್ದು, ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣ ಯೋಜನೆ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿರೋ ಅರ್ಜಿ ತುರ್ತು ವಿಚಾರಣೆಗೆ‌ಕೋರಿ ಸುಪ್ರೀಂ ಮೆಟ್ಟಿಲೇರಿದೆ. ಈಗಾಗಲೇ ಮೇಕೆದಾಟು ಯೋಜನೆ ಆರಂಭಕ್ಕೆ ಸಿದ್ಧ ಎಂದು ರಾಜ್ಯ ಸರ್ಕಾರ ಹೇಳಿದೆ. ಮಾತ್ರವಲ್ಲ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ನೇತೃತ್ವದ ಸರ್ಕಾರ ಮೇಕೆದಾಟು ಯೋಜನೆ ಡಿಪಿಆರ್ (Mekedatu DPR debate) ಮುಂದಿಟ್ಟುಕೊಂಡು ಚರ್ಚೆಗೂ ಸಿದ್ಧವಾಗಿದೆ.

ಆದರೆ ಕರ್ನಾಟಕದ ಈ ಬೆಳವಣಿಗೆಯಿಂದ ಅಲರ್ಟ್ ಆಗಿರೋ ತಮಿಳುನಾಡು ಸರ್ಕಾರ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಮೇಕೆದಾಟು ಯೋಜನೆ ಬಗ್ಗೆ ತುರ್ತು ವಿಚಾರಣೆಗೆ ಮನವಿ ಮಾಡಿದೆ. ಮಾತ್ರವಲ್ಲ ಕರ್ನಾಟಕ ಸರ್ಕಾರಕ್ಕೆ ಮೇಕೆದಾಟು ಡಿಪಿಆರ್‌ ಬಗ್ಗೆ ಚರ್ಚೆ ಮಾಡದಂತೆ CWMAಗೆ ಸೂಚಿಸಿ ಎಂದು ಮನವಿ ಮಾಡಿಕೊಂಡಿದೆ. ಈಗಾಗಲೇ ತಮಿಳುನಾಡಿನ ಅರ್ಜಿ ಸುಪ್ರೀಂ ಕೋರ್ಟಿನಲ್ಲಿದೆ. ಆದರೆ ಕರ್ನಾಟಕದಲ್ಲಿ ಮೇಕೆದಾಟು ಯೋಜನೆ ವೇಗ ಪಡೆದುಕೊಳ್ಳುತ್ತಿದ್ದಂತೆ ತಮಿಳುನಾಡು ಸರ್ಕಾರ ಮತ್ತೆ ತುರ್ತು ವಿಚಾರಣೆಗೆ ಸುಪ್ರೀಂಗೆ ದುಂಬಾಲು ಬಿದ್ದಿದೆ. ಆದರೆ ಸೋಮವಾರ ಮತ್ತೆ ತುರ್ತು ವಿಚಾರಣೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಸುಪ್ರೀಂ ಗಂಭೀರವಾಗಿ ಪರಿಗಣಿಸಿದಂತಿಲ್ಲ. ಹೀಗಾಗಿ ಪ್ರಕರಣದ ವಿಚಾರಣೆಯನ್ನು ಜುಲೈ 19ರಂದು ವಿಚಾರಣೆ ನಡೆಸುವುದಾಗಿ ಹೇಳಿದೆ. ಇನ್ನೂ ತಮಿಳುನಾಡು ಸರ್ಕಾರ ಮತ್ತೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಆಗ್ರಹಿಸಿ ಇರುವುದರಿಂದ CWMA ಸಭೆ ತಡವಾಗುವ ಸಾಧ್ಯತೆ ಇದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಈಗಾಗಲೇ ಮೂರು ಬಾರಿ ಸಭೆ ಮುಂದೂಡಿಕೆ ಮಾಡಿದೆ.

ಇದೇ ತಿಂಗಳ 6 ರಂದು ನಡೆಯಬೇಕಿದ್ದ ಸಭೆಯೂ ಮುಂದೂಡಿಕೆಯಾಗಿತ್ತು. ಈಗ ಮತ್ತೆ ಸುಪ್ರೀಂ ವಿಚಾರಣೆ ಬಾಕಿ‌ ಇರೋದರಿಂದ ಮೇಕೆದಾಟು ಯೋಜನೆ ಮತ್ತಷ್ಟು ವಿಳಂಭ ಗೊಳ್ಳುವ ಸಾಧ್ಯತೆ ಇದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಚರ್ಚೆ ಆಗದೇ ಮೇಕೆದಾಟು ಡಿಪಿಆರ್ ಗೆ ಒಪ್ಪಿಗೆ ಸಿಗೋದಿಲ್ಲ. ಡಿಪಿಆರ್ ಒಪ್ಪಿಗೆ ಸಿಗದೆ ಮೇಕೆದಾಟು ಯೋಜನೆ ಆರಂಭ ಸಾಧ್ಯವಿಲ್ಲ. ಹೀಗಾಗಿ ಕರ್ನಾಟಕ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಸುಪ್ರೀಂ ಕೋರ್ಟ್ ವಿಚಾರಣೆಯಿಂದ ಮೇಕೆದಾಟು ಯೋಜನೆ ಡಿಪಿಆರ್ ಚರ್ಚೆ ಹಾಗೂ ಒಪ್ಪಿಗೆ ವಿಳಂಬಗೊಳ್ಳಲಿದ್ದು ಇದರಿಂದ ಮುಂಬರುವ ವಿಧಾನಸಬಾ ಚುನಾವಣೆ ಮುನ್ನವೇ ಯೋಜನೆ ಆರಂಭಿಸಿ ಚುನಾವಣೆಯಲ್ಲಿ ಮತ ಸೆಳೆಯೋ ಕನಸಿನಲ್ಲಿದ್ದ ಬಿಜೆಪಿ ಗೆ ಕೊಂಚ ಹಿನ್ನಡೆಯಾದಂತಾಗಿದೆ.

ಇದನ್ನೂ ಓದಿ : Red orange Alert : ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಮಳೆ: ರೆಡ್,ಆರೆಂಜ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

ಇದನ್ನೂ ಓದಿ : Cute Peacock : ಪ್ಲೀಸ್‌ ನನ್ನ ಫೋಟೋ ತೆಗಿಬೇಡಿ ! ಮುದ್ದಾಗಿ ನುಲಿದ ನವಿಲು !!!

Mekedatu DPR debate is also an obstacle: Tamil Nadu has again ascended to the Supreme Court

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular