Cute Peacock : ಪ್ಲೀಸ್‌ ನನ್ನ ಫೋಟೋ ತೆಗಿಬೇಡಿ ! ಮುದ್ದಾಗಿ ನುಲಿದ ನವಿಲು !!!

ಫೋಟೋ ಕ್ರೇಜ್‌ ಯಾರಿಗಿಲ್ಲ ಹೇಳಿ. ಯಾರನ್ನ ನೋಡಿದರೂ ಫೋಟೋ ತೆಗೆದುಕೊಳ್ಳುವವರೇ! ಇದಕ್ಕೇ ಸಾಕು ಪ್ರಾಣಿಗಳು ಹೊರತಾಗಿಲ್ಲ ಬಿಡಿ. ಮುದ್ದಿನ ಬೆಕ್ಕು ತನ್ನ ಒಡತಿಯೊಂದಿಗೆ ಹೇಗೆಲ್ಲಾ ಪೋಸ್‌ ಕೊಡುತ್ತದೆ ಅಲ್ಲವೇ? ಗಿಳಿ ಮಾತನಾಡುವುದನ್ನಂತೂ ಎಷ್ಟೋ ಸಲ ಕೇಳಿದ್ದೇವೆ. ಈಗ ಸ್ವಲ್ಪ ದಿನಗಳ ಹಿಂದೆ ಗಿಳಿ ತಮ್ಮ ಮನೆಗೆ ಬರುವವರಿಗೆ ಆದರಾತಿಥ್ಯ ಮಾಡಿದ್ದನ್ನೂ ಕೇಳಿದ್ದೇವೆ. ಆದರೆ ಇಲ್ಲೊಂದು ನವಿಲಿದೆ(Cute Peacock). ಫೋಟೋಕ್ಕೇ ಪೋಸೇ ಕೊಡಲ್ಲ ಅಂತಿದೆ. ಅದು ಹೇಗೆ ಮುದ್ದಾಗಿ ಬೇಡಾ ಅಂತಿದೆ!

ನವಿಲು ಯಾರಿಗಿಷ್ಟ ಇಲ್ಲ ಹೇಳಿ! ಗರಿ ಬಿಚ್ಚಿ ನರ್ತಿಸುವಾಗಲಂತೂ ವರ್ಣಿಸಲು ಸಾಧ್ಯವೇ ಇಲ್ಲ. ಅದರಿಂದಲೇ ನವಿಲು ಎಲ್ಲರನ್ನೂ ತನ್ನತ್ತ ಸೆಳೆಯುತ್ತದೆ. ಅತ್ಯಾಕರ್ಷಕ ಬಣ್ಣದಲ್ಲಿರುವ ನವಿಲನ್ನು ಕಂಡರೆ ಪೋಟೋ ತೆಗೆದುಕೊಳ್ಳುವ ಮನಸಾಗುವುದಿಲ್ಲವೇ? ಹಸಿರು, ನೀಲಿ, ಹಳದಿ, ಕೆಂಪು ಎಲ್ಲಾ ಬಣ್ಣಗಳಿಂದ ಕಂಗೊಳಿಸುವ ನವಿಲು ಎಷ್ಟೊಂದು ಆಕರ್ಷಕ ಅಲ್ಲವೇ?

ಅಂಚನ್‌ ಗೀತಾ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿರುವ ಈ ವಿಡಿಯೋದಲ್ಲಿ ಒಂದು ನವಿಲಿದೆ. ವಿಶೇಷ ಏನಂತೀರಾ? ಇದು ಬಹಳ ಮುದ್ದಾಗಿ ಮಾತಾಡ್ತಾ ಇದೆ. ಏನು ಅಂತೀರಾ? ‘ ಪ್ಲೀಸ್‌ ಫೋಟೊ ಬೇಡಾ’ ಅಂತಿದೆ. ಎಷ್ಟೊಂದು ವಿನಮ್ರವಾಗಿ ಹೇಳ್ತಿದೆ ಗೊತ್ತಾ? ಅದರ ಜೊತೆ ಪೋಟೋ ತೆಗೆದುಕೊಳ್ಳಬೇಕು ಎಂದು ಎಷ್ಟು ನಯವಾಗಿ ಬೇಡಿಕೊಂಡರೂ ಕೇಳ್ತಾನೇ ಇಲ್ಲ! ಎಷ್ಟು ಪ್ಲೀಸ್‌ ಅಂದ್ರೂನೂ ಕೆಳಗೆ ಹಾಕಿದ ಕತ್ತನ್ನ, ಎತ್ತು ಮೇಲೆ ನೋಡ್ಲಿಕ್ಕೂ ರೆಡಿ ಇಲ್ಲ! ಎಷ್ಟು ಬೇಡಿದರೂ ತಾನಂತೂ ಮುಖ, ಮೇಲೆ ಮಾಡಲ್ಲ ಅಂತಿದೆ ‘ನವಿಲು’! ನವಿಲು ಫೋಟೋ ಬೇಡ ಎಂದು ಹೇಳಿವ ರೀತಿಯೇ ಬಹಳ ಸೋಜಿಗವಾಗಿದೆ. ನೀವು ಒಮ್ಮೆ ವೀಡಿಯೋ ನೋಡ್ಕೊಂಡು ಬನ್ನಿ !!!

ಇದನ್ನೂ ಓದಿ : Smartphones to Launch : ಭಾರತದಲ್ಲಿ ಈ ವಾರ ಬಿಡುಗಡೆ ಮತ್ತು ಮಾರಾಟಕ್ಕೆ ಸಿದ್ಧವಾಗಿರುವ ಸ್ಮಾರ್ಟ್‌ಫೋನ್‌ಗಳು!!

ಇದನ್ನೂ ಓದಿ : OTT Release Movies: ಜುಲೈನಲ್ಲಿ ರಿಲೀಸ್ ಆಗಲಿರುವ ಒಟಿಟಿ ಚಿತ್ರಗಳು ಯಾವುವು ಗೊತ್ತಾ !

(Cute Peacock says please don’t take my photo)

Comments are closed.